More

    ಡಿಎಪಿ ಅಭಾವ ಸೃಷ್ಠಿಯಾಗದಂತೆ ಕ್ರಮ ವಹಿಸಿ


    ಯಾದಗಿರಿ: ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಕಾರಿ ಕಚೇರಿ ಮುಂದೆ ರಾಜ್ಯ ರೈತ ಸಂಘ (ಹಸಿರು ಸೇನೆ)ದಿಂದ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಧ್ಯಕ್ಷ ಮಹೇಶ ಸುಬೇದಾರ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡ ದಿನದಿಂದ ಡಿಎಪಿ ರಸಗೊಬ್ಬರದ ಅಭಾವ ಎದುರಾಗಿದೆ. ಇದರಿಂದ ಹತ್ತಿ, ತೊಗರಿ ಮತ್ತು ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ. ಬೇಡಿಕೆಗೆ ತಕ್ಕಂತೆ ಡಿಎಪಿ ಬಂದಿದ್ದರೂ ರೈತರಿಗೆ ತಲುಪದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

    ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳು ಮೂಲಸೌಲಭ್ಯದ ಕೊರತೆ ಅನುಭವಿಸುತ್ತಿವೆ. ಕೃಷಿ ಸಲಕರಣೆಗಳು ಮತ್ತು ಯಂತ್ರೋಪಕರಣಗಳು ಕಳಪೆ ಮಟ್ಟದ್ದಾದ ಕಾರಣ ರೈತರಿಗೆ ಇವುಗಳಿಂದ ಏನೂ ಪ್ರಯೋಜನ ಸಿಗದಂತಾಗಿದೆ. ಕೃಷಿ ಇಲಾಖೆ ಅತ್ಯಂತ ದೊಡ್ಡ ಇಲಾಖೆ. ವಾಷರ್ಿಕ ಬಜೆಟ್ನಲ್ಲಿ ಸಕರ್ಾರ ಕೋಟಿಗಟ್ಟಲೇ ಅನುದಾನ ಮೀಸಲಿಟ್ಟರೂ ಅದು ಸದ್ಬಳಕೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    0ಒಂದು ಹೋಬಳಿಗೆ ಕನಿಷ್ಠ 4 ಭತ್ತದ ಕಟಾವು ಯಂತ್ರಗಳನ್ನು ಇಲಾಖೆ ಒದಗಿಸಬೇಕು. ಡಿಸಿಸಿ ಬ್ಯಾಂಕ್ನಿಂದ ಸಾಲಮನ್ನ ಆದ ರೈತರಿಗೆ ಕೂಡಲೇ ಸಾಲ ವಿತರಣೆ ಮಾಡಬೇಕು. ರಸಗೊಬ್ಬರದ ಅಭಾವವನ್ನೇ ಕೆಲ ವ್ಯಾಪಾರಸ್ಥರು ಬಂಡವಾಳ ಮಾಡಿಕೊಂಡು ಕಳಪೆ ಮಟ್ಟದ ಗೊಬ್ಬರ ವಿತರಿಸುತ್ತಿದ್ದಾರೆ. ಈ ಜಾಲವನ್ನು ಕಂಡು ಹಿಡಿಯಬೇಕು ಎಂದು ಆಗ್ರಹಿಸಿದರು.

    ಸೂರತ್-ಚನ್ನೈ ಆರು ಪಥ ರಸ್ತೆ ವಡಿಗೇರಾ ತಾಲೂಕಿನ ಹಲವು ಗ್ರಾಮಗಳ ಜಮೀನನ್ನು ಸ್ವಾನ ಪಡಿಸಿಕೊಳ್ಳುತ್ತಿದ್ದು, ವೈಜ್ಞಾನಿಕ ಬೆಲೆ ನೀಡದೆ ರೈತರಿಗೆ ವಂಚನೆ ಮಾಡುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿಮರ್ಾಣಗೊಂಡಿದೆ. ಸಕರ್ಾರ ಕೂಡಲೇ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಅನ್ನದಾತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts