More

    ಡಾ.ಕೋರೆ ಜೀವಮಾನ ಸಾಧನೆ

    ಬೆಳಗಾವಿ: ದೂರದೃಷ್ಟಿಯ ನಾಯಕ, ಶಿಕ್ಷಣ ಪ್ರೇಮಿ, ದಕ್ಷ ಆಡಳಿತಗಾರ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಶಿಕ್ಷಣ, ಸಹಕಾರ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಮಾಡಿರುವ ಅನುಪಮ ಸೇವೆಯನ್ನರಿಸಿ, ಒಲಿದು ಬಂದಿರುವ ಪ್ರಶಸ್ತಿಗಳ ಸಂಖ್ಯೆ ಈಗ 25ಕ್ಕೇರಿದೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2006ರಲ್ಲಿ ಬೆಳಗಾವಿಗೆ ಆಗಮಿಸಿ, ಪ್ರಶಸ್ತಿ ನೀಡಿ ಗೌರವಿಸಿದ್ದು, ಡಾ.ಕೋರೆ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

    ಶಿಕ್ಷಣ, ಆರೋಗ್ಯ ಮತ್ತು ಸಹಕಾರ ಕ್ಷೇತ್ರಕ್ಕೆ ತಮ್ಮದೆಯಾದ ಅತ್ಯಮೂಲ್ಯ ಕೊಡುಗೆ ನೀಡಿರುವುದಕ್ಕಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯೂ ಡಾ.ಪ್ರಭಾಕರ ಕೋರೆ ಅವರಿಗೆ 1 ಲಕ್ಷ ರೂ. ನಗದು ಸಹಿತ ವೀರಭದ್ರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ದೆಹಲಿಯ ರಾಷ್ಟ್ರೀಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನಿರ್ದೇಶಕರಾಗಿ ಅನುಪಮ ಸೇವೆ ಮಾಡಿರುವುದಕ್ಕಾಗಿ ದಿ.ಡೆಕ್ಕನ್ ಶುಗರ್ ಟೆಕ್ನಾಲಾಜಿಸ್ಟ್ ಅಸೋಸಿಯೇಷನ್ ಇಂಡಿಯಾ ಸಂಸ್ಥೆಯೂ ಸಕ್ಕರೆ ಉದ್ಯೋಗ ಗೌರವ ಪುರಸ್ಕಾರ ನೀಡಿ ಗೌರವಿಸಿದೆ. ಅವರು ಚಿಕ್ಕೋಡಿಯ ಬಸಪ್ರಭು ಸಹಕಾರಿ ಸಕ್ಕರೆ ಕಾರ್ಖಾನೆಯ ಮಾರ್ಗದರ್ಶಕರಾಗಿ, ಶಿವಶಕ್ತಿ ಶುಗರ್ಸ್‌ನ ಮಾಲೀಕರಾಗಿ ಸಕ್ಕರೆ ಉದ್ಯಮದಲ್ಲಿ ಮಾಡಿರುವ ಸೇವೆಗಾಗಿ ಈ ಪ್ರಶಸ್ತಿ ಲಭಿಸಿದೆ.

    ಬೆಳಗಾವಿ ಅಧಿವೇಶನದ ಸೂತ್ರಧಾರಿ: 2003ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಈಗ ಪ್ರತಿವರ್ಷ ಸುವರ್ಣ ವಿಧಾನಸೌದಲ್ಲಿ ನಡೆಯುವ ಚಳಿಗಾಲ ಅಧಿವೇಶನ ಸೂತ್ರಧಾರಿ ಪ್ರಭಾಕರ ಕೋರೆ ಅವರು. 2006ರಲ್ಲಿ ಮೊಟ್ಟಮೊದಲ ಬಾರಿಗೆ ಜೆಎನ್‌ಎಂಸಿ ಆವರಣದಲ್ಲಿ(ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಅವಧಿಯಲ್ಲಿ)ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸುವುದರ ಮೂಲಕ ಐತಿಹಾಸಿಕ ಅಧಿವೇಶನಕ್ಕೆ ನಾಂದಿ ಹಾಡಿದ್ದರು. ಅಲ್ಲದೆ, 2011ರಲ್ಲಿ ಅದ್ದೂರಿಯಾಗಿ 2ನೇ ವಿಶ್ವಕನ್ನಡ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸಿದ್ದರಿಂದ ಕನ್ನಡ ನಾಡಿನ ಕೀರ್ತಿ ವಿಶ್ವದೆಲ್ಲೆಡೆ ಹಬ್ಬಿತ್ತು. 2016ರಲ್ಲಿ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿ, ಶಿಕ್ಷಣ ಕ್ರಾಂತಿ ಮಾಡಿದ ಸಂಸ್ಥೆಯ ಹೆಸರು ಸಪ್ತಸಾಗರದಾಚೆ ಪಸರಿಸಿತ್ತು. ಕೆಎಲ್‌ಇ ಸಂಸ್ಥೆಯ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಮೂರು ಬಾರಿ(1990-1996, 2008-2014 ಮತ್ತು 2014-2020)ರಾಜ್ಯಸಭಾ ಸದಸ್ಯರಾಗಿ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ (2001-2008)ಕಾರ್ಯನಿರ್ವಹಿಸಿರುವ ಡಾ.ಪ್ರಭಾಕರ ಕೋರೆ ಅವರು, ರಾಜಕಾರಣದಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದು ಅಪಾರ ಗೆಳೆಯರ ಬಳಗ ಹೊಂದಿದ್ದಾರೆ.

    ಅಂತಾರಾಷ್ಟ್ರೀಯ ಸಂಸ್ಥೆಗಳಿಂದಲೂ ಗೌರವ

    ಉತ್ತರ ಅಮೆರಿಕ ವೀರಶೈವ ಸಮಾಜವು ಕೋರೆ ಅವರಿಗೆ 2003ರಲ್ಲಿಯೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. 2004ರಲ್ಲಿ ಮುಂಬೈನ ಗೆಂಟ್ಸ್ ಇಂಟರ್‌ನ್ಯಾಷನಲ್ ಗ್ರೂಪ್ ಅತ್ಯುತ್ತಮ ಶಿಕ್ಷಣತಜ್ಞ ಪ್ರಶಸ್ತಿಯನ್ನು ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ನೀಡಿ ಗೌರವಿಸಿದ್ದರು. ಭಾರತೀಯ ಸಕ್ಕರೆ ತಂತ್ರಜ್ಞರ ಸಂಘಟನೆಯೂ(ಎಸ್‌ಟಿಎಐ-2017)ರಲ್ಲಿ ಸಕ್ಕರೆ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2013ರಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ದಲ್ಲಿ ಟಾಟಾ ಸಮೂಹದ ಮಾಲೀಕ ರತನ ಟಾಟಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕೋರೆ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಒಟ್ಟಿನಲ್ಲಿ ಡಾ.ಕೋರೆ ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಿದು ಬಂದಿರುವ ಪ್ರಶಸ್ತಿಗಳ ಸಂಖ್ಯೆ ಈಗ 25ಕ್ಕೇರಿದೆ.

    ನಾಲ್ಕು ಗೌರವ ಡಾಕ್ಟರೇಟ್

    ಕರ್ನಾಟಕ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಅಮೆರಿಕ ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಹಾಗೂ ಮಲೇಷ್ಯಾ ಯುಎಸ್ ವಿವಿಯಿಂದ ಡಾಕ್ಟರ್ ಆಫ್ ಎಜುಕೇಶನ್ ಸೇರಿ ನಾಲ್ಕು ಗೌಡಾ ಪದವಿಗಳಿಗೆ ಭಾಜನಾಗಿದ್ದಾರೆ. ಜೆಫರಸ್‌ನ ವಿವಿಯಿಂದ ಗೌಡಾ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ. ಪ್ರಭಾಕರ ಕೋರೆ ಪಾತ್ರರಾಗಿದ್ದು, ಯುಎಸ್‌ಎಂ (ಮಲೇಷ್ಯಾ) ವಿವಿಯಿಂದ ಗೌರವ ಪಡೆದ 2ನೇ ಭಾರತೀಯ ಪ್ರಜೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts