More

    ಜೊಲ್ಲೆ ಫೌಂಡೇಷನ್‌ನಿಂದ ಆಕ್ಸಿಜನ್ ಬ್ಯಾಂಕ್

    ಬೋರಗಾವ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ನಿಯಂತ್ರಿಸಲು ಅಧಿಕಾರಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಜೊಲ್ಲೆ ಚಾರಿಟಿ ಫೌಂಡೇಷನ್ ವತಿಯಿಂದ ಆಕ್ಸಿಜನ್ ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಕಾರದಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜೊಲ್ಲೆ ಚಾರಿಟಿ ಫೌಂಡೇಷನ್ ವತಿಯಿಂದ 20 ಬೆಡ್ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ನಿಪ್ಪಾಣಿ ತಾಲೂಕಿನಲ್ಲಿ ಕರೊನಾ ನಿಯಂತ್ರಿಸಲು 3 ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ. ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಜೊಲ್ಲೆ ಚಾರಿಟಿ ಫೌಂಡೇಷನ್‌ನಿಂದ ಆಕ್ಸಿಜನ್ ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ ಎಂದರು.

    ಶೀಘ್ರದಲ್ಲಿಯೇ ಗಳತಗಾ, ಬೇಡಕಿಹಾಳ, ಮಾಣಕಾಪುರ ಹಾಗೂ ಬೋರಗಾವ ಪಟ್ಟಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲಾಗುವುದು. ನಿಪ್ಪಾಣಿ ಸಮುದಾಯ ಆರೋಗ್ಯ ಕೇಂದ್ರ, ಜೊಲ್ಲೆ ಪಬ್ಲಿಕ್ ಸ್ಕೂಲ್ ಹಾಗೂ ಕಾರದಗಾದಲ್ಲಿ ಕೋವಿಡ್ ಕೇರ್ ಪ್ರಾರಂಭಿಸಲಾಗಿದೆ. ಜೊಲ್ಲೆ ಉದ್ಯೋಗ ಸಮೂಹ ಹಾಗೂ ಚಾರಿಟಿ ಫೌಂಡೇಷನ್‌ನಿಂದ ಕರೊನಾ ನಿಯಂತ್ರಣಕ್ಕೆ ನೆರವು ನೀಡಲಾಗುವುದು ಎಂದರು.

    ತಹಸೀಲ್ದಾರ್ ಪ್ರಕಾಶ ಗಾಯಕವಾಡ ಮಾತನಾಡಿ, ನಿಪ್ಪಾಣಿ ತಾಲೂಕಿನ ಕೆಲ ಹಳ್ಳಿಗಳು ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜನರ ಬೇಡಿಕೆಗೆ ಅನುಗುಣವಾಗಿ ಕೋವಿಡ್ ಆರೈಕ್ ಕೇಂದ್ರ, ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಬಸವಜ್ಯೋತಿ ಯೂಥ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ತಾಪಂ ಸದಸ್ಯ ದಾದಾಸೋ ನರಗಟ್ಟೆ, ಎಪಿಎಂಸಿ ಸದಸ್ಯ ನಿತೇಶ ಖೋತ, ಪವನ ಪಾಟೀಲ, ಡಾ.ನಾಮದೇವ ತೇಲಿ, ಎಸ್.ಕೆ.ಮಾಳಿ, ಸರೋಜಾ ಜಮದಾಡೆ, ತಾಪಂ ಇಒ ಮಂಜುನಾಥ ಉಳ್ಳಾಗಟ್ಟೆ, ಸಹಾಯಕ ನಿರ್ದೇಶಕ ಎಂ.ಆರ್.ಕೋತವಾಲ, ಸಿಪಿಐ ಆರ್.ಆರ್.ಪಾಟೀಲ, ದೇವಪ್ಪ ದೇವಕಾತೆ, ದಾದಾ ಭಾದುಲೆ, ಶಿವಾಜಿ ಭೋರೆ, ಜನಾರ್ದನ ಘಾಟಗೆ, ತುಕಾರಾಂ ಮಾಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts