More

    ಡಾ.ಬಿ.ಸಿ.ರಾಯ್ ಸೇವೆ ಸ್ಮರಣೀಯ

    ಹೊಳೆನರಸೀಪುರ: ಡಾ.ಬಿ.ಸಿ.ರಾಯ್ ಅವರ ಜನ್ಮದಿನವನ್ನು ವೈದ್ಯರ ದಿನವನ್ನಾಗಿ ಆಚರಿಸುವ ನಾವು ಅವರ ತತ್ವ, ಆದರ್ಶಗಳನ್ನು ಪಾಲನೆ ಮಾಡಬೇಕಿದೆ ಎಂದು ಹೃದ್ರೋಗ ತಜ್ಞ ಡಾ.ನಟರಾಜ್ ತಿಳಿಸಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ರತ್ನ ದಿ.ಡಾ.ಬಿ.ಸಿ.ರಾಯ್ ಅವರು ಪೂಜ್ಯ ಮಹಾತ್ಮಗಾಂಧಿಜೀ, ಸುಭಾಷ್‌ಚಂದ್ರ ಬೋಸ್ ಹಾಗೂ ದೇಶದ ಮಹಾನ್ ನಾಯಕರ ಒಡನಾಟದ ಜತೆಗೆ ಅವರಿಗೆ ಚಿಕಿತ್ಸೆ ನೀಡುವ ಮೂಲಕ ದೇಶ ಸೇವೆಯನ್ನು ಮಾಡಿದ ಶ್ರೇಷ್ಠ ವೈದ್ಯರು ಎಂದು ಅವರ ಸೇವೆಯನ್ನು ಸ್ಮರಿಸಿದರು.
    ಜಿಲ್ಲಾ ಆರೋಗ್ಯಧಿಕಾರಿ ಡಾ.ಶಿವಸ್ವಾಮಿ, ತಾಲೂ ಆರೋಗ್ಯಾಧಿಕಾರಿ ಡಾ.ರಾಜೇಶ್, ಆಡಳಿತ ವ್ಯದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ಮಾತನಾಡಿದರು.

    ಡಾ.ಅನಿತಾ, ಡಾ.ಮಾಲಿನಿಗೆ ಪ್ರಶಸ್ತಿ: ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ.ಅನಿತಾ ಹಾಗೂ ಡಾ.ಮಾಲಿನಿ ದಿನೇಶ್ ಅವರಿಗೆ ಭಾರತ ರತ್ನ ದಿ. ಡಾ.ಬಿ.ಸಿ.ರಾಯ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ವೈದ್ಯರು, ದ್ವಿತೀಯ ಪಿಯು, ಎಸ್‌ಎಸ್‌ಎಲ್‌ಸಿ, ಡಿಗ್ರಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

    ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹರೀಶ್, ಮಲೇರಿಯಾ ವಿಭಾಗದ ವೈದ್ಯಾಧಿಕಾರಿ ಡಾ.ನಾಗಪ್ಪ, ವೈದ್ಯಾಧಿಕಾರಿ ಎಚ್.ಕೆ.ರಮೇಶ್, ಶಸ್ತ್ರಚಿಕಿತ್ಸಕರಾದ ಡಾ.ವಿನಯ್‌ಕುಮಾರ್, ಡಾ.ಪ್ರತಿಭಾ, ಡಾ.ಅಮೀನ, ಡಾ. ನಾಗೇಂದ್ರ, ಡಾ.ವಿಜಯಕುಮಾರ್, ಡಾ.ಧನಶೇಖರ್, ಡಾ.ದಿನೇಶ್, ಡಾ.ಅಶ್ವಥಿ ಕುಮಾರಿ, ಡಾ.ರವಿತೇಜ, ಡಾ.ಸತೀಶ್, ಡಾ.ಲೊಕೇಶ್, ಡಾ.ಭಾಗ್ಯಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts