More

    ಜೀವ ಭಯದಲ್ಲಿ ರೈತರು

    ಶಿರಹಟ್ಟಿ: ತಾಲೂಕಿನ ಛಬ್ಬಿ ಗ್ರಾಮದ ರೈತರ ಜಮೀನಿನಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ರೈತರು ಆತಂಕದಲ್ಲೇ ದಿನ ದೂಡುವಂತಾಗಿದೆ.

    ರೈತರು ನೀರಾವರಿ ಆಶ್ರಿತ ಬೆಳೆ ಬೆಳೆಯುತ್ತಿದ್ದಾರೆ. 5-6 ದಿನಗಳ ಹಿಂದೆ ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಬೆಳೆ ಹಾಳಾಗಿದ್ದಲ್ಲದೆ, ಗಾಳಿಗೆ ವಿದ್ಯುತ್ ಕಂಬಗಳು ಬಿದ್ದು, ತಂತಿಗಳು ಹರಿದು ಬಿದ್ದಿವೆ. ಮತ್ತೆ ಕೆಲ ಕಂಬಗಳು ವಾಲಿದ್ದು, ತಂತಿಗಳು ಜೋತು ಬಿದ್ದಿವೆ.

    ಈ ಕುರಿತು ರೈತರು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಪ್ಪಿತಪ್ಪಿ ವಿದ್ಯುತ್ ಸಂಚಲನವಾದರೆ ಅನಾಹುತ ಗ್ಯಾರಂಟಿ. ಅಪಾಯದ ಮುನ್ಸೂಚನೆ ಇದ್ದರೂ ಹೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಒಂದು ವಾರದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು ರೈತರು ತೊಂದರೆ ಅನುಭವಿಸುತ್ತಿದ್ದಾರೆ.

    ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ಹೆಸ್ಕಾಂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮದ ರೈತರಾದ ವೀರೇಶ ಪಸಾರದ, ವೀರಣ್ಣ ಕೊಡ್ಲಿವಾಡ, ಹೊನ್ನಪ್ಪ ಪೂಜಾರ, ಈರಯ್ಯ ಹಿರೇಮಠ, ಶೇಕಣ್ಣ ಆಲೂರ, ಪ್ರದೀಪ ಭರಮನ್ಣವರ ಎಚ್ಚರಿಸಿದ್ದಾರೆ.

    ಮಳೆ ಬಂದಿದ್ದರಿಂದ ಹೊಲಗಳು ಹಸಿಯಾಗಿವೆ. ಹೀಗಾಗಿ ಸದ್ಯಕ್ಕೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ದುರಸ್ತಿ ಕಾರ್ಯ ಕೈಗೊಂಡರೆ ತುಳಿದಾಟದಿಂದ ಬೆಳೆ ಹಾಳಾಗುತ್ತದೆ. ಹೀಗಾಗಿ, ಭೂಮಿ ಒಣಗಿದ ನಂತರ ಪುನಃ ಕಂಬಗಳನ್ನು ಅಳವಡಿಸಲಾಗುತ್ತದೆ.

    | ವಿ.ಐ.ಬಡಿಗೇರ, ಹೆಸ್ಕಾಂ ಶಾಖಾ ವ್ಯವಸ್ಥಾಪಕರು. ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts