More

    ಡಾ.ಮಂಥರ್‌ಗೌಡ ಸೋಮವಾರಪೇಟೆಯವರು : ಕೊಡಗು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಹೇಳಿಕೆ

    ಕೊಡಗು : ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡ, ಸೋಮವಾರಪೇಟೆ ನಿವಾಸಿಯಾಗಿದ್ದಾರೆ. ಅವರು ಹೊರಗಿನವರು ಎಂದು ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಕೊಡಗು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.


    ಕಾಂಗ್ರೆಸ್ ವತಿಯಿಂದ ಪಟ್ಟಣದ ಜೇಸಿ ವೇದಿಕೆಯಲ್ಲಿ ಸೋಮವಾರ ಸೋಮವಾರ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.


    ಅಪ್ಪಚ್ಚು ರಂಜನ್ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನವರು, ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದವರು. ಇವರುಗಳು ವಲಸೆ ಅಭ್ಯರ್ಥಿಗಳಾಗಿ, ಬೇರೆಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು. ಸೋಮವಾರಪೇಟೆಯ ಕೊಡುಗೈದಾನಿ ಸಾಕಮ್ಮ ಅವರ ಮೊಮ್ಮಗ ಮಂಥರ್‌ಗೌಡ. ಅಪ್ಚಚ್ಚು ರಂಜನ್ ಅವರಿಗೆ ಭಯ ಪ್ರಾರಂಭವಾಗಿದೆ. ಅದಕ್ಕೆ ಅಮಿತ್‌ಷಾ ಅವರಿಂದ ರೋಡ್‌ಶೋ ಮಾಡಿದ್ದಾರೆ ಎಂದರು.


    ಎಲ್ಲ ಮಾಧ್ಯಮಗಳ ಸಮೀಕ್ಷೆಯಂತೆ ಕಾಂಗ್ರೆಸ್ 125 ಸ್ಥಾನಗಳನ್ನು ಪಡೆದು ಪ್ರಚಂಡ ಗೆಲವು ಸಾಧಿಸಲಿದೆ. ಬಿಜೆಪಿ 55 ಸ್ಥಾನಗಳನ್ನು ಪಡೆಯುವುದು ಕಷ್ಟವಾಗಿದೆ. ಕೊಡಗಿನಲ್ಲೂ ಎರಡು ಸ್ಥಾನಗಳನ್ನು ಪಡೆದು ಉಸ್ತುವಾರಿ ಸಚಿವ ಸ್ಥಾನವನ್ನು ಪಡೆಯಲಿದ್ದಾರೆ ಎಂದು ಹೇಳಿದರು.


    ಒಬ್ಬ ವ್ಯಕ್ತಿ 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರೂ ಜನರ ಮನಸ್ಸನ್ನು ಗೆಲ್ಲಲಿಲ್ಲ. ಕ್ಷೇತ್ರದ ಹಲವಾರು ಹಳ್ಳಿ ಹಳ್ಳಿಗೂ ಕಾಲಿಡದೆ ಇರುವುದು ವಿಪರ್ಯಾಸ. ಅಭಿವೃದ್ಧಿ ಮಾಡಿದ್ದರೆ ಹಳ್ಳಿಗಳಲ್ಲಿ ಚುನಾವಣಾ ಬಹಿಷ್ಕಾರ ಏಕೆ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.


    ಅಪ್ಪಚ್ಚು ರಂಜನ್ ಅವರು ತಮ್ಮ ಮಕ್ಕಳ ವೈದ್ಯಕೀಯ ಸೇವೆಯನ್ನು ದೂರದ ಅಮೆರಿಕಾಕ್ಕೆ ಮೀಸಲಿಟ್ಟಿದ್ದಾರೆ. ನಾನು ಕರ್ನಾಟಕದಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದೇನೆ. ವೈಯಕ್ತಿಕ ಟೀಕೆಯನ್ನು ಮಾಡುವುದು ಶಾಸಕ ಅಪ್ಪಚ್ಚು ರಂಜನ್ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹುದಲ್ಲ ಎಂದರು.
    ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ಮುಖಂಡರಾದ ಕೆ.ಎಂ. ಲೋಕೇಶ್, ಮಿಥುನ್ ಹಾನಗಲ್, ಕೆ.ಪಿ. ಚಂದ್ರಕಲಾ, ಅನಂತ್ ಕುಮಾರ್, ಕೆ.ಎ. ಯಾಕೂಬ್, ಶಾಂತವೇರಿ ವಸಂತ್, ಹಣಕೋಡು ಸುರೇಶ್, ಎಚ್.ಎ.ನಾಗರಾಜ್, ಹರಪಳ್ಳಿ ರವೀಂದ್ರ, ಎಸ್.ಎಂ.ಚಂಗಪ್ಪ, ಈಶ್ವರ ಚಂದ್ರ ಸಾಗರ್ ಮತ್ತಿತರರು ಇದ್ದರು. ಇದೇ ಸಂದರ್ಭ ಬಿಜೆಪಿ, ಜೆಡಿಎಸ್‌ನ ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts