More

    ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಲೇಖಕಿ ಬಿ.ಟಿ.ಜಾಹ್ನವಿ ಆಯ್ಕೆ 

    ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2023-24ನೇ ಸಾಲಿನ ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ನಗರದ ಲೇಖಕಿ ಬಿ.ಟಿ.ಜಾಹ್ನವಿ ಆಯ್ಕೆಯಾಗಿದ್ದಾರೆ.
    ಡಾ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದ್ದು, ಬೆಂಗಳೂರಿನಲ್ಲಿ ಜ.31ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು 5 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ.
    ಮಾಜಿ ಶಾಸಕ ದಿ. ಡಾ. ಬಿ.ಎಂ. ತಿಪ್ಪೇಸ್ವಾಮಿ-ದಿ. ಯಲ್ಲಮ್ಮ ಪುತ್ರಿಯಾದ ಬಿ.ಟಿ.ಜಾಹ್ನವಿ, ಕತೆಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದುಕೊಂಡವಳು ಹಾಗೂ ಇತರೆ ಕತೆಗಳು, ಹುಡುಕಾಟ, ಕಳ್ಳುಬಳ್ಳಿ ಕಥಾ ಸಂಕಲನಗಳು ಹಾಗೂ ಮುಟ್ಟಿಸಿಕೊಂಡವರು- ಲೇಖನ ಸಂಗ್ರಹಗಳ ಕೃತಿಯನ್ನೂ ಹೊರತಂದಿದ್ದಾರೆ.
    ಕರ್ನಾಟಕ ನಾಟಕ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿ, ಎಚ್.ಎಸ್.ಸಾವಿತ್ರಮ್ಮ ದತ್ತಿ ಪ್ರಶಸ್ತಿ, ಡಾ. ವಿಜಯಾ ಸುಬ್ಬರಾವ್ ಸಾಹಿತ್ಯ ಪುರಸ್ಕಾರ, ಸರ್ ಎಂ.ವಿಶ್ವೇಶ್ವರಯ್ಯ ಇತರೆ ಪ್ರಶಸ್ತಿಗಳನ್ನು ಪಡೆದಿದ್ದಾರೆ.
    ‘ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ. ಇದರ ನಿರೀಕ್ಷೆ ಇರಲಿಲ್ಲ. ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿನ ಪುರಸ್ಕಾರ ನನಗೆ ದಕ್ಕಿರುವುದು ದೊಡ್ಡ ಗೌರವ ಎಂದು ಭಾವಿಸುತ್ತೇನೆ’ ಎಂದು ಜಾಹ್ನವಿ ಅನಿಸಿಕೆ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts