More

    ಠೇವಣಿ ಹೆಚ್ಚಳಕ್ಕೆ ಆದ್ಯತೆ ನೀಡಿ

    ರಮೇಶ ಕತ್ತಿ ಸಲಹೆ ಪಿಕಾರ್ಡ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
    ಹುಕ್ಕೇರಿ: ಇಲ್ಲಿನ ಹುಕ್ಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಕಾರ್ಡ್) ನೂತನ ಅಧ್ಯಕ್ಷರಾಗಿ ದುರದುಂಡಿ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಪ್ರಮೋದ ಕುಲಕರ್ಣಿ ಅವರು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಅವಿರೋಧ ಆಯ್ಕೆಯಾದರು.


    ಪಟ್ಟಣದ ಬ್ಯಾಂಕ್ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆಯಾದವರನ್ನು ಸತ್ಕರಿಸಿ ಮಾತನಾಡಿದ ರಮೇಶ ಕತ್ತಿ, ತಾಲೂಕಿನ ರೈತರು ಹಾಗೂ ಬಡವರಿಗೆ ಆರ್ಥಿಕ ಅನುಕೂಲವಾಗುವ ದೃಷ್ಟಿಯಿಂದ ಸ್ಥಾಪಿತವಾದ ಪಿ.ಎಲ್.ಡಿ ಬ್ಯಾಂಕ್ ಸಾಕಷ್ಟು ಏರಿಳಿತ ಕಂಡಿದೆ. ಈ ಮಧ್ಯೆ ರಾಜ್ಯದ ಭೂ ಅಭಿವದ್ಧಿ ಬ್ಯಾಂಕ್ ಅನುಸರಿಸುವ ಆರ್ಥಿಕ ನೀತಿಯಿಂದ ಈ ಬ್ಯಾಂಕ್ ಹಾನಿ ಅನುಭವಿಸುವಂತಾಗಿದೆ. ಇನ್ನು ಮುಂದಾದರೂ ಬಾಕಿ ಸಾಲವನ್ನು ಕಡ್ಡಾಯವಾಗಿ ವಸೂಲಿ ಮಾಡುವ ಜತೆಗೆ ಆರ್ಥಿಕ ಹಿಡಿತಕ್ಕಾಗಿ ಚಿಕ್ಕಪುಟ್ಟ ಸೋರಿಕೆ ಆಗದಂತೆ ಆಡಳಿತ ಮಂಡಳಿ ಗಮನಿಸಬೇಕು. ಠೇವಣಿ ಹೆಚ್ಚಿಸಲು ಆದ್ಯತೆ ನೀಡಬೇಕು. ಠೇವಣಿದಾರರ ಹಿತ ಮತ್ತು ಹಣ ಕಾಪಾಡಲು ನಿಸ್ವಾರ್ಥ ಸೇವೆ ಅವಶ್ಯ ಎಂದರು.


    ಬ್ಯಾಂಕ್ ನಿರ್ದೇಶಕರಾದ ಬಾಳಾಸಾಹೇಬ ನಾಯಿಕ, ರಾಹುಲ ಮುಂಗರವಾಡಿ, ಅಪ್ಪಾಸಾಹೇಬ ಸಂಕನ್ನವರ, ಚನ್ನಪ್ಪ ಕೋರಿ, ಶಂಕರ ಗೋಟೂರಿ, ಬಸಗೌಡ ಪಾಟೀಲ, ರಾಚಯ್ಯ ಹಿರೇಮಠ, ಶೀತಲ ಬ್ಯಾಳಿ, ಸುಶೀಲಾ ಕೋರಿ, ಸುನೀತಾ ಬೆಣಿವಾಡ, ಗುರಪ್ಪ ತಳವಾರ,
    ಅಡಿವೆಪ್ಪ ನಾಯಿಕ, ಪರಗೌಡ ಪಾಟೀಲ ಹಾಗೂ ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಹಿರಾ ಶುಗರ್ಸ್‌ ನಿರ್ದೇಶಕರಾದ ಬಸವರಾಜ ಮರಡಿ, ಸುರೇಶ ದೊಡ್ಡಲಿಂಗನವರ, ಬಿಜೆಪಿ ರೈತ ಮೋರ್ಚಾ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts