More

    ಜೆಡಿಎಸ್ ಸೇರಿದ ಜಿಪಂ ಮಾಜಿ ಸದಸ್ಯ ಅಚ್ಚುತಾನಂದ

    ಕೆ.ಆರ್.ನಗರ: ವಿಧಾನಸಭಾ ಕ್ಷೇತ್ರದ ಪ್ರಭಾವಿ ದಲಿತ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚುತಾನಂದ ಕಾಂಗ್ರೆಸ್ ತೊರೆದು ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾದರು.


    ಬೆಂಗಳೂರಿನ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೋಟದ ಮನೆಯಲ್ಲಿ ಸೋಮವಾರ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಂಗರಬಾಯನಹಳ್ಳಿ ತಮ್ಮಣ್ಣ ಸೇರಿದಂತೆ ಇತರ ಬೆಂಬಲಿಗರೊಂದಿಗೆ ಶಾಸಕ ಸಾ.ರಾ.ಮಹೇಶ್ ಉಪಸ್ಥಿತಿಯಲ್ಲಿ ಸೇರ್ಪಡೆಯಾದರು.


    ಕುಮಾರಸ್ವಾಮಿ ಅವರು ಅಚ್ಚುತಾನಂದ ಮತ್ತು ಬೆಂಬಲಿಗರಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಬಳಿಕ ಮಾತನಾಡಿದ ಎಚ್‌ಡಿಕೆ, ಅಚ್ಚುತಾನಂದ ಅವರ ಸೇರ್ಪಡೆಯಿಂದ ಕೆ.ಆರ್.ನಗರ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಪಕ್ಷದ ಬಲ ಮತ್ತಷ್ಟು ವೃದ್ಧಿಯಾಗಿದೆ. ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದರು.


    ನಾಲ್ಕು ವರ್ಷಗಳ ಹಿಂದೆಯ ಶಾಸಕ ಸಾ.ರಾ.ಮಹೇಶ್ ಮತ್ತು ನಾನು ಅಚ್ಚುತಾನಂದ ಅವರನ್ನು ಪಕ್ಕಕ್ಕೆ ಆಹ್ವಾನಿಸಿದ್ದೆವು. ಆ ಸಮಯದಲ್ಲಿ ಅವರು ಬಂದಿದ್ದರೆ ಇಷ್ಟೊತ್ತಿಗೆ ಶಾಸಕರಾಗಿರುತ್ತಿದ್ದರು. ಅವರಿಗೆ ಶೀಘ್ರ ಉನ್ನತವಾದ ರಾಜಕೀಯ ಸ್ಥಾನ ಮತ್ತು ಚುನಾವಣೆಯ ನಂತರ ಉತ್ತಮ ಅಧಿಕಾರ ನೀಡುವುದಾಗಿ ಭರವಸೆ ನೀಡಿದರು.
    ನನಗೆ ರಾಜಕೀಯ ಅಧಿಕಾರದ ಆಸೆ ಇಲ್ಲ. ಆದರೆ ನಮ್ಮೆಲ್ಲರ ಗುರಿ ಕ್ಷೇತ್ರದ ಅಭಿವೃದ್ಧಿ ಮತ್ತು ಸಾ.ರಾ.ಮಹೇಶ್ ಅವರುನ್ನು ನಾಲ್ಕನೇ ಬಾರಿ ಗೆಲ್ಲಿಸುವುದು. ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಾಗುವುದು ಎಂದು ಅಚ್ಚುತಾನಂದ ಹೇಳಿದರು.


    ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಅಚ್ಚುತಾನಂದ ಅವರ ರಾಜಕೀಯ ಶಕ್ತಿ ಮತ್ತು ಸಾಮರ್ಥ್ಯದ ಅರಿವು ನಮಗಿದ್ದು, ಅವರನ್ನು ಗೌರವದಿಂದ ನೋಡಿಕೊಳ್ಳಲಾಗುವುದು ಎಂದರು.


    ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ಪುರಸಭಾ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ಜಿ.ಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ತಾಪಂ ಮಾಜಿ ಸದಸ್ಯರಾದ ಹಂಗರಬಾಯನಹಳ್ಳಿ ತಮ್ಮಣ್ಣ, ವೈರಮುಡಿ, ಗ್ರಾಪಂ ಮಾಜಿ ಸದಸ್ಯರಾದ ಚಲುವರಾಜು, ಮಹದೇವ್, ಬಾಲಕೃಷ್ಣ, ಜೆಡಿಎಸ್ ಮುಖಂಡರಾದ ಹನಸೋಗೆ ನಾಗರಾಜು, ಅಶೋಕ್‌ಕುಮಾರ್, ದಾಶಸಾರಥಿ, ನಾಗಣ್ಣ, ಎಚ್.ಜೆ.ಮಹದೇವ್, ನಿವೃತ್ತ ಶಿಕ್ಷಕ ಹೆಚ್.ಬಿ.ಸಂಪತ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts