More

    ಜೆಡಿಎಸ್ ಗದ್ದುಗೆ ವಶಕ್ಕೆ ಕೈ-ಕಮಲ ಕಸರತ್ತು


    ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಬಿಜೆಪಿ, ಜೆಡಿಎಸ್ ನಡುವೆ ಹಣಾಹಣಿ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

    ಎರಡು ಬಾರಿ ನೆಲಮಂಗಲವನ್ನು ಕಾಂಗ್ರೆಸ್ ತೆಕ್ಕೆಗೆ ನೀಡಿದ್ದ ಮತದಾರರು ಒಮ್ಮೆ ಬಿಜೆಪಿಗೂ ಹರಸಿದ್ದರು, ಮತ್ತೆರಡು ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡುವ ಮೂಲಕ ಅಚ್ಚರಿ ಲಿತಾಂಶಗಳಿಗೆ ಸಾಕ್ಷಿಯಾಗಿದ್ದರು. ಈ ಬಾರಿ ಅಂತಹದ್ದೇ ಅಚ್ಚರಿ ಲಿತಾಂಶ ನೀಡುವ ಮೂಲಕ ಮೂರನೇ ಬಾರಿ ಮತ್ತೆ ಬಿಜೆಪಿಗೆ ಮಣೆ ಹಾಕಲಿದ್ದಾರೆಯೇ ಅಥವಾ ಜೆಡಿಎಸ್ ಅಲೆಗೆ ಮಣಿಯುತ್ತಾರೆಯೇ ಎಂಬ ಕೂತೂಹಲ ಮೂಡಿದೆ.
    ಜೆಡಿಎಸ್ ಗದ್ದುಗೆ ಕಸಿಯುವ ನಿಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸಾಕಷ್ಟು ಬೆವರು ಹರಿಸುತ್ತಿವೆ. ಮೇಲ್ನೋಟಕ್ಕೆ ಮೂರು ಪಕ್ಷಗಳ ನಡುವೆ ತ್ರಿಕೋನ ೈಟ್ ನಡೆಯುವ ಸನ್ನಿವೇಶವಿದ್ದರೂ, ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ, ಪಕ್ಷದಲ್ಲಿನ ಆಂತರಿಕ ತಿಕ್ಕಾಟ ಹಾಗೂ ಬೂದಿಮುಚ್ಚಿದ ಕೆಂಡದಂತಿರುವ ಬಂಡಾಯ ಬಿಸಿಯಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮತಸಮರದ ಸನ್ನಿವೇಶ ನಿರ್ಮಾಣವಾಗಿದೆ.
    ಮಂತ್ರಿಗಿರಿ ಮೇಲೆ ಪ್ರಚಾರ: ಎರಡು ಬಾರಿ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಡಾ.ಕೆ.ಶ್ರೀನಿವಾಸಮೂರ್ತಿ ಶತಾಯಗತಾಯ ಹ್ಯಾಟ್ರಿಕ್ ಗೆಲುವಿಗೆ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ರಾಜ್ಯದ ಮುಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಂದೇ ಬಿಂಬಿಸುತ್ತಿರುವ ಬೆಂಬಲಿಗರು ರಾಜ್ಯಕ್ಕೆ ಕುಮಾರಣ್ಣ, ಕ್ಷೇತ್ರಕ್ಕೆ ಶ್ರೀನಿವಾಸಮೂರ್ತಿ ಎಂದೇ ೋಷವಾಕ್ಯ ಕೂಗುತ್ತಿದ್ದಾರೆ. ಜತೆಗೆ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶ್ರೀನಿವಾಸಮೂರ್ತಿಗೆ ಮಂತ್ರಿಗಿರಿ ಗ್ಯಾರಂಟಿ. ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಕೈಜೋಡಿಸೋಣ ಎಂಬ ೋಷಣೆ ಮುಂದಿಟ್ಟುಕೊಂಡು ಜೆಡಿಎಸ್ ಪ್ರಚಾರ ನಡೆಸುತ್ತಿದೆ.
    ಬಿಜೆಪಿಯಿಂದ ಸಪ್ತಗಿರಿ ಕಣಕ್ಕೆ:ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಹಾಗೂ ಹೊಸ ಮುಖಗಳಿಗೆ ಟಿಕೆಟ್ ನೀಡಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿ ನೆಲಮಂಗಲದ ಬಿಜೆಪಿಯಲ್ಲೂ ಇಂಥ ಪ್ರಯೋಗ ನಡೆಸಿದೆ. ಈ ಬಾರಿ ಬಿಜೆಪಿಯಿಂದ ಸಪ್ತಗಿರಿ ಮೆಗರಿಕ್ ನಾಯಕ್ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಎದುರು ಸೆಣಸುವ ಟಾಸ್ಕ್ ನೀಡಿದೆ. ಕ್ಷೇತ್ರಕ್ಕೆ ಚಿರಪರಿಚಿತರೇ ಆಗಿರುವ ಸಪ್ತಗಿರಿ, ಈ ಬಾರಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಟಿಕೆಟ್ ೋಷಣೆ ಸಂದರ್ಭದಲ್ಲಿ ಪಕ್ಷದಲ್ಲಿ ಭುಗಿಲೆದ್ದ ಬಂಡಾಯ ಶಮನ ಮಾಡುವಲ್ಲಿ ಅಭ್ಯರ್ಥಿ ಯಶಸ್ಸಿಯಾಗಿದ್ದು, ಎಲ್ಲರ ವಿಶ್ವಾಸ ಗಟ್ಟಿ ಮಾಡಿಕೊಂಡೇ ಮತಬೇಟೆ ನಡೆಸುತ್ತಿದ್ದಾರೆ. ಮೂಲ ಹಾಗೂ ವಲಸಿಗ ಎಂಬ ಕಂದಕವನ್ನು ಮುಚ್ಚಿ ಅಚ್ಚರಿ ಲಿತಾಂಶ ಹೊರತರುವ ಹುಮ್ಮಸ್ಸಿನಲ್ಲಿ ಬಿಜೆಪಿ ದಾಳ ಉರುಳಿಸಿದ್ದು, ಈ ಹೊಸ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
    ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ:ಕಾಂಗ್ರೆಸ್ ಮಹಿಳಾ ಕಾರ್ಮಿಕ ಘಟಕದ ಅಧ್ಯಕ್ಷೆಯಾಗಿದ್ದ ಉಮಾದೇವಿ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಇವರಿಗೆ ಟಿಕೆಟ್ ನಿಕ್ಕಿ ಎಂಬ ಮಾತು ಹರಿದಾಡಿತ್ತು. ಆದರೆ ಏಕಾಏಕಿ ಎನ್.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದ್ದು, ಸಹಜವಾಗಿ ಬಣ ರಾಜಕೀಯಕ್ಕೆ ನಾಂದಿ ಹಾಡಿದಂತಾಗಿದೆ. ಕಾಂಗ್ರೆಸ್‌ಗೆ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಉಮಾದೇವಿ ಕಣಕ್ಕಿಳಿದಿರುವುದು ಅಭ್ಯರ್ಥಿ ಹಾಗೂ ಬಂಡಾಯ ಅಭ್ಯರ್ಥಿ ಪರವಾಗಿ ಮುಖಂಡರು ಹಾಗೂ ಕಾರ್ಯಕರ್ತರು ಇಬ್ಭಾಗವಾಗುತ್ತಿರುವುದು ಸಹಜವಾಗಿಯೇ ಕಾಂಗ್ರೆಸ್ ಸಂಘಟನೆಗೆ ತೊಡಕಾಗಿದೆ. ಉಮಾದೇವಿ ನಾಮಪತ್ರ ಹಿಂಪಡೆಯುವಂತೆ ವರಿಷ್ಠರಿಂದ ಸಾಕಷ್ಟು ಒತ್ತಡ ಬಂದಿದ್ದರೂ ಸೆಡ್ಡು ಹೊಡೆದು ಕಣದಲ್ಲಿ ಉಳಿದಿರುವುದು ನೆಲಮಂಗಲದ ಗದ್ದುಗೆ ಏರಲು ಕಾಂಗ್ರೆಸ್‌ಗೆ ಸುಲಭ ಸಾಧ್ಯವಲ್ಲ ಎಂಬ ವಾತಾವರಣ ಕಂಡುಬರುತ್ತಿದ್ದು, ಜೆಡಿಎಸ್ ವಿರುದ್ಧ ಬಿಜೆಪಿಗೆ ನೇರ ಹಣಾಹಣಿ ಏರ್ಪಡುವ ಸನ್ನಿವೇಶ ನಿರ್ಮಾಣವಾಗಿದೆ.
    ಮತಗಳು ನಿರ್ಣಾಯಕ:ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ತಾಲೂಕಿನಲ್ಲಿ ಎಸ್‌ಸಿ ಸಮುದಾಯ ಹಾಗೂ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಬಿಜೆಪಿ ಹಿಡಿತವಿದ್ದರೆ ಗ್ರಾಮೀಣ ಪ್ರದೇಶಗಳಲ್ಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸರಿಸಮನಾದ ಮತಬ್ಯಾಂಕ್ ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿಗರು ಮತಬೇಟೆ ನಡೆಸುತ್ತಿದ್ದಾರೆ. ಇದರ ನಡುವೆ ಅಭ್ಯರ್ಥಿಗಳ ವರ್ಚಸ್ಸು ಸಹ ಈ ಬಾರಿ ಚುನಾವಣಾ ಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಮಾತು ಕೇಳಿಬರುತ್ತಿದ್ದು ಮತದಾರ ಯಾವ ಲಿತಾಂಶ ಪ್ರಕಟಿಸಬಹುದು ಎಂಬ ಕೌತುಕ ಗರಿಗೆದರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts