More

    ಜೈಘೋಷಗಳ ಮಧ್ಯೆ ಬಸವ ರಥೋತ್ಸವ ವೈಭವ

    ಬಸವಕಲ್ಯಾಣ: ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿ ಸಹಯೋಗದಡಿ ನಗರದಲ್ಲಿ ಹಮ್ಮಿಕೊಂಡ ಮೂರು ದಿನದ ಮಹಾತ್ಮ ಬಸವೇಶ್ವರ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಬೆಳಗ್ಗೆ ಭಕ್ತರ ಜೈಘೋಷಗಳ ಮಧ್ಯೆ ಅದ್ದೂರಿ ರಥೋತ್ಸವ ಜರುಗಿತು. ನಗರ ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತ ಸಮೂಹ ಈ ಅಪೂರ್ವ ಘಳಿಗೆಗೆ ಸಾಕ್ಷಿಯಾಯಿತು.
    ಸಾಂಸ್ಕೃತಿಕ ವೈಭವದ ಪಲ್ಲಕ್ಕಿ, ನಂದಿ ಧ್ವಜಗಳ ಮೆರವಣಿಗೆ ರಥ ಮೈದಾನಕ್ಕೆ ಬಂದಾಗ ಎಲ್ಲೆಡೆ ಭಕ್ತಸಾಗರ ಕಂಡುಬಂದಿತು. ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಿದ್ದಂತೆ ಜೈಘೋಷಗಳು ಮೊಳಗಿದವು.

    ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ ಅಧ್ಯಕ್ಷತೆ ವಹಿಸಿದ್ದರು. ಬಿಡಿವಿಸಿ ಕಾರ್ಯದರ್ಶಿ ಸುರೇಶ ಸ್ವಾಮಿ, ವಿಶ್ವಸ್ಥರಾದ ಸೋಮಶೇಖರ ವಸ್ತ್ರದ, ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ, ಕಾರ್ಯದರ್ಶಿ ರೇವಣಪ್ಪ ರಾಯವಾಡೆ, ಸಹ ಕಾರ್ಯದರ್ಶಿ ಬಸವರಾಜ ಬಾಲಿಕಿಲೆ, ಕೋಶಾಧ್ಯಕ್ಷ ಸುಭಾಷ ಹೊಳಕುಂದೆ, ನಿರ್ದೇಶಕರಾದ ಬಸವರಾಜ ಕೋರಕೆ, ಮಲ್ಲಿಕಾರ್ಜುನ ಕುರಕೋಟೆ, ಅನೀಲಕುಮಾರ ಮೆಟಗೆ, ಕಾಶಪ್ಪ ಸಕ್ಕರಬಾವಿ, ಜಗನ್ನಾಥ ಖೂಬಾ, ಮಲ್ಲಿಕಾರ್ಜುನ ಚಿರಡೆ, ಭದ್ರಿನಾಥ ಪಾಟೀಲ್, ಬಸವರಾಜ ತೊಂಡಾರೆ, ನೂಲಿ ಚಂದಯ್ಯ ಸಮಾಜದ ಮುಖಂಡ ಧರ್ಮಣ್ಣ ಭೆಂಡೆ ಇತರರು ಪಾಲ್ಗೊಂಡಿದ್ದರು. ಡಾ.ರುದ್ರಮಣಿ ಮಠಪತಿ ಸ್ವಾಗತಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
    ಕೃಷಿಕರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಪಶು ಪ್ರದರ್ಶನದಲ್ಲಿ ಭಾಗವಹಿಸಿದ ಅತ್ಯುತ್ತಮ ತಳಿಗಳನ್ನು ಆಯ್ಕೆ ಮಾಡಿ ಅವುಗಳ ಮಾಲೀಕರಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಯಿತು.

    ಅದ್ದೂರಿ ಮೆರವಣಿಗೆ: ಇದಕ್ಕೂ ಮುನ್ನ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ರಥ ಮೈದಾನವರೆಗೆ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿದ್ದ ಹೆಡೆ ಇರುವ ನಂದಿ ಧ್ವಜಗಳು ಮತ್ತು ಪಲ್ಲಕ್ಕಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ಜರುಗಿತು. ವಿಶೇಷ ಸಮವಸ್ತ್ರ ಧರಿಸಿದ ಬಸವ ಭಕ್ತರು ನಂದಿ ಧ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. ಮೆರವಣಿಗೆ ಎದುರು ಅಲಂಕೃತ ವಾಹನದಲ್ಲಿ ಶಿವಶರಣ ನೂಲಿ ಚಂದಯ್ಯನವರ ಮೂತರ್ಿ ಹಾಗೂ ಪಲ್ಲಕ್ಕಿ ಇತ್ತು. ಕೋಟೆ ಬಳಿ ನಂದಿ ಧ್ವಜಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಶರಣು ಸಲಗರ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾಜರ್ುನ ಖೂಬಾ, ತಹಸೀಲ್ದಾರ್ ಸಾವಿತ್ರಿ ಸಲಗರ ಇತರರಿದ್ದರು.

    ಪಲ್ಲಕ್ಕಿಗೆ ವಿಶೇಷ ಪೂಜೆ: ಶಿವಶರಣ ನೂಲಿಚಂದಯ್ಯ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರಸಭೆ ಸದಸ್ಯೆ ಶಾಂತಮ್ಮ ಲಾಡೆ, ಮುಖಂಡರಾದ ಯುವರಾಜ ಭೆಂಡೆ, ಸಂಜುಕುಮಾರ ಸಂಗನೂರೆ, ಪ್ರದೀಪ ಢಗಳೆ, ದಿಗಂಬರ ಜಲ್ದೆ, ಆಶೋಕ ಮೇಟಕರ್, ದತ್ತು ಭೆಂಡೆ, ರಾಜಕುಮಾರ ರಾಜೋಳೆ, ಭಜನಾ ಮಂಡಳಿಯ ಬಸಮ್ಮ ಜಲ್ದೆ ಇತರರಿದ್ದರು. ದಾರಿಯುದಕ್ಕೂ ಮನೆ-ಅಂಗಡಿಗಳ ಮುಂದೆ ನಿಂತ ಮಹಿಳೆಯರು ಪಲ್ಲಕ್ಕಿಗೆ ಆರತಿ ಬೆಳಗಿ ಭಕ್ತಿ, ಶ್ರದ್ಧೆಯಿಂದ ಪೂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts