More

    ಜೇಬಿಗೆ ಕತ್ತರಿ ಹಾಕಿ, ಕಾಂಗ್ರೆಸ್ ಪುಕ್ಕಟ್ಟೆ ಭಾಷಣ

    ಕಮಲಾಪುರ: ಗ್ಯಾರಂಟಿಗಳ ಬಗ್ಗೆ ಪುಕ್ಸಟ್ಟೆ ಭಾಷಣ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿ ಎಂಟು ಸಾವಿರ ಕುಟುಂಬದಿಂದ ಪ್ರತಿ ತಿಂಗಳು ವಸೂಲಿ ಮಾಡಿ, ಅದ್ನೆ ಪುನಃ ಜನರಿಗೆ ಹಂಚುತ್ತಿದ್ದಾರೆ. ಬಸ್ ಟಿಕೆಟ್ ದರ ಹೆಚ್ಚಳ, ಹೊಸ ಪಂಪ್‌ಸೆಟ್ ಅಳವಡಿಕೆ ಎರಡು ಲಕ್ಷಕ್ಕೆ ಏರಿಕೆ ಸೇರಿ ವಿವಿಧೆಡೆ ಹಣ ವಸೂಲಿ ಮಾಡಿ, ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

    ಪಟ್ಟಣದ ರಾಂಪುರೆ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಲೋಕಸಭೆ ಚುನಾವಣೆ ಬಿಜೆಪಿಯ ಬೃಹತ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ೧೦ ಕೆ.ಜಿ. ಅಕ್ಕಿ ನೀಡುತ್ತೇವೆ ಎಂದಿದ್ದರು. ಪ್ರಸ್ತುತ ಕೇಂದ್ರ ಸರ್ಕಾರ ಐದು ಕೆಜಿ ಕೊಡುತ್ತಿದ್ದು, ರಾಜ್ಯದ ಪಾಲು ಇಲ್ಲವೇ ಇಲ್ಲ. ಮೋದಿ ೪೫ ಕೆಜಿ ಯೂರಿಯಾಕ್ಕೆ ೨,೮೦೦ ರೂ. ಖರ್ಚಾಗುತ್ತಿದ್ದರೂ ೨೬೦ ರಿಂದ ೨೮೦ ರೂ.ಗೆ ನೀಡುತ್ತಿದ್ದಾರೆ. ಡಿಎಪಿಗೆ ೨,೭೮೦ ಚೀಲಕ್ಕೆ ಖರ್ಚಾಗುತ್ತಿದ್ದು, ೧೯೦೦ ರೂ.ಗೆ ನೀಡಲಾಗುತ್ತಿದೆ. ರೈತರಿಗಾಗಿ ಕೇಂದ್ರ ಸರ್ಕಾರ ೧.೨೫ ಲಕ್ಷ ಕೋಟಿ ಸಬ್ಸಿಡಿ ನೀಡುತ್ತಿದೆ ಎಂದು ಹೇಳಿದರು.

    ದುಷ್ಟ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಬಂದಿದೆ. ದೇವರು ಮೆಚ್ಚುವ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಪ್ರವಾಹ ಬಂದರೂ ನಿರ್ವಹಿಸಿದರು. ಒಂದು ಮನೆಗೆ ಲಕ್ಷ ರೂ. ನಿಗದಿಯಾಗಿದ್ದರೂ, ಐದು ಲಕ್ಷ ರೂ. ನೀಡಿದರು. ಬೆಳೆ ಹಾನಿಯಾದರೆ ಹೆಕ್ಟೆರ್‌ಗೆ ೧೪ ಸಾವಿರ, ತೋಟಗಾರಿಕೆ ಬೆಳೆಗೆ ೨೪ ಸಾವಿರ ಪರಿಹಾರ ನೀಡಿದರು. ಆದರೆ ಸಿದ್ದರಾಮಯ್ಯ ಪ್ರಸ್ತುತ ಭೀಕ್ಷೆಯ ರೀತಿ ಎರಡು ಸಾವಿರ ಕೊಟ್ಟಿದ್ದಾರೆ. ಕೇಂದ್ರದ ಪರಿಹಾರಕ್ಕೆ ಕಾಯಲಿಲ್ಲ. ಸಿದ್ದರಾಯ್ಯ ರೀತಿ ದೆಹಲಿಗೆ ಹೋಗಿ ಕೂಡಲಿಲ್ಲ. ಕಾಂಗ್ರೆಸ್ಸಿಗರಿಗೆ ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ಕೊಡಲು ಹಣವಿದೆ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ನಾಲ್ಕೈದು ಸಾವಿರ ಕೋಟಿ ರೂ. ಇಲ್ಲವೇ ಎಂದು ಪ್ರಶ್ನಿಸಿದರು.

    ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ, ಶಾಸಕ ಹರೀಶ ಪೂಂಜಾ ಮಾತನಾಡಿ, ಜಗತ್ತಿನ ಜನ ಅಭಿನವ ವಿವೇಕಾನಂದರ ರೂಪದಲ್ಲಿ ಹಿಂದುತ್ವ ಒಪ್ಪಿಕೊಳ್ಳುವ ರೀತಿ ಮಾಡಿದ್ದು ನರೇಂದ್ರ ಮೋದಿ. ಕಾಶಿ, ಅಯೋಧ್ಯೆಯನ್ನು ನೂರಾರು ವರ್ಷದ ನಂತರ ಪುನರುತ್ಥಾನ ಮಾಡಿದ್ದು ಮೋದಿ. ಹಿಂದುತ್ವಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದರು. ರಷ್ಯಾ ಯುಕ್ರೇನ್ ಯುದ್ಧದ ವೇಳೆ ಭಾರತ ದೇಶದ ಜನರನ್ನು ಮೂರೂ ಗಂಟೆ ಯುದ್ಧ ನಿಲ್ಲಿಸಿ, ರಕ್ಷಿಸಿದ್ದು ಮೋದಿ ಎಂದರು.

    ಸಂಸದ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಮಾತನಾಡಿ, ದೇಶದ ಭವಿಷ್ಯ, ಸನಾತನ ಧರ್ಮ ರಕ್ಷಣೆಯ ಚುನಾವಣೆ ಇದಾಗಿದ್ದು, ಕಮಲದ ಹೂ, ಕ್ರಮ ಸಂಖ್ಯೆ ೧ಕ್ಕೆ ಮತ ನೀಡಬೇಕು. ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ನಿಸ್ಸೀಮವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿ, ದೇಶಾದ್ಯಂತದ ೩೬ ರೈಲು ಬಿಟ್ಟರೂ ಕಲಬುರಗಿಯಿಂದ ಒಂದೇ ಒಂದು ರೈಲು ಬಿಟ್ಟಿಲ್ಲ ಎಂದು ತಿರುಗೇಟು ನೀಡಿದರು.

    ಶರಣಬಸಪ್ಪ ಪಾಟೀಲ್ ಅಷ್ಟಗಿ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮಾತನಾಡಿದರು. ಮಾಜಿ ಸಚಿವ ಬಾಬುರಾವ ಚವ್ಹಾಣ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಪ್ರಮುಖರಾದ ತಮ್ಮೇಶಗೌಡ, ಶರಣು ತಳ್ಳಿಕೇರಿ, ಶಶಿಕಲಾ ಟೆಂಗಳಿ, ಭಾಗೀರಥಿ ಗುನ್ನಾಪುರ, ಶಿವಕುಮಾರ ಜಂಬಗಿ, ಸಿದ್ದಣ್ಣಗೌಡ ಪಾಟೀಲ್ ಧಮ್ಮೂರ, ಸಂಗಮೇಶ ವಾಲಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts