More

    ಜೀವನದಲ್ಲಿ ಮಾನವೀಯತೆಯ ಪ್ರಜ್ಞೆ ಮೂಡಿಸಿಕೊಳ್ಳಿ

    ಯಾದಗಿರಿ: ಅಕಾರಿಗಳು ಗ್ರಾಮೀಣ ಭಾಗದಲ್ಲಿನ ಜನರ ಸೇವೆ ಮಾಡುವ ಜತೆಗೆ ಜೀವನದಲ್ಲಿ ಮಾನವಿಯತೆಯ ಪ್ರಜ್ಞೆ ಮೂಡಿಸಿಕೊಳ್ಳುವಂತೆ ಗುರಮಠಕಲ್ ಶಾಸಕ ನಾಗನಗೌಡ ಕಂದಕೂರ ಸಲಹೆ ನೀಡಿದರು.

    ಸೋಮವಾರ ಇಲ್ಲಿನ ಶಾಸಕರ ಜನಸಂಪರ್ಕ ಕಾಯರ್ಾಲಯದಲ್ಲಿ ಟೀಮ್ಎಸ್ಎನ್ಕೆ ಬಳಗ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಕಲಚೇತನರ ಉಚಿತ ಆರೋಗ್ಯ ತಪಾಸಣೆ ಮತ್ತು ವಿಶಿಷ್ಟ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನವರಾತ್ರಿ ಹಬ್ಬದ ಮೊದಲದಿನ ಈ ಶಿಬಿರ ಆಯೋಜನೆ ಮಾಡಿರುವುದು ಸಮಯೋಚಿತವಾಗಿದೆ ಎಂದರು.

    ಬಳಗದ ಅದ್ಯಕ್ಷ ನರಸಪ್ಪ ಕವಡೆ ಪ್ರಾಸ್ತಾವಿಕ ಮಾತನಾಡಿ, ನಮ್ಮ ಬಳಗದಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಭೇಟಿ ನೀಡಿ ಮಹಿಳೆಯರಿಗೆ ಉಚಿತವಾಗಿ ವಿಧವಾ ವೇತನ, ಪಿಂಚಣಿ ಹಣ ಕೈ ಸೇರಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಗುರಮಠಕಲ್ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಇಂಥ ಜನಪರ ಶಾಸಕರನ್ನು ಕಂಡಿರಲಿಲ್ಲ ಎಂದರು.

    ಜಿಲ್ಲಾ ಮಲೇರಿಯಾ ನಿಯಂತ್ರಣಾಕಾರಿ ಡಾ.ಲಕ್ಷ್ಮೀಕಾಂತ್ ಒಂಟಿಪೀರ, ಶಾಸಕ ನಾಗನಗೌಡ ಅವರು ಬಡ ವರ್ಗದ ಜನರ ಕಲ್ಯಾಣಕ್ಕಾಗಿ ಸದಾ ಶ್ರಮಿಸುವ ವ್ಯಕ್ತಿತ್ವ ಹೊಂದಿದ್ದಾರೆ. ಇಲಾಖೆ ಅಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಹೇಳಿದರು.

    ಜಿಲ್ಲಾ ಆರೋಗ್ಯಾಕಾರಿ ಡಾ.ಗುರುರಾಜ ಹಿರೇಗೌಡರ ಮಾತನಾಡಿ, ಜಿಲ್ಲೆಯಲ್ಲಿ ಯುಡಿಐಡಿ ನೋಂದಣಿಗೆ 6309 ವಿಚಲಚೇತನರು ಅಜರ್ಿ ಸಲ್ಲಿಸಿದ್ದಾರೆ. ಕೆಲ ತಾಂತ್ರಿಕ ಕಾರಣಗಳಿಂದ ವಿಲೇವಾರಿ ಮಾಡಿಲ್ಲ. 15 ದಿನಗಳ ಒಳಗಾಗಿ ಚೀಟಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts