More

    ಡಬಲ್ಸ್‌ನಲ್ಲಿ ವಿಜಯ, ನಾಗರಾಜಗೆ ಗೆಲುವು

    ಬೈಲಹೊಂಗಲ, ಬೆಳಗಾವಿ: ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡ ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಯ 45 ಮೇಲ್ಪಟ್ಟ ವಯೋಮಿತಿ ಡಬಲ್ಸ್ ಆಟದಲ್ಲಿ ಪಟ್ಟಣದ ವಿಜಯ ಮೆಟಗುಡ್ಡ, ನಾಗರಾಜ ಮಹಾಂತಶೆಟ್ಟಿ ಜೋಡಿ, ಗದಗದ ಶ್ರೀನಿವಾಸ ಬದಿ, ದಾವಣಗೆರೆಯ ಅನಿಲ ಜೋಡಿಯನ್ನು 7-5 ಅಂತರಿದಿಂದ ಸೋಲಿಸಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

    ಪಟ್ಟಣದ ವಿಜಯ ಸೋಷಿಯಲ್ ಕ್ಲಬ್ ಹಾಗೂ ಟೆನ್ನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಮೂರು ದಿನಗಳವರೆಗೆ ವಿಜಯ ಸೋಶಿಯಲ್ ಕ್ಲಬ್, ಕಲ್ಪವೃಕ್ಷ ಶಾಲೆ ಆವರಣದ ಟೆನ್ನಿಸ್ ಕೋಟ್‌ನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೊನಲು-ಬೆಳಕಿನ ಟೆನ್ನಿಸ್ ಪಂದ್ಯಾವಳಿಗಳಲ್ಲಿ ರಾಜ್ಯದ ಮೂಲೆ, ಮೂಲೆಗಳಿಂದ 350 ಆಟಗಾರರು ಪ್ರದರ್ಶನ ನೀಡಿ, ಟೆನ್ನಿಸ್ ಪ್ರೇಮಿಗಳನ್ನು ರಂಜಿಸಿದರು. ಓಪನ್ ಸಿಂಗಲ್ಸ್‌ನಲ್ಲಿ ಧಾರವಾಡದ ಅಮರ, ಬೆಂಗಳೂರಿನ ಅನೂಷ ಆನಂದ ಅವರನ್ನು 7-2 ಅಂತರದಿಂದ ಸೋಲಿಸಿದರು. ಓಪನ್ ಡಬಲ್ಸ್‌ನಲ್ಲಿ ದಾವಣಗೆರೆಯ ಬಸವ ಮತ್ತು ಅಮರ ಜೋಡಿ ಬೆಂಗಳೂರಿನ ರಾಜು ಎಂ. ಮತ್ತು ಸಿದ್ದು ಬಿರಾದಾರ ಅವರನ್ನು ಸೋಲಿಸಿದರು.

    35ರ ವಯೋಮಿತಿ ಸಿಂಗಲ್ಸ್‌ನಲ್ಲಿ ಗೋಕಾಕದ ರವಿ ಖೋತ ದಾವಣಗೆರೆಯ ವಿಶಾಲ ಸರವಿ ಅವರನ್ನು ಸೋಲಿಸಿದರು. ಡಬಲ್ಸ್‌ನಲ್ಲಿ ದಾವಣಗೆರೆಯ ಅನಿಲ ಮತ್ತು ವಿನಯ ದಾವಣಗೆರೆಯ ರುದ್ರೇಶ ಮತ್ತು ಡಾ.ಅಶೋಕ ಅವರ ಜೋಡಿಯನ್ನು ಸೋಲಿಸಿದರು. 45 ವಯೋಮಿತಿಯ ಸಿಂಗಲ್ಸ್‌ನಲ್ಲಿ ಸಿಂಧನೂರಿನ ಖ್ಯಾತ ಹಿರಿಯ ಟೆನ್ನಿಸ್ ಆಟಗಾರ ಸಿ.ಟಿ. ಪಾಟೀಲ ಅವರು ದಾವಣಗೆರೆಯ ಡಾ.ಅಶೋಕ ಅವರನ್ನು ಸೋಲಿಸಿದರು.

    60 ವಯೋಮಿತಿ ಡಬಲ್ಸ್‌ನಲ್ಲಿ ಧಾರವಾಡದ ನಾಗರಾಜ ಅಂಬಲಿ ಮತ್ತು ಸಂತೋಷ ಶೆಟ್ಟಿ ಜೋಡಿ ಸಿಂಧನೂರಿನ ಗುರುಪಾದಯ್ಯ ಮತ್ತು ಜೋಸೆಫ್ ಕುಮಾರ ಜೋಡಿಯನ್ನು ಸೋಲಿಸಿದರು. ನಿರ್ಣಾಯಕರಾಗಿ ಮೈಸೂರಿನ ಕೆ.ಮಧುಕರ, ದಾವಣಗೆರೆಯ ಮಹಾಂತೇಶ ಮತ್ತು ಮಸ್ಕಿಯ ಮಂಜು ಪಲ್ಲೇದ ಕಾರ್ಯನಿರ್ವಹಿಸಿದರು.

    ವಿಜೇತ ಅಟಗಾರರಿಗೆ ಮಾಜಿ ಶಾಸಕ ಜಗದೀಶ ಮಟಗುಡ್ಡ, ಉದ್ಯಮಿ ಬಾಬಣ್ಣ ಢಮ್ಮಣಗಿ, ವಿಜಯ ಸೋಶಿಯಲ್ ಕ್ಲಬ್ ಅಧ್ಯಕ್ಷ ಬಿ.ಎಸ್. ಕಿವಡಸಣ್ಣವರ, ಕಾರ್ಯದರ್ಶಿ ಬಾಬು ಹರಕುಣಿ, ಬಸವರಾಜ ತಟವಾಟಿ, ಎಸ್.ಸಿ. ಮೆಟಗುಡ್ಡ, ಡಾ.ಬಿ.ಎಚ್. ಮೆಟಗುಡ್ಡ ಡಾ.ಐಜಾಜ ಬಾಗೇವಾಡಿ, ನ್ಯಾಯವಾದಿ ಅಶೋಕ ಮೂಗಿ, ಸಿಪಿಐ ಉಳವಪ್ಪ ಸಾತೆನಹಳ್ಳಿ, ರವಿ ತುರಮರಿ ಹಾಗೂ ಗಣ್ಯರು ಟ್ರೋಪಿ ವಿತರಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts