More

    ಡಿಆರ್‌ಡಿಒಗೆ ವಿ.ವಿ.ಸಾಗರ ನೀರು ಪೂರೈಕೆ ಸ್ಥಗಿತಗೊಳಿಸಿ

    ಚಿತ್ರದುರ್ಗ: ಡಿಆರ್‌ಡಿಒಗೆ ಪೂರೈಸುವ ವಾಣಿವಿಲಾಸ ಸಾಗರ ನೀರನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಭದ್ರಾ ಮೇಲ್ದಂಡೆ ಯೋಜನೆಗಾಗಿ ಮುಂದುವರೆಸಿರುವ ಧರಣಿಯಲ್ಲಿ ಒತ್ತಾಯಿಸಿದರು.

    23ನೇ ದಿನಕ್ಕೆ ಧರಣಿ ಕಾಲಿಟ್ಟಿದ್ದು, ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಸ್ಪಂದಿಸದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

    ಪ್ರಧಾನಿ ನರೇಂದ್ರಮೋದಿ ಅವರು ಈ ಹಿಂದೆ ಚಿತ್ರದುರ್ಗಕ್ಕೆ ಬಂದ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕಾಯ್ದಿರಿಸಿರುವುದಾಗಿ ತಿಳಿಸಿದ್ದರು. ಆದರೆ, ವರ್ಷ ಕಳೆದರೂ ಬಿಡುಗೆಡೆಗೊಳಿಸಿಲ್ಲ. ಎಂಪಿ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದರೂ ಸಂಸದ ಎ.ನಾರಾಯನಸ್ವಾಮಿ ಅವರಿಂದ ಸಕರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಎಂದು ಬೇಸರಿಸಿದರು.

    50 ವರ್ಷಗಳಲ್ಲೇ ಅತ್ಯಂತ ಭೀಕರ ಬರವನ್ನು ಈ ಜಿಲ್ಲೆಯಲ್ಲೂ ಎದುರಿಸುತ್ತಿದ್ದೇವೆ. ಮಳೆ-ಬೆಳೆ ಇಲ್ಲದೆ ಕಂಗಾಲಾಗಿದ್ದೇವೆ. ಕೊಳವೆಬಾವಿಗಳು ಬತ್ತಿವೆ. ತೋಟಗಳೆಲ್ಲ ಒಣಗಲು ಆರಂಭಿಸಿವೆ. ಕುಡಿಯುವ ನೀರಿಗೂ ಆಹಾಕಾರ ಉಂಟಾಗಿದೆ. ನಮಗೆ ಯಾವುದೇ ನೀರಿನ ಮೂಲಗಳಿಲ್ಲ ಎಂದು ಅಳಲು ತೋಡಿಕೊಂಡರು.

    ಭದ್ರಾ ಮೆಲ್ದಂಡೆ ನೀರಾವರಿ ಯೋಜನೆಗೆ ಸಹಕರಿಸದ ಕಾರಣ 30 ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಬೆಳೆ ತೆಗೆಯಬಹುದಾದ ನೀರನ್ನು ಡಿಆರ್‌ಡಿಒಗೆ ಪೂರೈಸುತ್ತಿದ್ದು, ಅದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ, ಆ ಕಾರ್ಯ ರೈತರೇ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

    ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ, ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ಸತೀಶ್, ಬಸವರಾಜಪ್ಪ, ಎಚ್.ಡಿ.ಪುರ ಮಲ್ಲಿಕಾರ್ಜುನ್, ಜಯಣ್ಣ, ರಂಗಸ್ವಾಮಿ, ಚಂದ್ರಮೌಳಿ, ಇಂದೂಧರ, ಲೋಕಣ್ಣ, ಮಹಾದೇವಪ್ಪ, ರಾಜಪ್ಪ, ವಿಶ್ವನಾಥಪ್ಪ, ಸದಾಶಿವಪ್ಪ, ನಾಗರಾಜಚಾರ್, ಹರಳಯ್ಯ, ಅಜ್ಜಪ್ಪ, ಚಂದ್ರಪ್ಪ, ನಾಗಪ್ಪ, ತುಳಜಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts