More

    ಟಾಸ್ಕ್​ಪೋರ್ಸ್ ನಿರ್ಣಯಕ್ಕೆ ಸಹಕರಿಸಿ

    ಅಳ್ನಾವರ: ಸರ್ಕಾರ ಲಾಕ್​ಡೌನ್ ಸಡಿಲá-ಗೊಳಿಸಿದ್ದು, ಜನರು ದುರá-ಪಯೋಗ ಪಡಿಸಿಕೊಳ್ಳಬಾರದು. ಕೃಷಿ ಚಟುವಟಿಕೆ, ಕೂಲಿ ಕಾರ್ವಿುಕರ ಕೆಲಸಗಳಿಗೆ ಹಾಗೂ ರೋಗಿಗಳ ಚಿಕಿತ್ಸೆಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಸರ್ಕಾರದ ನಿಯಮಗಳನ್ನು ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಟಾಸ್ಕ್​ಪೋರ್ಸ್ ಸಮಿತಿ ಕೈಗೊಳ್ಳುವ ನಿರ್ಣಯಕ್ಕೆ ಸಾರ್ವಜನಿಕರು ಸಹಕರಿಸಬೇಕು. ಕೇಂದ್ರ ಸರ್ಕಾರ ಬಿಡá-ಗಡೆಗೊಳಿಸಿದ ಪಡಿತರ ಧಾನ್ಯಗಳು ಎಲ್ಲ ಕುಟುಂಬಗಳಿಗೂ ತಲá-ಪುವಂತೆ ಗಮನ ಹರಿಸಬೇಕು. ಮಾಸಾಶನ ಹಣ ವಿತರಣೆಯಲ್ಲಿ ಗೊಂದಲವಾಗದಂತೆ ಅರ್ಹರಿಗೆ ದೊರಕಿಸಬೇಕು. ಹುಲಿಕೇರಿ ಕೆರೆಯ ಡ್ಯಾಂ, ಡೌಗಿ ನಾಲೆ, ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ ಕಾಮಗಾರಿಗಳನ್ನು ಶೀಘ್ರವಾಗಿ ನಡೆಸಬೇಕು. ಸರ್ಕಾರವು ರೈತರಿಗೆ ನೆರೆ ಪರಿಹಾರ ಮತ್ತು ಬೆಳೆ ವಿಮೆಯನ್ನು ಹಂತ ಹಂತವಾಗಿ ನೀಡಲಾಗುತ್ತಿದೆ. ಎಲ್ಲರೂ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿಕೊಳ್ಳಬೇಕು ಎಂದರು.

    ತಹಸೀಲ್ದಾರ್ ಅಮರೇಶ ಪಮ್ಮಾರ, ಪಿಎಸ್​ಐ ಎಸ್.ಆರ್. ಕಣವಿ, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಎಂ.ಸಿ. ಹಿರೇಮಠ, ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಬಿ.ವಿ. ಹಟ್ಟಿಹೋಳಿ, ಡಾ. ಸಂಜಯ ಚಂದರಗಿಮಠ, ಯಲ್ಲಾರಿ ಹುಬಳಿಕರ, ವಿ.ಬಿ. ಲಿಂಗನಮಠ, ಶಿವಾಜಿ ಡೊಳ್ಳಿನ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts