More

    ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

    ಬೆಳಗಾವಿ: ವಿದ್ಯಾರ್ಥಿಗಳ ವೃತ್ತಿ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮಾಜಿ ಚೇರ್ಮನ್, ಡೀನ್ ಡಾ.ಸಿ.ರಾಜಶೇಖರ ಹೇಳಿದರು.

    ಇಲ್ಲಿನ ಆರ್.ಎಲ್.ಕಾನೂನು ಮಹಾವಿದ್ಯಾಲಯದ ಐಕ್ಯುಎಸಿ ವತಿಯಿಂದ ಬುಧವಾರ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ದಿ.ಡಿ.ಸಿ.ಪಾವಟೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೀಡಿದ ಕೊಡುಗೆ ಸ್ಮರಣೀಯ ಎಂದ ಅವರು, ‘ಕಾನೂನು ಬೋಧನೆಯಲ್ಲಿ ಸಂಶೋಧನೆಯ ಬಳಕೆ’ ವಿಷಯವಾಗಿ ವಿವರಣೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಪ್ರೊ. ಜಿ.ಎಂ.ವಾಘ ಮಾತನಾಡಿ, ಕಾನೂನು ಕಲಿಕೆ ಕಾಲ-ಕಾಲಕ್ಕೆ ಹಲವು ಹೊಸ ಹೊಸ ವಿಷಯಗಳು ಸೇರ್ಪಡೆಗೊಳ್ಳುತ್ತಿರುತ್ತವೆ. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರು ಅವುಗಳ ಬಗ್ಗೆ ಮಾಹಿತಿ ಹೊಂದಿರುವ ಅವಶ್ಯಕತೆ ಇದೆ ಎಂದರು. ಆರ್.ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ 83 ವರ್ಷಗಳ ಸಾಧನೆ ತಿಳಿಸಿದರು. ಅಧ್ಯಾಪಕರು ಆಯಾ ವಿಷಯಗಳಲ್ಲಿ ಪರಿಷ್ಕೃತ ಜ್ಞಾನ ಹೊಂದಿರಬೇಕು ಎಂದು ಸಲಹೆ ನೀಡಿದರು. ಆರ್.ಎಲ್. ಕಾನೂನು ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಪ್ರೊ. ವಿ.ಎನ್. ಜೋಶಿ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನ, ಬೋಧನೆಯ ವಾಸ್ತವ ವಿಧಾನಗಳನ್ನು ತಿಳಿಸಿದರು. ಐಕ್ಯೂಎಸಿ ಸೆಲ್ ಕಾರ್ಯಕ್ರಮ ಆಯೋಜಿಸಿತ್ತು. ಸ್ನೇಹಾ ಕುಲಕರ್ಣಿ ಪ್ರಾರ್ಥಿಸಿದರು. ಸಮರ್ಥ ಸಾಲಿಮಠ ನಿರೂಪಿಸಿದರು. ಪ್ರೊ.ಪಿ.ಎ.ಯಜುರ್ವೇದಿ ವಂದಿಸಿದರು. ವಿವಿಧ ಕಾನೂನು ಕಾಲೇಜುಗಳ ಅಧ್ಯಾಪಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts