More

    ಜಿಲ್ಲೆಯಲ್ಲಿ ಮಹಿಳೆಗೆ ಅವಕಾಶ ನೀಡಿದ ಬಿಜೆಪಿ

    ನಾಗಮಂಗಲ: ವಿಧಾನಸಭೆ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲೇ ಮಹಿಳೆಗೆ ಅವಕಾಶ ಕಲ್ಪಿಸಿರುವುದು ನಾಗಮಂಗಲ ಕ್ಷೇತ್ರದಲ್ಲಿ ಮಾತ್ರ ಎಂದು ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಹೇಳಿದರು.


    ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ನಂತರ ಶ್ರೀಸೌಮ್ಯಾಕೇಶವಸ್ವಾಮಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಮಹಿಳೆಗೆ ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಶಾಸಕಿಯಾಗಿ ಅಭಿವೃದ್ಧಿ ಕೆಲಸ ಹಾಗೂ ಜನರ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.


    ಬಿಜೆಪಿ ಮಹಿಳೆಯರಿಗೆ ಗೌರವ ಕೊಡುವ ಜತೆಗೆ ಅವಕಾಶವನ್ನು ನೀಡುವ ಪಕ್ಷವಾಗಿದೆ. ಬಿಜೆಪಿ ವರಿಷ್ಠರು ಯಾವುದೇ ಒತ್ತಡಗಳಿಗೆ ಮಣಿದು ಯಾರಿಗೂ ಟಿಕೆಟ್ ನೀಡುವುದಿಲ್ಲ. ತಾಲೂಕಿನ ಜನತೆ ಮನಸ್ಸು ಮಾಡಿ ಈ ಬಾರಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ ಅವರು, ಮಹಿಳೆಯರಿಗೆ ಎಲ್ಲಿ ಸ್ಥಾನಮಾನ ನೀಡಬೇಕೆಂದು ಬಿಜೆಪಿ ಮಾತ್ರ ಯೋಚಿಸುವ ಪಕ್ಷವಾಗಿದೆ. ನಿರ್ಮಲಾ ಸೀತಾರಾಮನ್, ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಉನ್ನತ ಸ್ಥಾನ ನೀಡಿದೆ ಎಂದು ತಿಳಿಸಿದರು.


    ಬೃಹತ್ ರ‌್ಯಾಲಿ ನಡೆಸಿ ನಾಮಪತ್ರ ಸಲ್ಲಿಕೆ: ನಾಗಮಂಗಲ ಟಿಬಿ ಬಡಾವಣೆಯ ಬಿಜಿಎಸ್ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ರ‌್ಯಾಲಿ ಮೂಲಕ ಆಗಮಿಸಿ ಸುಧಾಶಿವರಾಮೇಗೌಡ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದು ಪಟ್ಟಣದಲ್ಲಿ ಬಿಜೆಪಿ ಬಾವುಟಗಳು ರಾರಾಜಿಸಿದವು.
    ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಪುತ್ರ ಎಲ್.ಎಸ್.ಚೇತನ್‌ಗೌಡ, ಸೊಸೆ ಡಾ.ಶ್ರುತಿ, ಪುತ್ರಿ ಭವ್ಯಾಗೌಡ, ನಾಗಮಂಗಲ ಬಿಜೆಪಿ ಉಸ್ತುವಾರಿ ಮಾರುತಿ ಪವಾರ್, ಬಿಜೆಪಿ ತಾಲೂಕು ಅಧ್ಯಕ್ಷ ಸೋಮಶೇಖರ್, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಪಾಳ್ಯರಘು, ಟಿ.ಕೆ.ರಾಮೇಗೌಡ, ಮಂಜೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts