More

    ಜೆಡಿಎಸ್ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

    ಚಾಮರಾಜನಗರ : ರೈತರು ಬೆಳೆದ ತರಕಾರಿಗಳ ಬೆಲೆ ಪಾತಾಳಕ್ಕೆ ಇಳಿದಿದ್ದು, ರೈತ ಸಂಕಷ್ಟಕ್ಕೆ ಸಿಳುಕಿದ್ದಾನೆ ಎಂದು ಆರೋಪಿಸಿ ಜೆಡಿಎಸ್ ವತಿಯಿಂದ ಗುಂಡ್ಲುಪೇಟೆ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.


    ಎಲೆಕೋಸು ಬೆಲೆ ಕುಸಿತ ವಿರೋಧಿಸಿ ಭಾನುವಾರ ಐಬಿ ಸರ್ಕಲ್ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು ಚಲಿಸುತ್ತಿದ್ದ ವಾಹನಗಳನ್ನು ತಡೆದು ಒಂದೊಂದು ಕೋಸು ನೀಡುವ ಹಾಗೂ ಪ್ರಧಾನಿ, ಮುಖ್ಯಮಂತ್ರಿ, ಕೃಷಿ ಮಂತ್ರಿಗೆ ಒಂದೊಂದು ಬಾಕ್ಸ್ ಎಲೆಕೋಸನ್ನು ಕಳುಹಿಸಿಕೊಡುವ ಮೂಲಕ ವಿಭಿನ್ನವಾಗಿ ಧರಣಿ ಮಾಡಿದರು.


    ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಎಲೆಕೋಸಿನ ಬೆಲೆ 8-10 ಹತ್ತು ರೂ. ಆದರೆ ಈ ಭಾಗದ ರೈತರು ತಮ್ಮ ಎಲೆಕೋಸಿನ ಬೆಳೆಯನ್ನು ಮಾರುಕಟ್ಟೆಗೆ ಹಾಕಲು ಹೋದಾಗ ಕೆ.ಜಿ.ಗೆ 75 ಪೈಸೆಯಿಂದ 1 ರೂ.ಗೆ ಬೆಲೆ ಇಳಿದಿದೆ, ಡಬಲ್ ಇಂಜಿನ್ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿರುವ ರಾಜ್ಯ ಸರ್ಕಾರ, ರೈತರ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ತೆರವುಗೊಳಿಸಿದ್ದಾರೆ.


    400 ರೂ. ಇದ್ದ ಒಂದು ಚೀಲದ ಬೆಲೆ ಇದೀಗ 1,600 ಆಗಿದೆ. ಆದರೆ ಬಡ ರೈತ ಬೆಳೆಯುವ ತರಕಾರಿ ಬೆಳೆಗೆ ಬೆಲೆಯೇ ಸಿಗುತ್ತಿಲ್ಲ. ತಾನು ಬೆಳೆದ ಫಸಲನ್ನು ಮಾರುಕಟ್ಟೆಗೆ ಹಾಕಲು ಬಾಡಿಗೆ ಗಾಡಿಯ ಬಾಡಿಗೆ ಕಟ್ಟಲು ಆಗದಂತಹ ಪರಿಸ್ಥಿತಿಗೆ ಬಂದು ನಿಂತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.


    ಮುಖಂಡರಾದ ದೇವರಹಳ್ಳಿ ಕಾಂತರಾಜ್, ಕಳ್ಳಿಪುರದ ಕುಮಾರ, ವಿಜಯ್ ಕುಮಾರ್, ಪ್ರವೀಣ್ ನಾಯಕ್, ವಿಜಯ್ ಕುಮಾರ್, ಮಹೇಶ್, ಶಿವಕುಮಾರ್, ಸಿದ್ದರಾಜು, ನಂದ ಕುಮಾರ್, ಹಸಗೂಲಿ ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts