More

    ಜಿಲ್ಲೆಯಲ್ಲಿ ಉತ್ತಮ ಮಳೆ

    ಕಾರವಾರ: ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆಲ ದಿನಗಳಿಂದ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ಇಡೀ ದಿನ ಮೋಡದ ವಾತಾವರಣವಿದ್ದು, ಸಾಯಂಕಾಲದ ಸಣ್ಣದಾಗಿ ಮಳೆಯಾಗುತ್ತಿದೆ. ಅಣೆಕಟ್ಟೆಗಳಿಗೆ ಉತ್ತಮ ಒಳಹರಿವಿದೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 17.5, ಭಟ್ಕಳ-2.4, ಹಳಿಯಾಳ-31.6, ಹೊನ್ನಾವರ- 24.6, ಕಾರವಾರ- 26.3, ಕುಮಟಾ- 49.6, ಮುಂಡಗೋಡ- 22.4, ಸಿದ್ದಾಪುರ- 4.8, ಶಿರಸಿ- 9.5, ಜೊಯಿಡಾ- 37., ಯಲ್ಲಾಪುರದಲ್ಲಿ 35.2 ಮಿಮೀ ಮಳೆಯಾಗಿದೆ.

    ಶಿರೂರಿನಲ್ಲಿ ಮಳೆಗೆ ಮನೆ ಕುಸಿತ

    ಹೊನ್ನಾವರ: ಧಾರಾಕಾರ ಮಳೆಗೆ ಮನೆಯೊಂದು ಕುಸಿದು ಬಿದ್ದು ಲಕ್ಷಾಂತರ ರೂ. ಹಾನಿಯಾದ ಘಟನೆ ತಾಲೂಕಿನ ಶಿರೂರು ಹಳ್ಳಿಮೂಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

    ಶಿರೂರಿನ ಮಂಜುನಾಥ ಗಣಪತಿ ನಾಯ್ಕ ಅವರ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಮೇಲ್ಛಾವಣಿಗೆ ಹಾಕಲಾದ ಹೆಂಚು ಮತ್ತು ಕಟ್ಟಿಗೆ ಒಡೆದು ಹೋಗಿದೆ. ಮನೆಯೊಳಗಿದ್ದ ಆಹಾರ ಸಾಮಗ್ರಿ, ಪೀಠೋಪಕರಣಗಳು, ಇಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts