More

    ಜ್ಞಾನಾರ್ಜನೆಗೆ ಗ್ರಂಥಾಲಯ ಸಹಕಾರಿ

    ಇಟಗಿ: ಮಕ್ಕಳ ಸಾಧನೆ ಮತ್ತು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಆದ್ಯ ಕರ್ತವ್ಯ ಎಂದು ಚನ್ನಮ್ಮ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಟಕದ ಗೌರವ ಕಾರ್ಯದರ್ಶಿ ವಿ.ಎಸ್​.ನಂದಿಹಳ್ಳಿ ಹೇಳಿದರು.

    ಸಮೀಪದ ಬೈಲೂರ ಗ್ರಾಮ ಪಂಚಾಯಿತಿಯ ಡಿಜಿಟಲ್​ ಗ್ರಂಥಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಗ್ರಂಥಾಲಯಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಉತ್ತಮ ಅವಕಾಶ ಕಲ್ಪಿಸಿವೆ. ಇದಕ್ಕೆ ಬೆಲೂರು ಡಿಜಿಟಲ್​ ಗ್ರಂಥಾಲಯ ಸಾಯಾಗಿದೆ ಎಂದರು.

    ಶಿಕರಾದ ಗಂಗಾಧರ ಹನುಮಸಾಗರ, ಪುಲಕೇಶಿ ಗಿರಿಯಾಲ, ಗುರುಶಾಂತಯ್ಯ ಹಿರೇಮಠ ಮಾತನಾಡಿದರು. ಬೆಲೂರ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ಕಾವೇರಿ ಕಿಲಾರಿ (ಶೇ.87.04), ದ್ವೀತಿಯ ಸ್ಥಾನ ಪಡೆದ ಚಿನ್ಮಯ ಕೆಂಜಡಿಮಠ(ಶೇ.86.24), ತೃತೀಯ ಸ್ಥಾನ ಪಡೆದ ರಂಜಿತಾ ಗೋದಳ್ಳಿ(ಶೇ.84.96) ಅವರನ್ನು ಸನ್ಮಾನಿಸಲಾಯಿತು. ಗ್ರಂಥಾಲಯದ ಮೇಲ್ವಿಚಾರಕ ಜಗದೀಶ ಅಂಗಡಿ, ಪುಂಡಲೀಕ ಮಂಡಾಣಿ, ಶಿವಾನಂದ ಹಿರೇಮಠ, ಅನ್ನಪೂರ್ಣಾ ಕಮ್ಮಾರ, ರಾಚಯ್ಯ ಕೆಂಜಡಿಮಠ, ಜಗದೀಶ ಮಠದ, ಗಂಗಾಧರ ಕೊಟಬಾಗಿ, ವಿವೇಕ ಕುರಗುಂದ, ಪ್ರಕಾಶ ಗೆಜಪತಿ, ಆನಂದ ತಿಗಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts