More

    ಜಿಲ್ಲೆಯ 9 ಜನರಲ್ಲಿ ಕರೊನಾ ಪಾಸಿಟಿವ್

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಸೋಮವಾರ 9 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 175ಕ್ಕೇರಿದಂತಾಗಿದೆ. 56 ಜನ ಗುಣವಾಗಿ ಬಿಡುಗಡೆಗೊಂಡಿದ್ದು, 117 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಸೋಮವಾರ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ 6, ಹಾವೇರಿ ತಾಲೂಕಿನಲ್ಲಿ 1, ಹಾನಗಲ್ಲ 1, ರಟ್ಟಿಹಳ್ಳಿ ತಾಲೂಕಿನಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಸೋಮವಾರ 19ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

    ಶಿಗ್ಗಾಂವಿ ಪಟ್ಟಣದ ಹಳೇಪೇಟೆ ಓಣಿಯ 37 ವರ್ಷದ ಮಹಿಳೆ, 70 ವರ್ಷದ ಪುರುಷ, 60 ವರ್ಷದ ಮಹಿಳೆ, ಮೌಲಾಲಿ ಗುಡ್ಡದ ಓಣಿಯ 48 ವರ್ಷದ ಪುರುಷ, ಮೆಹಬೂಬ್ ನಗರದ 45 ಪುರುಷನಿಗೆ, ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಕೆಲಗೇರಿ ಓಣಿಯ 39 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಎಲ್ಲರೂ ಕಂಟೇನ್ಮೆಂಟ್ ಜೋನ್​ನ ವಾಸಿಗಳು.

    ಹಾವೇರಿಯ ಶಿವಲಿಂಗ ನಗರದ 38 ವರ್ಷದ ಪುರುಷ, ಹಾನಗಲ್ಲ ತಾಲೂಕು ಅಕ್ಕಿಆಲೂರನ ಕೆಳಗಿನ ಓಣಿಯ 30 ವರ್ಷದ ಮಹಿಳೆ, ರಟ್ಟಿಹಳ್ಳಿ ತಾಲೂಕಿನ ರಾಮತೀರ್ಥದ 65 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ನಿಗಧಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಟ್ರಾವೆಲ್ ಹಿಸ್ಟರಿ: ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಕೆಲಗೇರಿ ಓಣಿಯ 39 ವರ್ಷದ ಪುರುಷ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಜ್ವರದ ಲಕ್ಷಣದ ಹಿನ್ನೆಲೆಯಲ್ಲಿ ಜು. 2ರಂದು ಸ್ವ್ಯಾಬ್ ಟೆಸ್ಟ್​ಗೆ ಕಳುಹಿಸಲಾಗಿತ್ತು. ಜು. 5ರಂದು ಈತನಿಗೆ ಪಾಸಿಟಿವ್ ವರದಿ ಬಂದಿದೆ. ಈತನ ಸಂಪರ್ಕ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

    ಹಾನಗಲ್ಲ ತಾಲೂಕಿನ ಅಕ್ಕಿಆಲೂರನ 30 ವರ್ಷದ ಮಹಿಳೆ ಕೆಳಗಿನ ಓಣಿಯಲ್ಲಿ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು, ಈ ಮೊದಲು ಪಾಸಿಟಿವ್ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಜು. 3ರಂದು ಸ್ವ್ಯಾಬ್ ಟೆಸ್ಟ್​ಗೆ ಕಳುಹಿಸಲಾಗಿತ್ತು. ಜು. 5ರಂದು ಪಾಸಿಟಿವ್ ಬಂದಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಐದು ಜನ ಪ್ರಾಥಮಿಕ ಹಾಗೂ 13 ಜನ ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚಲಾಗಿದೆ. ಇವರನ್ನು ಹೋಂ ಕ್ವಾರಂಟೈನ್​ನಲ್ಲಿರಿಸಲಾಗಿದೆ.

    ರಟ್ಟಿಹಳ್ಳಿ ತಾಲೂಕಿನ 65 ವರ್ಷದ ಪುರುಷ ರಾಮತೀರ್ಥದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಈ ಹಿಂದೆ ಪಾಸಿಟಿವ್ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದ. ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜು. 4ರಂದು ಸ್ವ್ಯಾಬ್ ಸಂಗ್ರಹಿಸಲಾಗಿತ್ತು. ಜು. 5ರಂದು ಪಾಸಿಟಿವ್ ಬಂದಿದೆ.

    ಹಾವೇರಿಯ 38 ವರ್ಷದ ಪುರುಷ ಶಿವಲಿಂಗ ನಗರದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದ. ಜ್ವರ ಮತ್ತು ಕೆಮ್ಮಿನ ಕಾರಣ ಜು. 2ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜು. 5ರಂದು ಪಾಸಿಟಿವ್ ಬಂದಿದೆ.

    ಸೋಂಕಿತರ ನಿವಾಸದ 100 ಮೀ. ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ಆಯಾ ತಾಲೂಕು ತಹಸೀಲ್ದಾರರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

    19 ಸೋಂಕಿತರು ಗುಣವಾಗಿ ಬಿಡುಗಡೆ

    ಶಿಗ್ಗಾಂವಿ ಗೌಡರ ಓಣಿಯ 85 ವರ್ಷದ ಮಹಿಳೆ, ಮೆಹಬೂಬ ನಗರದ 40 ವರ್ಷದ ಮಹಿಳೆ, ಸವಣೂರ ಖಾದರಬಾಗ್​ನ 9ತಿಂಗಳ ಮಗು, 27 ವರ್ಷದ ಪುರುಷ, ಶಿಗ್ಗಾಂವಿಯ ಕಂಟೇನ್ಮೆಂಟ್ ಜೋನ್ ನಿವಾಸಿ 71 ವರ್ಷದ ವೃದ್ಧ, ಹಾನಗಲ್ಲ ತಾಲೂಕು ತಿಳವಳ್ಳಿ ಗ್ರಾಮದ 27 ವರ್ಷದ ಪುರುಷ, ಹಾನಗಲ್ಲನ 37 ವರ್ಷದ ಆಶಾ ಕಾರ್ಯಕರ್ತೆ, ಹಾವೇರಿ ತಾಲೂಕು ಗುತ್ತಲದ 43 ವರ್ಷದ ಪುರುಷ, ಯಮ್ಮಿಗನೂರನ 45 ವರ್ಷದ ಆಶಾ ಕಾರ್ಯಕರ್ತೆ, ಕೋಡದ 49 ವರ್ಷದ ಆಶಾ ಕಾರ್ಯಕರ್ತೆ, ಸುತ್ತಕೋಟಿಯ 42 ವರ್ಷದ ಆಶಾ ಕಾರ್ಯಕರ್ತೆ, ನೂಲಗೇರಿಯ 41 ವರ್ಷದ ಮಹಿಳೆ, ರಟ್ಟಿಹಳ್ಳಿ ತಾಲೂಕು ರಾಮತೀರ್ಥದ 27 ವರ್ಷದ ಪುರುಷ, ಗುಡ್ಡದಮಾದಾಪುರದ 40 ವರ್ಷದ ಆಶಾ ಕಾರ್ಯಕರ್ತೆ, ಮಾಸೂರನ 34 ವರ್ಷದ ಮಹಿಳೆ, ಶಿಗ್ಗಾಂವಿ ದೇಸಾಯಿಗಲ್ಲಿಯ ಆರು ವರ್ಷದ ಬಾಲಕ, 28ವರ್ಷದ ಮಹಿಳೆ, 65 ವರ್ಷದ ಮಹಿಳೆ, ಹಾನಗಲ್ಲ ತಾಲೂಕಿನ ಕಂಚಿನೆಗಳೂರಿನ 24 ವರ್ಷದ ಪುರುಷ ಗುಣವಾಗಿ ಸೋಮವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts