More

    ಜಿಲ್ಲೆಯಲ್ಲಿ ಇಳಿಯದ ಕರೊನಾ ಪ್ರವಾಹ

    ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 157 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1731ಕ್ಕೆ ಜಿಗಿದಿದೆ. ಮತ್ತೆ 8 ಜನ ಮೃತಪಟ್ಟಿದ್ದು, ಕರೊನಾಕ್ಕೆ ಬಲಿಯಾದವರ ಸಂಖ್ಯೆ 52ಕ್ಕೆ ಏರಿದೆ.

    ಶುಕ್ರವಾರ ದೃಢಪಟ್ಟ 157 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ.

    ಧಾರವಾಡ ತಾಲೂಕು: ಮದಿಹಾಳ ಅವಲಕ್ಕಿ ಓಣಿಯ 52 ವರ್ಷದ ಪುರುಷ, ಹೊಸಯಲ್ಲಾಪುರ ಬಸ್ತಿ ಓಣಿಯ 17 ವರ್ಷದ ಬಾಲಕ, ಕ್ಯಾರಕೊಪ್ಪ ಆನಂದನಗರದ 36 ವರ್ಷದ ಮಹಿಳೆ, ಎಮ್ಮಿಕೇರಿಯ 27 ವರ್ಷದ ಯುವತಿ, ಕೃಷಿ ವಿಶ್ವ ವಿದ್ಯಾಲಯದ 54ರ ಪುರುಷ, ಯತ್ತಿನಗುಡ್ಡದ 28ರ ಯುವಕ, ನವಲೂರ ಗ್ರಾಮದ 21ರ ಯುವತಿ, ಸತ್ತೂರ ಉದಯಗಿರಿಯ 32ರ ಯುವತಿ, ಜಿಲ್ಲಾ ಆಸ್ಪತ್ರೆಯ 37ರ ಪುರುಷ, ನೆಹರುನಗರ ಗೌಡರ ಕಾಲನಿಯ 61ರ ವೃದ್ಧ, ಹಾವೇರಿಪೇಟ ದ್ಯಾಮವ್ವನಗುಡಿ ಓಣಿಯ 24ರ ಯುವತಿ, ಕೃಷಿ ವಿವಿಯ 48ರ ಮಹಿಳೆ, ಆಜಾದ್​ನಗರದ 30ರ ಯುವಕ, ಗಾಂಧಿನಗರದ 23ರ ಯುವಕ, ಹೊಸಯಲ್ಲಾಪುರ ಹೆಂಬ್ಲಿ ಓಣಿಯ 48ರ ಪುರುಷ, 71ರ ವೃದ್ಧೆ, ನೆಹರುನಗರದ 51ರ ಮಹಿಳೆ, ನವಲೂರಿನ 25 ವರ್ಷದ ಯುವಕ, ಜಯನಗರ ಜನತಾ ಪ್ಲಾಟ್​ನ 35 ವರ್ಷದ ಮಹಿಳೆ, ಸಾರಸ್ವತಪುರದ 74ರ ವೃದ್ಧ, ಮಹಿಷಿ ಲೇಔಟ್​ನ 21ರ ಯುವತಿ, ವಿನಾಯಕನಗರ 3ನೇ ಕ್ರಾಸ್​ನ 60ರ ವೃದ್ಧೆ, ಕುಮಾರೇಶ್ವರ ನಗರ 3ನೇ ಕ್ರಾಸ್​ನ 62ರ ವೃದ್ಧ, ಹೊಸ ಎಪಿಎಂಸಿ ಬಳಿಯ 92ರ ವೃದ್ಧ, ವನಸಿರಿನಗರದ 37ರ ಪುರುಷ, ಶೆಟ್ಟರ ಕಾಲನಿಯ 70ರ ವೃದ್ಧೆ, ಮಂಗಳವಾರಪೇಟೆಯ ಮುದಿಮಾರುತಿ ಓಣಿಯ 38ರ ಮಹಿಳೆ, ತಲವಾಯಿ ಗ್ರಾಮದ 26 ವರ್ಷದ ಯುವತಿ, ಕೊಪ್ಪದಕೇರಿ ಮುನ್ಸಿಪಲ್ ಕಾಲನಿಯ 26ರ ಯುವತಿ, ನೆಹರುನಗರದ 34ರ ಯುವಕ, ಶೆಟ್ಟರ್ ಕಾಲನಿಯ 48 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

    ಹುಬ್ಬಳ್ಳಿ ತಾಲೂಕು: ಸಿದ್ಧಗಂಗಾ ಕಾಲನಿಯ 40 ವರ್ಷದ ಮಹಿಳೆ, ಕೇಶ್ವಾಪುರದ 65 ವರ್ಷದ ವೃದ್ಧ, ಹೊಸೂರ 1ನೇ ಕ್ರಾಸ್​ನ 24 ವರ್ಷದ ಯುವಕ, ಕೇಶ್ವಾಪುರದ 89ರ ವೃದ್ಧ, ಶಕ್ತಿ ಕಾಲನಿಯ 44 ವರ್ಷದ ಮಹಿಳೆ, ಅರವಿಂದ ನಗರದ 54ರ ಮಹಿಳೆ, ಸಾಯಿನಗರದ 45ರ ಪುರುಷ, ನವನಗರದ 45ರ ಮಹಿಳೆ, ಬ್ಯಾಳಿ ಓಣಿಯ 73ರ ವೃದ್ಧ, ಯಲ್ಲಾಪುರ ಓಣಿಯ 55 ವರ್ಷದ ಪುರುಷ, ನವನಗರದ 35ರ ಯುವಕ, ಕೇಶ್ವಾಪುರದ 35ರ ಯುವಕ, ಹಳೇಹುಬ್ಬಳ್ಳಿಯ 19ರ ಯುವಕ, ಕಸಬಾಪೇಟೆಯ 50 ವರ್ಷದ ಪುರುಷ, ತರ್ಲಘಟ್ಟದ 60 ವರ್ಷದ ವೃದ್ಧ, ವಿದ್ಯಾನಗರದ 78ರ ವೃದ್ಧ, ಮಂಟೂರ ರಸ್ತೆಯ 51 ವರ್ಷದ ಪುರುಷ, ಮಿಷನ್ ಕಾಂಪೌಂಡ್ ಹೆಬಿಕ್ ಓಣಿಯ 18 ವರ್ಷದ ಬಾಲಕ, ಕೇಶ್ವಾಪುರದ 34ರ ಯುವಕ, ವಿದ್ಯಾನಗರದ 55ರ ಪುರುಷ, ಅರವಿಂದನಗರ ಘೊಡಕೆ ಪ್ಲಾಟ್​ನ 38ರ ಮಹಿಳೆ, ಕೃಷ್ಣಾಪುರ ಓಣಿಯ 40ರ ಪುರುಷ, ಚಿಟಗುಪ್ಪಿ ಕ್ವಾರ್ಟ್​ಸ್ನ 3ರ ಮಹಿಳೆ, ಗಂಗಾಧರ ನಗರದ 23ರ ಯುವತಿ, ಮಂಜುನಾಥ ನಗರದ 49ರ ಪುರುಷ, ತಬೀಬ್​ಲ್ಯಾಂಡ್​ನ 19ರ ಬಾಲಕ, ಟಿಪ್ಪುನಗರದ 35ರ ಯುವಕ, ವಿಜಯನಗರದ 58ರ ಪುರುಷ, ಬೊಮ್ಮಾಪುರ ಓಣಿಯ 42 ಪುರುಷ, 26ರ ಯುವಕ, ಮಂಟೂರ ರಸ್ತೆಯ 50 ವರ್ಷದ ಪುರುಷ, ಘೊಡಕೆ ಓಣಿಯ 21ರ ಯುವಕ, ಕೆ.ಬಿ. ನಗರದ 50ರ ಮಹಿಳೆ, ಸುಳ್ಳ ಗ್ರಾಮದ 33 ವರ್ಷದ ಯುವಕ, ಕೃಷ್ಣಾನಗರದ 33ರ ಯುವತಿ, ಬಾಕಳೆ ಗಲ್ಲಿಯ 25ರ ಯುವಕ, ಚನ್ನಪೇಟೆಯ 4 ವರ್ಷದ ಬಾಲಕಿ, ಚಿಕ್ಕಮಠ ಓಣಿಯ 18 ವರ್ಷದ ಯುವಕ, 22 ವರ್ಷದ ಯುವತಿ, ಹೊಸೂರ ಓಣಿಯ 35 ವರ್ಷದ ಮಹಿಳೆ, ಮಂಗಳವಾರಪೇಟೆಯ 29 ವರ್ಷದ ಮಹಿಳೆ, ಅಯೋಧ್ಯಾನಗರದ 42ರ ಮಹಿಳೆ, ಚಿಕ್ಕಮಠ ಓಣಿಯ 45 ವರ್ಷದ ಮಹಿಳೆ, 72ರ ವೃದ್ಧ, 34ರ ಮಹಿಳೆ, ಕಸಬಾಪೇಟ ಪೊಲೀಸ್ ಠಾಣೆಯ 41 ವರ್ಷದ ಪುರುಷ, ತಾಜ ನಗರದ 26 ಮತ್ತು 27 ವರ್ಷದ ಯುವತಿಯರು, ಅಯೋಧ್ಯಾ ನಗರದ 20ರ ಯುವತಿ, ಆನಂದನಗರದ 40ರ ಪುರುಷ, ನಾರಾಯಣಸೋಫಾದ 49 ವರ್ಷದ ಮಹಿಳೆ, ಮಾರುತಿನಗರದ 10 ವರ್ಷದ ಬಾಲಕ, ಬೊಮ್ಮಾಪುರ ಕುಂಬಾರ ಓಣಿಯ 18 ವರ್ಷದ ಯುವತಿ, ಜವಳಿ ಪ್ಲಾಟ್​ನ 31ರ ಯುವತಿ, ದುರ್ಗದಬೈಲ್ ಉಳ್ಳಾಗಡ್ಡಿ ಓಣಿಯ 40ರ ಪುರುಷ, ಜೆ.ಪಿ. ನಗರದ 34ರ ಯುವಕ, ಅಂಬೇಡ್ಕರ ಕಾಲನಿಯ 23ರ ಯುವಕ, ನವನಗರದ 43ರ ಮಹಿಳೆ, 27ರ ಯುವಕ, 39 ಮಹಿಳೆ, ಬಾಣತಿಕಟ್ಟಾದ 11 ವರ್ಷದ ಬಾಲಕ, ಘೊಡಕೆ ಪ್ಲಾಟ್​ನ 70ರ ವೃದ್ಧೆ, 18 ವರ್ಷದ ಬಾಲಕ, ಕೌಲ್​ಪೇಟೆಯ 10 ವರ್ಷದ ಬಾಲಕ, ಅದರಗುಂಚಿ ಗ್ರಾಮದ 45 ವರ್ಷದ ಪುರುಷ, ಲೋಹಿಯಾನಗರದ 75 ವೃದ್ಧ, ಶಿರಡಿನಗರ 26 ವರ್ಷದ ಯುವಕ, ಯಲಿವಾಳ ಗ್ರಾಮದ 69 ವರ್ಷದ ವೃದ್ಧ, ಅಯೋಧ್ಯಾನಗರದ 23 ವರ್ಷದ ಯುವಕ, ಮಂಗಳವಾರಪೇಟೆಯ 72 ವರ್ಷದ ವೃದ್ಧೆ, ನವನಗರದ 34 ವರ್ಷದ ಯುವಕ, ಡಾಕಪ್ಪ ವೃತ್ತದ 42 ಪುರುಷ, 70 ವರ್ಷದ ವೃದ್ಧ, ನವನಗರದ 56 ವರ್ಷದ ಪುರುಷ, ವಿದ್ಯಾನಗರದ 30ರ ಯುವಕ, ಬಾಣತಿಕಟ್ಟಾದ 50ರ ಪುರುಷ, ಕಾರವಾರ ರಸ್ತೆ ಗೋಲ್ಡನ್ ಹೈಟ್ಸ್​ನ 34 ವರ್ಷದ ಮಹಿಳೆ, ಎನ್.ಎ. ನಗರದ 26 ಯುವಕ, ಗಣೇಶಪೇಟೆ ತಬೀಬ್​ಲ್ಯಾಂಡ್​ನ 51 ವರ್ಷದ ಪುರುಷ, ಅಯೋಧ್ಯಾನಗರದ 4 ವರ್ಷದ ಬಾಲಕ, ಪಾಟೀಲ ಗಲ್ಲಿಯ 27 ವರ್ಷದ ಯುವತಿ, ಕಸಬಾಪೇಟೆಯ 36 ವರ್ಷದ ಮಹಿಳೆ, ಅಲ್ತಾಫ್ ಪ್ಲಾಟ್​ನ 22ರ ಯುವತಿ, ಕೇಶ್ವಾಪುರ 1ನೇ ಕ್ರಾಸ್​ನ 41ರ ಪುರುಷ, ಗೋಕುಲ ರಸ್ತೆಯ 655ರ ವೃದ್ಧ, ಬ್ರೂಕ್ ರಸ್ತೆ ಆಫೀಸರ್ಸ್ ಕ್ವಾರ್ಟರ್ಸ್​ನ 37 ಯುವಕ, ಅಯೋಧ್ಯಾನಗರದ 32 ಯುವಕ, ಸೈಬರ್ ಕ್ರೖೆಂ ಪೊಲೀಸ್ ಠಾಣೆಯ 38 ವರ್ಷದ ಪುರುಷ, ಡಾಕಪ್ಪ ವೃತ್ತದ 62 ವೃದ್ಧೆ, 7 ವರ್ಷದ ಬಾಲಕಿ, ನವನಗರದ 45 ವರ್ಷದ ಪುರುಷ, ಹೆಗ್ಗೇರಿ ಮಾರುತಿನಗರದ 26ರ ಯುವತಿ, ಗಣೇಶಪೇಟೆ ಚಿಟಗುಪ್ಪಿ ಚಾಳದ 58ರ ಪುರುಷ, ಕೆಎಸ್​ಆರ್​ಟಿಸಿ ಕ್ವಾರ್ಟರ್ಸ್​ನ 9 ವರ್ಷದ ಬಾಲಕಿ, 13 ವರ್ಷದ ಬಾಲಕ, ನವನಗರದ 30 ವರ್ಷದ ಯುವತಿ, 32ರ ಯುವಕ, 28ರ ಯುವತಿ, ಗೋಪನಕೊಪ್ಪದ 23 ವರ್ಷದ ಯುವತಿ, ಸಂತೋಷನಗರ ಮಧುರಾ ಪಾರ್ಕ್​ನ 34 ವರ್ಷದ ಯುವಕ, ಶಹರ ಪೊಲೀಸ್ ಠಾಣೆ ಹಿಂಭಾಗದ 15 ವರ್ಷದ ಬಾಲಕ, ಬಾಣತಿಕಟ್ಟಾದ 40 ವರ್ಷದ ಮಹಿಳೆ, ಬ್ಯಾಹಟ್ಟಿ ಗ್ರಾಮದ 45 ವರ್ಷದ ಪುರುಷ, ಹೆಗ್ಗೇರಿ ಜಗದೀಶ ನಗರದ 17ರ ಬಾಲಕ, ಮಂಟೂರ ರಸ್ತೆಯ 70ರ ವೃದ್ಧ, ಡಾಕಪ್ಪ ವೃತ್ತದ 12 ವರ್ಷದ ಬಾಲಕಿ, ಜೈಭವಾನಿನಗರದ 50 ವರ್ಷದ ಪುರುಷ, ಉಣಕಲ್ ಶ್ರೀನಗರದ 37 ವರ್ಷದ ಯುವತಿ, ಅಯೋಧ್ಯಾನಗರ 3ನೇ ಕ್ರಾಸ್​ನ 50 ವರ್ಷದ ಮಹಿಳೆ, ನವನಗರದ 34 ವರ್ಷದ ಪುರುಷ, ಯಲ್ಲಾಪುರ ಓಣಿಯ 49 ವರ್ಷದ ಪುರುಷನಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

    ಕುಂದಗೋಳ ತಾಲೂಕು: ಯಲಿವಾಳ ಗ್ರಾಮದ 65 ವರ್ಷದ ವೃದ್ಧ, ಹಿರೇಹರಕುಣಿ ಗ್ರಾಮದ 55 ವರ್ಷದ ಪುರುಷ, ಸಂಶಿ ಗ್ರಾಮದ 21ಯುವಕನಿಗೆ ಸೋಂಕು ತಗುಲಿದೆ.

    ನವಲಗುಂದ ತಾಲೂಕು: ಶಿರಕೋಳ ಗ್ರಾಮದ 35 ವರ್ಷದ ಮಹಿಳೆ, ಶಿರಕೋಳ ಗ್ರಾಮದ 41ರ ಮಹಿಳೆ, 36ರ ಮಹಿಳೆ, 30 ವರ್ಷದ ಯುವಕ, ಮೊರಬ ಗ್ರಾಮದ 96ರ ವೃದ್ಧ ಹಾಗೂ ಕಲಘಟಗಿ ಪಟ್ಟಣದ 60 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.

    ಕೋವಿಡ್ ಕೇಂದ್ರದಲ್ಲಿ ಕರೋಕೆ ರಾಗ

    ಇಲ್ಲಿನ ಘಂಟಿಕೇರಿ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್​ಗೆ ದಾಖಲಾಗಿರುವ ಲಕ್ಷಣ ರಹಿತ ಕರೊನಾ ಸೋಂಕಿತರು ಶುಕ್ರವಾರ ಸಂಜೆ ಕರೋಕೆ ರಾಗಕ್ಕೆ ಹಾಡು ಹಾಡಿ ಮನರಂಜನೆ ಪಡೆದರು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪೂರಕ ಚಟುವಟಿಎಕ ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೂಚಿಸಿದ್ದರು. ಅದರಂತೆ ಉಪವಿಭಾಗಾಧಿಕಾರಿ ಮಹ್ಮದ ಜುಬೇರ್, ಡಾ. ಸಂಪತ್​ಸಿಂಗ್ ಸೇರಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಶುಶ್ರೂಷಕರು ಮನರಂಜನಾ ಕಾರ್ಯಕ್ರಮ ಸಂಯೋಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts