More

    ಡಿಜಿಟಲ್ ವ್ಯವಹಾರದಿಂದ ಆರ್ಥಿಕ ಬೆಳವಣಿಗೆ

    ನರೇಗಲ್ಲ: ಪಟ್ಟಣದ ಸೆಂಟ್ರಲ್ ಕೋ-ಅಪರೇಟಿವ್ ಬ್ಯಾಂಕ್ ಹಾಗೂ ನಬಾರ್ಡ್ ಸಹಯೋಗದಲ್ಲಿ ಗುರುವಾರ ಬ್ಯಾಂಕಿನ ಆರ್ಥಿಕ ಹಾಗೂ ಡಿಜಿಟಲ್ ಸಾಕ್ಷರತಾ ಜಾಗೃತಿ ಕಾರ್ಯಕ್ರಮ ಜರುಗಿತು.
    ನೋಡಲ್ ಅಧಿಕಾರಿ ಎಂ.ಎಂ. ಪಾಟೀಲ ಮಾತನಾಡಿ, ಬ್ಯಾಂಕ್​ನಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಜನಸ್ನೇಹಿ ಕಾರ್ಯಕ್ರಮಗಳಾದ ಜನಧನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ, ಜೀವನ ಜ್ಯೋತಿ, ಫಸಲ್ ಬಿಮಾ, ಅಟಲ್ ಪಿಂಚಣಿ, ಸಮೃದ್ಧಿ ಯೋಜನೆಗಳಿವೆ. ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿ ಯೋಜನೆ, ಸ್ತ್ರೀ ಶಕ್ತಿ ಸಂಘಗಳಿಗೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
    ಗದಗ ಯುನಿಯನ್ ಸಿಇಒ ಸಿ.ಎಸ್. ಕರಿಯಪ್ಪನವರ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಭಾರತ ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳು, ಹಣಕಾಸು ವ್ಯವಹಾರಗಳ ವಿವಿಧ ಯೋಜನೆಗಳು, ವಿವಿಧ ಇಲಾಖೆಗಳಿಂದ ಸಿಗುವ ಸಬ್ಸಿಡಿ ಹಾಗೂ ಇತರ ಯೋಜನೆಗಳು ಗ್ರಾಮೀಣ ಜನರಿಗೆ ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನರು ಸಹ ಡಿಜಿಟಲ್ ವ್ಯವಹಾರ ಬಗ್ಗೆ ಆಸಕ್ತಿ ತೋರುತ್ತಿರುವುದು ದೇಶದ ಆರ್ಥಿಕತೆಯ ಬೆಳವಣಿಗೆಗೆ ಹೊಂದಿಕೊಳ್ಳುತ್ತಿರುವುದು ಆಶಾದಾಯಕವಾಗಿದೆ. ತಂತ್ರಜ್ಞಾನ ಬೆಳೆದಂತೆ ಅದರ ದುರುಪಯೋಗವು ಹೆಚ್ಚಾಗುತ್ತಿದ್ದು, ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
    ಶಾಖಾ ವ್ಯವಸ್ಥಾಪಕಿ ಅಕ್ಕಮ್ಮ ಪಾಟೀಲ, ಎ.ಬಿ. ನಾಯಕ, ಆರ್.ಎಚ್. ಕುಂಬಾರ, ಆರ್.ಸಿ. ಯಲಿಗಾರ, ಎಸ್.ಪಿ. ಬನ್ನಿಕೊಪ್ಪ, ಷಣ್ಮುಖಪ್ಪ ಸಿದ್ನೇಕೊಪ್ಪ, ವಿಜಯಕುಮಾರ ಯಡಿಯೂರಮಠ, ರಾಜಶೇಖರ ವಂಕಲಕುಂಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts