More

    ಜೀವ ಉಳಿಸಲು ವಿಜ್ಞಾನ, ತಂತ್ರಜ್ಞಾನ ಅವಶ್ಯಕ

    ಬೆಳಗಾವಿ: ವಿಜ್ಞಾನ ಮತ್ತು ತಂತ್ರಜ್ಞಾನ ಜೀವ ಉಳಿಸಲು ಪ್ರಮುಖ ಪಾತ್ರ ವಹಿಸುತ್ತಿದ್ದು, ರಕ್ತದಲ್ಲಿರುವ ವಿವಿಧ ಉತ್ಪನ್ನಗಳನ್ನು ಬೇರ್ಪಡಿಸಿ ರೋಗಿಗೆ ಅವಶ್ಯವಿರುವ ರಕ್ತದ ಉತ್ಪನ್ನ ಮಾತ್ರ ನೀಡಲು ಸಹಕಾರಿಯಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ತಿಳಿಸಿದರು.

    ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಇವುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಯಾವುದೇ ಒಂದು ಶಸ್ತ್ರಚಿಕಿತ್ಸೆ ನೆರವೇರಬೇಕಾದರೆ ರಕ್ತವು ಅತ್ಯವಶ್ಯವಾಗಿ ಬೇಕು. ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ಅತ್ಯಂತ ಕಠಿಣ ಮತ್ತು ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತೀವ್ರವಾಗಿರುತ್ತದೆ. ಆದ್ದರಿಂದ ದಾನಿಗಳು ರಕ್ತವನ್ನು ನೀಡಲು ಮುಂದೆ ಬರಬೇಕು ಎಂದರು.

    ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿ, ಹೆರಿಗೆ ಸಂದರ್ಭದಲ್ಲಂತೂ ಮಹಿಳೆಯರಿಗೆ ರಕ್ತದ ಅವಶ್ಯಕತೆ ತೀವ್ರವಾಗಿರುತ್ತದೆ. ಕೆಲವು ಮಕ್ಕಳಲ್ಲಿ ರಕ್ತದ ಉತ್ಪಾದನೆಯಾಗುವುದಿಲ್ಲ. ಅಂತ ಮಕ್ಕಳಿಗೆ ನಿರಂತರವಾಗಿ ರಕ್ತ ನೀಡಬೇಕಾಗುತ್ತದೆ. ಆದ್ದರಿಂದ ರಕ್ತದ ಕೊರತೆ ನೀಗಿಸುವಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತೀವ್ರವಾಗಿರುತ್ತದೆ ಎಂದರು. ರೆಡಕ್ರಾಸ್ ಸಂಸ್ಥೆಯ ಅಶೋಕ ಬದಾಮಿ, ಡಾ. ಅವಿನಾಶ ಕವಿ ,ರಕ್ತ ಭಂಡಾರದ ಮುಖ್ಯಸ್ಥ ಡಾ. ಎಸ್.ವಿ. ವಿರಗಿ, ಡಾ. ಬಿ.ಎನ್. ಮಿಸಾಳೆ, ಡಾ. ವಿನೋದಿ ಶರ್ಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts