More

    ಜ.೧೨ ರಿಂದ ೧೪ ವರೆಗೆ ಶರಣ ಮೇಳ

    ಬಾಗಲಕೋಟೆ: ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠದಿಂದ ಜ.೧೨ ರಿಂದ ೧೪ ವರೆಗೆ ಮೂರು ದಿನಗಳ ಕಾಲ ೩೬ನೇ ಶರಣ ಮೇಳ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಎರಡು, ಮೂರು ವರ್ಷ ಸರಳವಾಗಿ ಆಚರಿಸಲಾಗಿತ್ತು. ಪ್ರಸಕ್ತ ವರ್ಷ ಅದ್ಧೂರಿಯಾಗಿ ಮೇಳ ಆಯೋಜಿಸಲಾಗಿದೆ ಎಂದು ಬಸವ ಧರ್ಮಪೀಠಾಧ್ಯಕ್ಷೆ ಡಾ.ಮಾತೇ ಗಂಗಾದೇವಿ ಹೇಳಿದರು.
    ಈಗಾಗಲೇ ಅಖಂಡ ವಚನ ಪಠಣ ಸಪ್ತಾಯದ ಮೂಲಕ ಮೇಳಕ್ಕೆ ವಿದ್ಯುತ್‌ಕ್ತವಾಗಿ ಚಾಲನೆ ನೀಡಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ ಲಕ್ಷಾಂತ ಜನದಲ್ಲಿ ಭಾಗವಹಿಸಲಿದ್ದಾರೆ. ಯೋಗ ಶಿಬಿರ, ಸಾಮೂಹಿಕ ಇಷ್ಟಲಿಂಗಾರ್ಚನೆ, ಇಷ್ಟ ಲಿಂಗ ದೀಕ್ಷಾ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜ.೧೨ ರಂದು ರಾಷ್ಟೀಯ ಬಸವ ದಳ ೩೨ ನೇ ಅಽವೇಶನ ಬೆಳಗ್ಗೆ ೧೦.೩೦ ಗಂಟೆಗೆ ನಡೆಯಲಿದೆ. ಮಾತೇ ಗಂಗಾದೇವಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಲಿದ್ದಾರೆ. ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ ಫಾರ್ಮಹೌಸ ಲೋಕಾರ್ಪಣೆಗೊಳಿಸಲಿದ್ದಾರೆ. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೇರಿದಂತೆ ಇತರರು ಆಗಮಿಸಲಿದ್ದಾರೆ. ಮಹಾಂತ ಸ್ವಾಮೀಜಿ, ಬಸವ ಭೂಷಣ ಸ್ವಾಮೀಜಿ, ಸದ್ಗುರು ಬಸವ ಯೋಗಿ ಸ್ವಾಮೀಜಿ, ಮಾತೇ ತುಂಗಮ್ಮ ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ ೬ ಗಂಟೆಗೆ ಮಹಿಳಾ ಗೋಷ್ಠಿ ನಡೆಯಲಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಪ್ರಮೀಳಾ ನಾಯ್ಡು ಉದ್ಘಾಟಿಸಲಿದ್ದಾರೆ. ವಿವಿಧ ನಾಯಕರು ಭಾಗವಹಿಸಲಿದ್ದಾರೆ.
    ಸಿಎಂ ಬೊಮ್ಮಾಯಿ ಮೇಳ ಉದ್ಘಾಟನೆ:
    ಜ.೧೩ ರಂದು ಬೆಳಗ್ಗೆ ೧೦.೩೦ ಗಂಟೆಗೆ ಶರಳ ಮೇಳ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಚಿವ ಗೋವಿಂದ ಕಾರಜೋಳ ಗ್ರಂಥ ಲೋಕಾರ್ಪಣೆಗೊಳಿಸಲಿದ್ದಾರೆ. ಸಚಿವ ಸಿ.ಸಿ.ಪಾಟೀಲ ಧ್ವಜಾರೋಹಣ ನೆರವೇರಸಲಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಜ್ಞಾನಾಮೃತ ಮಾತಾಜಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಟ ವಿಜಯ ರಾಘವೇಂದ್ರ, ಶಾಸಕ ದೊಡ್ಡನಗೌಡ ಪಾಟೀಲ, ಜಾಗತಿಕ ಲಿಂಗಾಯತ ಮಹಸಭಾ ಪ್ರಾದಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ಉದ್ಯಮಿ ಎಸ್.ಷಡಕ್ಷರಿ ಭಾಗವಹಿಸಲಿದ್ದಾರೆ. ಬಸವಾತ್ಮಜಿ ಪ್ರಶಸ್ತಿ ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿಜಿ ಅನಂತಕುಮಾರ, ಶರಣ ಕಾಯಕ ರತ್ನ ಪ್ರಶಸ್ತಿ ರಾಜ್ಯ ಪ್ರಶಸ್ತಿ ಪ್ರೊ.ವೀರಭದ್ರಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
    ಸಂಜೆ ೬ ಗಂಟೆಗೆ ಪೀಠಾರೋಹಣ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಇಳಕಲ್ಲ ಗುರು ಮಹಾಂತ ಸ್ವಾಮೀಜಿ ಜ್ಯೋತಿ ಬೆಳಗಿಸಲಿದ್ದಾರೆ. ಡಾ.ಅಕ್ಕ ಅನ್ನಪೂರ್ಣ ತಾಯಿ, ಬಸವರತ್ನಾದೇವಿ, ಮಹದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.ಎಸ್.ಆರ್.ನವಲಿಹಿರೇಮಠ ಧ್ವಜಾರೋಹಣ ನೆರವೇರಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಬಸವರಾಜ ಬುಳ್ಳಾ ಸೇರಿದಂತೆ ಇತರರು ಆಗಮಿಸಲಿದ್ದಾರೆ.
    ಬಸವ ಕಾಂತಿ ಸಮಾರಂಭ
    ಜ.೧೪ ರಂದು ಬೆಳಗ್ಗೆ ೯ ಗಂಟೆಗೆ ಬಸವ ಕ್ರಾಂತಿ ಸಮಾರಂಭ ನಡೆಯಲಿದ್ದು, ಮಾತೇ ಗಂಗಾದೇವಿ ಸಾನ್ನಿಧ್ಯ ವಹಿಸಲಿದ್ದಾರೆ. ಡಾ.ಬಸಲಿಂಗ ಪಟ್ಟದೇವರು, ಸಿದ್ದೇಶ್ವರ ಸ್ವಾಮೀಜಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಡಾ.ಎಂ.ಬಿ.ಪಾಟೀಲ ಜ್ಯೋತಿ ಬೆಳಗಿಸಲಿದ್ದಾರೆ. ಮಾಜಿ ಸಚಿವ ಎಸ್.ಆರ್.ಪಾಟೀಲ ವಚನ ತರಂಗ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಸಂಜೆ ೭ ಗಂಟೆಗೆ ಸಾಮೂಹಿಕ ಇಷ್ಟಲಿಂಗಪೂಜೆ ನಡೆಯಲಿದೆ.
    ಇನ್ನು ೨೦೨೩ ಶರಣ ದಾಸೋಹ ರತ್ನ ಪ್ರಶಸ್ತಿ ಬೀದರ ರಾಷ್ಟ್ರೀಯ ಬಸವಳದ ಕಂಟೆಪ್ಪ ಗುಂದಿಗುಡೆ, ಶರಣ ಸೇವಾ ರತ್ನಾ ಪ್ರಶಸ್ತಿ ಹುಬ್ಬಳ್ಳಿಯ ಲಿಂಗಾಯತ ಧರ್ಮ ಮಹಸಭಾ ಜಿಲ್ಲಾಧ್ಯಕ್ಷ ಎಸ್.ಬಿ.ಜೋಡಳ್ಳಿ, ಶರಣ ಸೇವಾ ರತ್ನ ಪ್ರಶಸ್ತಿ ಮೈಸೂರಿನ ಚಿಕ್ಕಣ್ಣ ನಾಯಕ, ಶರಣ ವೈದ್ಯ ರತ್ನ ಪ್ರಶಸ್ತಿ ಡಾ.ಈ.ಆರ್.ತಮಗೊಂಡ ಅವರಿಗೆ ಪ್ರದಾನ ಮಾಡಲಾಗುವುದು. ಮೇಳಕ್ಕೆ ಬರುವ ಭಕ್ತರಿಗೆ ೫ ಲಕ್ಷ ಜೋಳದ ರೊಟ್ಟಿ, ೫ ಲಕ್ಷ ಸಜ್ಜೆ ರೊಟ್ಟಿ ಸಿದ್ದಪಡಿಸಲಾಗಿದೆ. ೩ ಲಕ್ಷ ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.
    ಪೀಠದ ಉಪಾಧ್ಯಕ್ಷ ಮಹಾದೇಶ್ವರ ಸ್ವಾಮೀಜಿ, ಬಸವ ಯೋಗಿ ಸ್ವಾಮೀಜಿ, ಜಗದ್ಗುರು ಮಾತೆ ದಾನೇಶ್ವರಿ, ಅನಿಮೀಷಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts