More

    ಡಾ.ರವಿ ಪಾಟೀಲ ಬಿರುಸಿನ ಪ್ರಚಾರ

    ಬೆಳಗಾವಿ: ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಕ್ಷೇತ್ರದಲ್ಲಿ ಮತಯಾಚನೆ ಮುಂದುವರಿಸಿದ್ದು, ಭಾನುವಾರವೂ ಬಿರುಸಿನ ಪ್ರಚಾರ ನಡೆಸಿದರು.

    ಶ್ರೀನಗರ ಶ್ರೀಸಾಯಿ ದೇವಸ್ಥಾನ ಹಾಗೂ ಆಂಜನೇಯ ನಗರದ ಗುರುದತ್ತ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪ್ರಚಾರದ ಸಂದರ್ಭದಲ್ಲಿ ಚಾ ಪೇ ಚರ್ಚಾ ನಡೆಸಿದರು. ಈ ವೇಳೆ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿ, ದೇಶದ ಸುರಕ್ಷತೆ, ದೇಶದ ಮೂಲ ಸಂಸ್ಕೃತಿ ಕಾಪಾಡುವುದಕ್ಕಾಗಿ ಬಿಜೆಪಿಗೆ ಮತ ನೀಡಬೇಕು. ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ಸಮಾಜದ ಪ್ರತಿಯೋಬ್ಬರೂ ಮತ ಚಲಾವಣೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ಮೇ 10ರಂದು ನಡೆಯುವ ಮತದಾನದಲ್ಲಿ ಪಾಲ್ಗೊಂಡು, ಬೆಳಗಾವಿ ಉತ್ತರದ ಬಿಜೆಪಿ ಅಭ್ಯರ್ಥಿಗೆ ನಿಮ್ಮ ಮತ ನೀಡಿ, ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

    ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೇಶದ ಜನರನ್ನು, ದೇಶದ ಮೂಲ ಸಂಸ್ಕೃತಿ ರಕ್ಷಿಸಲು ಅವಿರತ ಶ್ರಮ ವಹಿಸುತ್ತಿದ್ದಾರೆ. ಅವರ ಬಾಹುಗಳನ್ನು ಇನ್ನೂ ಬಲಪಡಿಸಬೇಕಾಗಿದೆ. ಆದಕಾರಣ ಮತದಾರರು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸಬೇಕು. ಮತದಾನದಿಂದ ಯಾರೂ ದೂರ ಉಳಿಯಬಾರದು ಎಂದು ಕೋರಿದರು.

    ಅದಕ್ಕೂ ಮೊದಲು ಸಾಯಿ ಮಂದಿರದಲ್ಲಿ ದರ್ಶನ ಪಡೆದು, ಆಂಜನೇಯ ನಗರದ ಶ್ರೀದತ್ತ ಮಂದಿರದಲ್ಲಿ ವಿಜಯದ ಸಂಕಲ್ಪ ಪೂಜೆ ಮಾಡಿ ಮತಯಾಚನೆ ನಡೆಸಿದರು. ಶ್ರೀನಗರದ ಹಲವು ಬಡಾವಣೆಗಳಿಗೆ ತೆರಳಿ ಮನೆ, ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಕಂಗ್ರಾಳ ಗಲ್ಲಿ, ಕಾಕತಿವೇಸ್ ರಸ್ತೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ರಸ್ತೆ, ಗೊಂಧಳಿ ಗಲ್ಲಿ, ಗವಳಿ ಗಲ್ಲಿ, ಗಣಾಚಾರಿ ಗಲ್ಲಿ, ರಿಸಾಲ್ದಾರ್ ಗಲ್ಲಿ, ನಾರ್ವೆಕರ ಗಲ್ಲಿ, ರಾಮದೇವ ಗಲ್ಲಿ, ಕೇಳ್ಕರ ಬಾಗ, ಖಡೇ ಬಜಾರ್ ರಸ್ತೆ, ಕಿರ್ಲೋಸ್ಕರ್ ರಸ್ತೆ, ಅನ್ಸುರಕರ್ ಗಲ್ಲಿ, ರಾಮಲಿಂಗಖಿಂಡ್ ಗಲ್ಲಿ, ಟಿಳಕಚೌಕಗಳಲ್ಲಿ ಬೆಳಗ್ಗೆ ಪ್ರಚಾರ ನಡೆಯಿತು. ಸಂಜೆ ಪಾಟೀಲ ಗಲ್ಲಿ, ಬಸವೇಶ್ವರ ಗಲ್ಲಿ, ಲಕ್ಷ್ಮೀ ಗಲ್ಲಿ, ಶಾಂತಿಸಾಗರ ಗಲ್ಲಿ, ಕರಬಿ ಗಲ್ಲಿ, ಕುಲಕರ್ಣಿ ಗಲ್ಲಿ, ಕಣಬರಗಿ ವಿವಿಧ ಪ್ರದೇಶಗಳಲ್ಲಿ ಮತಯಾಚಿಸಿದರು.

    ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ರಾಜಶೇಖರ ದೋಣಿ, ವಕೀಲರಾದ ವಿಜಯ ಪಾಟೀಲ, ಶ್ರೀನಗರ ನಿವಾಸಿಗಳಾದ ವಿರೂಪಾಕ್ಷ ದೊಡ್ಡಮನಿ, ಮಹಾಂತೇಶ ಹಿರೇಮಠ, ಉಮೇಶ ಕತ್ತಿ, ಮಹಾಂತೇಶ ಮೂಲಿಮನಿ, ಅರುಣ ಮರಾಠೆ ಇತರರಿದ್ದರು. ಡಾ. ರವಿ ಪಾಟೀಲ ಅವರಿಗೆ ಅನೇಕ ಸಂಘ-ಸಂಸ್ಥೆಗಳು, ಮಹಿಳಾ ಮಂಡಳಗಳು, ಆಟೋ ಚಾಲಕರ ಸಂಘಗಳು, ಕಲಾವಿದರ ಸಂಘಟನೆಗಳು, ಕೃಷಿಕರು, ಕಾರ್ಮಿಕರ, ವ್ಯಾಪಾರಸ್ಥರು, ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

    ಉತ್ತಮ ಜನಸ್ಪಂದನೆ: ಪ್ರಚಾರ ಕಾರ್ಯಕ್ಕೆ ಹಾಗೂ ಬಿಜೆಪಿ ಅಭ್ಯರ್ಥಿಗೆ ಭಾರಿ ಜನ ಸ್ಪಂದನೆ ದೊರೆಯುತ್ತಿದೆ. ಮತದಾರರು ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರನ್ನು ಆತ್ಮೀಯವಾಗಿ ಗೌರವದಿಂದ ಬರಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಚುನಾವಣೆಯಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶಿವಾಜಿ ನಗರದಲ್ಲಿ ಸ್ಥಳೀಯರೊಂದಿಗೆ ಚಚೆರ್

    ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಅವರು ಶಿವಾಜಿ ನಗರದಲ್ಲಿ ಕಾರ್ಯಕರ್ತರು ಹಾಗೂ ಸ್ಥಳೀಯರೊಂದಿಗೆ ಸಭೆ ನಡೆಸಿದರು. ಸಭೆಗೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ನಮನ ಸಲ್ಲಿಸಿದರು. ಕುಂದುಕೊರತೆ ಆಲಿಸಿ, ಮುಂಬರುವ ದಿನಗಳಲ್ಲಿ ಮೂಲ ಸೌಲಭ್ಯ ್ನ ಕಲ್ಪಿಸುವ ಭರವಸೆ ನೀಡಿದರು. ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ನಂತರ ಕೇಳ್ಕರ್ ಭಾಗದ ಸರ್ಜಿಕಲ್ ಶಾಪ್‌ನಲ್ಲಿ ಎಲ್ಲ ಉದ್ಯಮಿಗಳನ್ನು ಭೇಟಿ ಮಾಡಿ ಮತಯಾಚಿಸಿದರು. ಶಾಸಕ ಅನಿಲ ಬೆನಕೆ, ಬೆಳಗಾವಿ ಮಹಾನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುೇಂದ್ರಗೌಡ ಪಾಟೀಲ, ಸುನೀತಾ ಪಾಟೀಲ ಮತ್ತು ಮುಖಂಡರು, ಪದಾಧಿಕಾರಿಗಳು, ಮಹಿಳಾ ಮೋರ್ಚಾ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts