More

    ಟೀಮ್ ಸಂಜೀವಿನಿಯಿಂದ ಆರೋಗ್ಯ ಸೇವೆ

    ಶಿರಸಿ: ಕೋವಿಡ್-19 ಲಾಕ್​ಡೌನ್ ಆದೇಶದಿಂದ ಆರೋಗ್ಯ ಸಮಸ್ಯೆಗೆ ಒಳಗಾದ ಜನರಿಗೆ ಸ್ಕೊಡ್​ವೆಸ್​ನ ಸಂಸ್ಥೆಯ ಟೀಮ್ ಸಂಜೀವಿನಿ ಬೈಕ್-ಸಂಚಾರ ಆರೋಗ್ಯ ಘಟಕಗಳು ನೀಡುತ್ತಿರುವ ಸೇವೆಗಳು ಜನರ ಪ್ರಶಂಸೆಗೆ ಒಳಗಾಗಿದೆ. ಲಾಕ್​ಡೌನ್ ನಿಷೇಧಾಜ್ಞೆಯಿಂದ ಆಸ್ಪತ್ರೆಗಳಿಗೆ ಹೊಗಲಾಗದ ಕೂಲಿ ಕಾರ್ವಿುಕರು, ವೃದ್ಧರು, ಗರ್ಭಿಣಿ ಮಹಿಳೆಯರು, ಆರೋಗ್ಯ ಅನುಸರಣಾ ಸೇವೆಯ ಅವಶ್ಯಕತೆ ಇರುವ ರೋಗಿಗಳ ಸಮಸ್ಯೆಗಳಿಗೆ ನೇರವಾಗುವ ಉದ್ದೇಶದಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭಿಸಲಾದ ಬೈಕ್-ಸಂಚಾರ ಆರೋಗ್ಯ ಘಟಕಗಳು ಇಂದು ಬಡವರ ಸಂಜೀವಿನಿ ಆಗಿ ಕಾರ್ಯನಿರ್ವಹಿಸುತ್ತಿದೆ. ದಿನನಿತ್ಯ ಸರಾಸರಿ 25 ರಿಂದ 40 ಕರೆಗಳನ್ನು ಸ್ವಿಕರಿಸಲಾಗುತ್ತಿದ್ದು, 20-25 ರೋಗಿಗಳಿಗೆ ಉಪಚಾರ ನೀಡಲಾಗುತ್ತಿದೆ.

    ಗ್ರಾಮಾಂತರ ಪ್ರದೇಶಗಳಿಗೆ ಸೇವೆ ವಿಸ್ತರಣೆ: ಆಸ್ಪತ್ರೆಗಳಿಗೆ ಹೋಗಲಾಗದ ನಗರದ ಹಿಂದುಳಿದ ಪ್ರದೇಶಗಳ ಜನರಿಗಾಗಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಈ ಬೈಕ್-ಸಂಚಾರ ಆರೋಗ್ಯ ಘಟಕಗಳ ಸಹಾಯವಾಣಿ ಕೇಂದ್ರಕ್ಕೆ ಗ್ರಾಮೀಣ ಪ್ರದೇಶಗಳಿಂದ ಕರೆಗಳು ಬರುತ್ತಿದ್ದು, ಬೇಡಿಕೆ ಹೆಚ್ಚಿದ್ದರಿಂದ ಸಾಧ್ಯವಿರುವ ವ್ಯವಸ್ಥೆಯಲ್ಲಿ ಈ ಸೇವೆಯನ್ನು ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಲಾಗಿದೆ ಎಂದು ಸ್ಕೊಡ್​ವೆಸ್​ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ತಿಳಿಸಿದ್ದಾರೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts