More

    ಜಿಲ್ಲೆಗೊಂದು ನಂದಿನಿ ಕ್ಷೀರ ಬ್ಯಾಂಕ್ ತೆರೆಯಲು ಸಿದ್ಧತೆ

    ಕೆಎಂಎಫ್ ನಿರ್ದೇಶಕ ಎಂ.ನಂಜುಂಡಸ್ವಾಮಿ ಮಾಹಿತಿ

    ಕೊಳ್ಳೇಗಾಲ: ಮುಂದಿನ ಆರು ತಿಂಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೊಂದು ನಂದಿನಿ ಕ್ಷೀರ ಬ್ಯಾಂಕ್ ತೆರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ನಿರ್ದೇಶಕ ಎಂ.ನಂಜುಂಡಸ್ವಾಮಿ ಹೇಳಿದರು.


    ತಾಲೂಕಿನ ಮಧುವನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂ

    ಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 2021-22ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
    ರಾಸುಗಳ ಸಾಕಾಣಿಕೆದಾರರ ಅಭಿವೃದ್ಧಿಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕೋಟ್ಯಂತರ ರೈತರು ತಮ್ಮ ಗ್ರಾಮಗಳಲ್ಲಿರುವ ಡೇರಿಗಳಿಗೆ ಗುಣಮಟ್ಟದ ಹಾಲನ್ನು ನೀಡುತ್ತಿದ್ದು. ನಂದಿನಿ ಸಂಸ್ಥೆಯ ಜಿಲ್ಲಾ ಹಾಲು ಒಕ್ಕೂಟ ಹಾಗೂ ಕೆಎಂಎಫ್ ಸಂಸ್ಥೆ ಮೂಲಕ ಶರವೇಗದಲ್ಲಿ ಮಾರಾಟವಾಗುತ್ತಿದೆ. ನಂದಿನಿ ಹಾಲಿಗೆ ಉತ್ತಮ ಬೇಡಿಕೆಯಿದೆ ಎಂದರು.


    ಎಂಡಿಸಿಸಿ ಬ್ಯಾಂಕ್ ಮಾದರಿಯಲ್ಲಿಯೇ ಕೆಎಂಎಫ್ ಸಂಸ್ಥೆ ತನ್ನೆಲ್ಲ ಹೈನುಗಾರಿಕೆ ಅವಲಂಬಿತ ರೈತರಿಗೆ ಅಗತ್ಯ ಆರ್ಥಿಕ ಸಾಲ ಸೌಲಭ್ಯ, ಹಸುವಿನ ಲೋನ್, ಚಿನ್ನದ ಮೇಲಿನ ಸಾಲ, ಕೃಷಿ ಸಾಲ ನೀಡಲು ನಂದಿನಿ ಕ್ಷೀರ ಬ್ಯಾಂಕ್ ಆರಂಭಿಸಲು ಸಿದ್ಧತೆ ಕೈಗೊಂಡಿದೆ. ಇದಕ್ಕೆ ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ ಎಂದರು.
    ಹೈನುಗಾರಿಕೆ ಅವಲಂಬಿತ ರೈತರು ತಪ್ಪದೆ ತನ್ನ ರಾಸುಗಳಿಗೆ ವೀಮೆ ಮಾಡಿಸುವುದನ್ನು ಮರೆಯಬಾರದು. ವಿಮೆಯ ಶೇ.75 ರಷ್ಟು ಹಣವನ್ನು ಜಿಲ್ಲಾ ಹಾಲು ಒಕ್ಕೂಟ ಭರಿಸುತ್ತಿದ್ದು, ರೈತ ಕೇವಲ ಶೇ.25 ರಷ್ಟು ಫಲಾನುಭವಿ ವಂತಿಕೆ ಮಾಡಿಸಿದರೆ ಸಾಕು. ಇದರಿಂದ ಆಕಸ್ಮಿಕವಾಗಿ ರಾಸುಗಳು ಸಾವನ್ನಪಿದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಮೆ ಹಣ ನಿಮ್ಮ ಕೈ ಸೇರಿ ಹೊಸದಾಗಿ ರಾಸು ಕೊಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

    ರಾಸು ಸಾಕಾಣಿಕೆದಾರ ಆಕಸ್ಮಿಕವಾಗಿ ಸಾವಿಗೀಡಾದಲ್ಲಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ದೊರೆಯುವ 15 ಸಾವಿರ ರೂ. ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕೆಎಂಎಫ್‌ನಿಂದ ದೊರೆಯುವ ಪ್ರೋತ್ಸಾಹಧನ, ವಿದ್ಯಾರ್ಥಿನಿಲಯದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts