More

    ಜ್ಞಾನದ ದಾರಿ ತೋರುವ ವಿದ್ಯಾರ್ಥಿಗಳ ಮಿತ್ರ, ಸರ್ಕಾರಿ ಮಾರುತಿ ಪ್ರೌಢಶಾಲೆ ಕಾರ್ಯದರ್ಶಿ ಮುರಳಿ ಮೋಹನ್ ಬಣ್ಣನೆ

    ದೊಡ್ಡಬಳ್ಳಾಪುರ: ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯು ಜ್ಞಾನದ ದಾರಿ ತೋರುವ ನಿಜಮಿತ್ರ ಎಂದು ಸರ್ಕಾರಿ ಮಾರುತಿ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮುರಳಿಮೋಹನ್ ಅಭಿಪ್ರಾಯಪಟ್ಟರು.

    ತಾಲೂಕಿನ ರಾಜಘಟ್ಟ ಸರ್ಕಾರಿ ಮಾರುತಿ ಪ್ರೌಡಶಾಲೆಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಎಸ್‌ಸಿ ಘಟಕದ ಕಾರ್ಯದರ್ಶಿ ರಾಜಘಟ್ಟ ನಾರಾಯಣಸ್ವಾಮಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಸಹಕಾರದಲ್ಲಿ ಸಂಚಿಕೆ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಸಾಮಾನ್ಯ ಜ್ಞಾನ ಸಂಪಾದಿಸುವುದು ಅಗತ್ಯ. ಈ ಹಂತದಲ್ಲಿ ವಿಜಯವಾಣಿ ದಿನಪತ್ರಿಕೆ ಕಾರ್ಯ ಶ್ಲಾಘನೀಯವಾದದ್ದು. ಮಕ್ಕಳ ಜ್ಞಾನದ ಸಾಧನವಾದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಸೇವಾ ತತ್ಪರತೆ ಮರೆದಿರುವ ದಾನಿಗಳ ಕಾರ್ಯ ಶ್ಲಾಘನೀಯ ಎಂದರು.

    ಕಾಂಗ್ರೆಸ್ ಜಿಲ್ಲಾ ಎಸ್‌ಸಿ ಘಟಕದ ಕಾರ್ಯದರ್ಶಿ ರಾಜಘಟ್ಟ ನಾರಾಯಣಸ್ವಾಮಿ ಮಾತನಾಡಿ, ಓದಿನಿಂದ ದೂರ ಉಳಿದ ನಾನು ಇಂದು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗ ನನಗೆ ವಿದ್ಯೆಯ ಪ್ರಾಮುಖ್ಯತೆ ಅರಿವಾಗುತ್ತಿದೆ. ಆದರೆ ಕಾಲ ಮಿಂಚಿ ಹೋಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ನಮ್ಮ ಕೈಲಾದ ಸೇವೆ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.

    ಬಡ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಿದ್ಧನಿದ್ದೇನೆ. ಆದರೆ ಓದುವ ಸಮಯದಲ್ಲಿ ಓದುವುದನ್ನು ಬಿಟ್ಟು ಬೇರೆಡೆ ಮನಸ್ಸು ಹೊರಳುವುದು ಬೇಡ. ಇಂದಿನ ತಪ್ಪುಗಳು ಭವಿಷ್ಯದಲ್ಲಿ ಕಾಡುವವರೆಗೂ ತೆಗೆದುಕೊಂಡ ಹೋಗಬೇಡಿ ಎಂದು ಕಿವಿಮಾತು ಹೇಳಿದರು.
    ಶಿಕ್ಷಕ ನರಸಿಂಹರಾಜು, ಕಿರುಚಿತ್ರ ನಿರ್ದೇಶಕ ಕೆಳಗಿನ ನಾಯಕಂಡರಹಳ್ಳಿ ಸಂತೋಷ್‌ನಾಯ್ಕ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts