More

    ಡಾ. ಸುಬ್ರಾಯ ಹೆಗಡೆಗೆ ಗ್ಲೋಬಲ್ ವಿಜನರಿ ಪ್ರಶಸ್ತಿ

    ಶಿರಸಿ: ತಾಲೂಕಿನ ಹಲಸನಹಳ್ಳಿ ಮೂಲದ ಡಾ. ಸುಬ್ರಾಯ ಹೆಗಡೆ ಅವರಿಗೆ ಗ್ಲೋಬಲ್ ವಿಜನರಿ ಪ್ರಶಸ್ತಿ ದೊರೆತಿದೆ.

    ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ನೀಡುವ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಗುರುವಾರ ಅಹಮದಾಬಾದಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ಹೆಗಡೆಯವರಿಗೆ ಜನ್ ವರ್ಲ್ಡ್ ಸಂಸ್ಥೆಯ ಚೇರ್ಮನ್ ನರೇನ್ ಷಾ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿಯನ್ನು ನರೇನ್ ಷಾ ಚೇರ್ಮನ್ ಆಫ್ ಗ್ಲೋಬಲ್ ವಿಜನ್

    ವರ್ಲ್ಡ್ ಹಾಗೂ ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿ ಸಂಸ್ಥೆಯವರು ನೀಡುತ್ತ ಬಂದಿದ್ದು, ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ 10 ಮಂದಿಯನ್ನು ಆಯ್ಕೆ ಮಾಡುತ್ತಾರೆ.

    ಉದಯಪುರ ಸಿಮೆಂಟ್ ವರ್ಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಡಾ. ಸುಬ್ರಾಯ ಹೆಗಡೆ ಅವರು ದಾಲ್ಮಿಯಾ ರಿಸರ್ಚ್ ಇನ್​ಸ್ಟಿಟ್ಯೂಟ್, ರಾಜಶ್ರೀ ಸಿಮೆಂಟ್, ಅಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್ ಸಿಮೆಂಟ್, ಲಫಾರ್ಜ್ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ದೇಶ, ವಿದೇಶಗಳಲ್ಲಿ ಸಿಮೆಂಟ್ ಪ್ಲಾಂಟ್ ನಿರ್ವಣದಲ್ಲೂ ಭಾಗಿಯಾಗಿದ್ದಾರೆ.

    ಇವರು 112 ಸಂಶೋಧನಾ ಪ್ರಬಂಧ ರಚಿಸಿದ್ದಾರೆ. ತಮ್ಮದೇ ಹೆಸರಿನಲ್ಲಿ 6 ಪೇಟೆಂಟ್ ಹೊಂದಿದ್ದಾರೆ. 2019ರಲ್ಲಿ ಜಾಗತಿಕ ಮಟ್ಟದ ಸಿಮೆಂಟ್ ನಿಯತಕಾಲಿಕೆಗಳಾದ ವರ್ಲ್ಡ್ ಸಿಮೆಂಟ್, ಇಂಟರ್ ನ್ಯಾಷನಲ್ ಸಿಮೆಂಟ್ ರಿವ್ಯೂ, ಕಾಂಕ್ರೀಟ್ ರಿಸರ್ಚ್ ಜರ್ನಲ್​ಗಳಲ್ಲಿ ಏಕಕಾಲದಲ್ಲಿ ಡೊಮೇನ್ ಎಕ್ಸ್​ಪರ್ಟ್ ಆಗಿ ಆಯ್ಕೆ ಆದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಹಸಲನಹಳ್ಳಿಯ ಬಾಲಚಂದ್ರ ಹಾಗೂ ಇಂದಿರಾ ಅವರ ಪುತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts