More

    ಜುಲೈನಲ್ಲಿ ದೇಸಿ ಜಗಲಿ ಕಥಾ ಕಮ್ಮಟ 

    ದಾವಣಗೆರೆ: ಬೆಂಗಳೂರಿನ ವೀರಲೋಕ ಪ್ರಕಾಶನ ಹಾಗೂ ಸಿದ್ಧಗಂಗಾ ಶಾಲೆ ಸಹಯೋಗದಲ್ಲಿ ದಾವಣಗೆರೆ ನಗರದಲ್ಲಿ ಜುಲೈ 8, 9ರಂದು ದೇಸಿ ಜಗಲಿ ಕಥಾ ಕಮ್ಮಟ ನಡೆಯಲಿದೆ.
    ಹಿರಿಯ ಕತೆಗಾರ ಕಾ.ತ.ಚಿಕ್ಕಣ್ಣ ಮತ್ತು ಲಕ್ಷ್ಮಣ ಕೊಡಸೆ ಮಾರ್ಗದರ್ಶನದಲ್ಲಿ ನಡೆಯಲಿರುವ ಕಮ್ಮಟಕ್ಕೆ ಸಾಹಿತ್ಯಾಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಕಮ್ಮಟದ ಜಿಲ್ಲಾ ಸಂಚಾಲಕ ಪಾಪು ಗುರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಎರಡೂ ದಿನವೂ ಊಟ-ಉಪಾಹಾರದ ವ್ಯವಸ್ಥೆ ಇದೆ. ನಾಡಿನ ಪ್ರಮುಖ ಕತೆಗಾರರು ಭಾಗವಹಿಸಿ ಕಥೆ ಕಟ್ಟುವಿಕೆ ಮತ್ತು ಅದರ ಸೂಕ್ಷತೆಗಳ ಬಗ್ಗೆ ಅವಲೋಕಿಸುವರು. ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸುವರು. ಉತ್ತಮ ಕಥೆಗಳು ವೀರಲೋಕ ಪ್ರಕಾಶನ ಅಡಿಯಲ್ಲಿ ಪುಸ್ತಕಗಳಾಗಿ ಮುದ್ರಣವಾಗಲಿವೆ. 25 ಜನರಿಗೆ ಅವಕಾಶವಿದ್ದು ಎಲ್ಲರಿಗೂ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು.
    ಸಂತೆಬೆನ್ನೂರು ಫೈಜ್ನಟ್ರಾಜ್ ಮತ್ತು ಎಚ್.ಬಿ.ಇಂದ್ರಕುಮಾರ್ ಕಮ್ಮಟದ ನಿರ್ದೇಶಕರಾಗಿದ್ದಾರೆ. ಖ್ಯಾತ ಕತೆಗಾರ ಲೋಕೇಶ್ ಅಗಸನಕಟ್ಟೆ ಜು.8ರಂದು ಬೆಳಗ್ಗೆ 8 ಗಂಟೆಗೆ ಕಮ್ಮಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ. ಮಲ್ಲಿಕಾರ್ಜುಮ ಕಲಮರಹಳ್ಳಿ, ಜಸ್ಟಿನ್ ಡಿಸೌಜ ಭಾಗವಹಿಸುವರು.
    ಜು.9ರಂದು ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ವೀರಲೋಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್, ಹಿರಿಯ ಕತೆಗಾರ ಕಾ.ತ.ಚಿಕ್ಕಣ್ಣ, ಲಕ್ಷ್ಮಣ ಕೊಡಸೆ ಪಾಲ್ಗೊಳ್ಳುವರು ಎಂದರು.
    ಆಸಕ್ತರು ಠಿಠಿ://ಛಿಛ್ಟಿಚ್ಝಟಚಿಟಟ.್ಚಟಞ ಜಾಲತಾಣದಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಜೂ. 28ರೊಳಗೆ 9844187574 ವಾಟ್ಸಾೃಪ್ ಸಂಖ್ಯೆಗೆ ಕಳುಹಿಸಬೇಕು ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಂತೆಬೆನ್ನೂರು ಫೈಜ್ನಟ್ರಾಜ್, ಸದಾಶಿವ ಸೊರಟೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts