More

    ಜಿಲ್ಲೆಯಲ್ಲಿ ಮರಳು ಸಹಾಯವಾಣಿ ಶೀಘ್ರ

    ಕಾರವಾರ: ಅಂಕೋಲಾ, ಶಿರಸಿ, ದಾಂಡೇಲಿ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಮರಳು ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅವರು ಈ ಸಂಬಂಧ ಸೂಚಿಸಿದರು. ಮರಳು ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಲು ಬೇಕಾದ ಸ್ಥಳಗಳನ್ನು ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು ಗುರುತಿಸಬೇಕು ಎಂದರು.

    ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಮರಳು ಸಿಗುತ್ತಿಲ್ಲ. ಸಿಕ್ಕರೂ ದುಪ್ಪಟ್ಟು ಬೆಲೆ ನೀಡಬೇಕು ಎಂಬ ಆರೋಪವಿದೆ. ಇದನ್ನು ಸರಿಪಡಿಸಲು ಮರಳು ಸಹಾಯವಾಣಿ ತೆರೆಯಲು ಈಗಾಗಲೇ ಕ್ರಮ ವಹಿಸಲಾಗಿದೆ. ಸಾರ್ವಜನಿಕರು ತಮಗೆ ಅವಶ್ಯಕವಾಗಿರುವ ಮರಳಿನ ಪ್ರಮಾಣವನ್ನು ಈ ಸಹಾಯವಾಣಿಗೆ ತಿಳಿಸಿದಲ್ಲಿ, ತಾಲೂಕು ಮರಳು ಉಸ್ತುವಾರಿ ಸಮಿತಿಯು ಅದಕ್ಕೆ ಅನ್ವಯಿಸುವ ದರವನ್ನು ನಿಗದಿಪಡಿಸಲಿದೆ. ಸಮಿತಿ ಸೂಚಿಸುವ ಮರಳು ಪೂರೈಕೆದಾರರಿಗೆ ಹಣ ಪಾವತಿಸಿ ಮರಳು ಪಡೆಯಬಹುದು. ಈ ವ್ಯವಸ್ಥೆ ಸಂಪೂರ್ಣವಾಗಿ ಸರ್ಕಾರಿ ನಿಯಂತ್ರಣದಲ್ಲಿ ನಡೆಯಲಿದೆ. ಇದರಿಂದ ಸಾಮಾನ್ಯ ನಾಗರಿಕರಿಗೆ ಯೋಗ್ಯ ದರದಲ್ಲಿ ಮರಳು ದೊರೆಯಲಿದೆ ಎಂದರು.

    ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಗಣಿ ಇಲಾಖೆಯ ಉಪ ನಿರ್ದೇಶಕರಾದ ಸೋಮಶೇಖರ, ನಿರ್ವಿುತಿ ಕೇಂದ್ರದ ಯೋಜನಾ ನಿರ್ದೇಶಕರಾದ ಹರ್ಷ ಸಭೆಯಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts