More

    ಜೀವನದಲ್ಲಿ ನೈತಿಕ ಶಿಕ್ಷಣ ಅಳವಡಿಸಿಕೊಳ್ಳಿ

    ಕುಶಾಲನಗರ: ಬದುಕು ಕಟ್ಟಿಕೊಳ್ಳಲು ಬೇಕಾಗಿರುವ ವೃತ್ತಿಪರ ಶಿಕ್ಷಣ, ತಾಂತ್ರಿಕ ಶಿಕ್ಷಣದ ಜತೆಗೆ ಜೀವನಕ್ಕೆ ಬೇಕಾಗಿರುವ ನೈತಿಕ ಶಿಕ್ಷಣ ಅಳವಡಿಸಿಕೊಳ್ಳಿ ಎಂದು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಸಮೀಪದ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘10ನೇ ತರಗತಿಯ ನಂತರ ಮುಂದೇನು?..’ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಜಿಜ್ಞಾಸೆಗೆ ಒಳಗಾಗದೆ ಧೈರ್ಯವಾಗಿ ಎದುರಿಸಲು ಎಂದು ಸಲಹೆ ನೀಡಿದರು. 10ನೇ ತರಗತಿಯ ಪರೀಕ್ಷೆ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.

    ಕುಶಾಲನಗರ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ನಾಗರಾಜ್ ಮಾತನಾಡಿ, ಪಠ್ಯಪುಸ್ತಕಗಳನ್ನು ಚೆನ್ನಾಗಿ ಓದಬೇಕು. ಪುಸ್ತಕಗಳನ್ನು ಓದಿದಷ್ಟು ಜ್ಞಾನ ವಿಶಾಲವಾಗುತ್ತೆ. ಪುಸ್ತಕಗಳನ್ನು ತಲೆ ತಗ್ಗಿಸಿ ಓದಿದರೆ, ಮುಂದೊಂದು ದಿನ ಪುಸ್ತಕಗಳು ನಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತವೆ ಎಂದರು. ಓದುವಾಗ ಇಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು.

    ಉಪನ್ಯಾಸಕರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಗೌರವಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ.ಶಿವಪ್ಪ, ಕುಶಾಲನಗರ ಪಾಲಿಟೆಕ್ನಿಕ್ ಸಿವಿಲ್ ವಿಭಾಗದ ಮುಖ್ಯಸ್ಥ ಲೋಕೇಶ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ನಾಗೇಂದ್ರ, ಹೆಬ್ಬಾಲೆಯ ಮಾಜಿ ಯೋಧ ಪುಟ್ಟೇಗೌಡ, ಮುಖ್ಯಶಿಕ್ಷಕ ಬಸವರಾಜ್ ಶೆಟ್ಟಿ, ಶಿಕ್ಷಕರಾದ ವೆಂಕಟ್ ನಾಯಕ್, ಸಿ.ಡಿ.ಲೋಕೇಶ್, ಕವಿತಾ, ಭೋಜೇಗೌಡ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts