More

    ಜೀವನಕ್ಕೂ ಅನ್ವಯವಾಗಲಿ ಶಾಲಾ ಶಿಕ್ಷಣ  -ವಾಗ್ಮಿ ಎಚ್.ಬಿ. ಮಂಜುನಾಥ್ ಆಶಯ 

    ದಾವಣಗೆರೆ: ಶಾಲಾ ತರಗತಿಗಳಲ್ಲಿ ಪಡೆಯುವ ಶಿಕ್ಷಣ ವಾರ್ಷಿಕ ಪರೀಕ್ಷೆಗೆ ಸೀಮಿತವಾಗಿಸದೆ ಜೀವನ ನಿಭಾಯಿಸಲು ಬಳಸಿದಲ್ಲಿ ಸಾಧನೆ ಮಾಡಬಹುದು ಎಂದು ವಾಗ್ಮಿ ಎಚ್.ಬಿ. ಮಂಜುನಾಥ್ ಹೇಳಿದರು.
    ಹಿಮಾಲಯನ್ ಅಡ್ವೆಂಚರ್ ಆ್ಯಂಡ್ ನೇಚರ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ದಾವಣಗೆರೆ ಸಹಯೋಗದಲ್ಲಿ, ನಗರದ ಸಂತಪೌಲರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬುದ್ಧಿಮತ್ತೆಯಲ್ಲಿ ಭಾರತ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ ಎಂಬುದು ಅನಾದಿಕಾಲದಿಂದಲೂ ತಿಳಿದುಬಂದಿದೆ. ಇತ್ತೀಚಿನ ಚಂದ್ರಯಾನದ ಯಶಸ್ಸು ಇದನ್ನು ಪುಷ್ಟಿಗೊಳಿಸಿದೆ ಎಂದರು.
    ಶೀಘ್ರದಲ್ಲೇ ಭಾರತ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಪ್ರಕಟಗೊಳ್ಳಲಿದೆ. ಇಲ್ಲಿನ ಯುವಶಕ್ತಿಯು ವಿಶ್ವವನ್ನೇ ಆಳುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕ ಶಿಕ್ಷಣವನ್ನು ಸಹ ಪಠ್ಯೇತರವಾಗಿ ಶಾಲಾ ಕಾಲೇಜುಗಳು ನೀಡಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಜೀವನದ ಪರೀಕ್ಷೆಯಲ್ಲೂ ಯಶಸ್ಸು ಗಳಿಸಬೇಕು ಎಂದರು.
    ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ವಿ. ಸೋಮಶೇಖರ್ ಮಾತನಾಡಿ ಮುಗ್ಧ ಮನದಲ್ಲಿ ಅಕ್ಷರಗಳನ್ನು ಬಿತ್ತಿ ಜ್ಞಾನದ ಬೆಳೆ ಬೆಳೆದು ಸುಂದರ ನಾಡನ್ನು ನಿರ್ಮಿಸುವವರೇ ಶಿಕ್ಷಕರು. ಚಂದ್ರಯಾನದ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳ ಸಾಧನೆಯ ಹಿಂದೆ ಅವರ ಗುರುಗಳ ಪಾತ್ರವೂ ದೊಡ್ಡದಿದೆ ಎಂದರು.
    ಸಂತಪೌಲರ ಶೈಕ್ಷಣಿಕ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ ಮಾತನಾಡಿ ಜ್ಞಾನ ದಾನ ಮಾಡುವ ಶಿಕ್ಷಕರಲ್ಲಿ ತಾಳ್ಮೆ ಬೇಕಿದೆ. ರೂಪ, ಅಂತಸ್ತು-ಅಧಿಕಾರಗಳಿಂದ ಆಚೆಗಿರುವ ಜ್ಞಾನಕ್ಕೆ ಬೆಲೆ ಕೊಡಬೇಕು ಎಂದರು.
    ಪ್ರಾಚಾರ್ಯ ಕೆ.ಟಿ.ಮೇಘನಾಥ್ ಮಾತನಾಡಿದರು. ಯುವ ಸಂಘಗಳ ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷ ಎನ್.ಕೆ. ಕೊಟ್ರೇಶ್ ಪ್ರಾಸ್ತಾವಿಕ ಮಾತನಾಡಿದರು. ಅಶೋಕ್‌ಭಟ್, ದೀಪು, ನಾಗರಾಜ್, ಪ್ರಕಾಶ್ ಇದ್ದರು.
    ಶಿಕ್ಷಕರಾದ ಆರ್. ವಿಶ್ವನಾಥ, ನೂರ್‌ಜಹಾನ್, ಡೆಬೋರಾ ಪಿಯರ್ಸನ್, ರಮೇಶ್ ಎಲಿಗಾರ್, ಎಚ್. ಎನ್.ಶ್ವೇತಾ, ಎಂ.ಮೇಘನಾ, ಎಚ್.ಎಂ.ಸಿಂಧು ಇತರರನ್ನು ಗೌರವಿಸಲಾಯಿತು. ಪತ್ರಕರ್ತ ಚನ್ನಬಸವ ಶೀಲವಂತ್ ಕಾರ್ಯಕ್ರಮ ನಿರೂಪಿಸಿದರು. ಸಿಂಧು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts