More

    ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

    ಯಾದಗಿರಿ: ಕೆಇಎ ಪರೀಕ್ಷೆ ಅಕ್ರಮದ ಹಿಂದಿನ ಕಿಂಗ್ಪಿನ್ ಆರ್ಡಿ ಪಾಟೀಲ್ ಬಂಧನಕ್ಕೆ ಆಗ್ರಹಿಸಿ ಸೋಮವಾರ ಇಲ್ಲಿನ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಈ ಹಿಂದೆ ಪಿಎಸ್ಐ ಪರೀಕ್ಷೆಯಲ್ಲಿ ಕೋಟಿಗಟ್ಟಲೇ ಹಣ ಪಡೆದು ಡೀಲ್ ಕುದುರಿಸಿಕೊಂಡಿದ್ದ ಪಾಟೀಲ್, ಜೈಲಿಗೆ ಹೋಗಿ ಬಂದಿದ್ದಾನೆ. ಈ ಪರೀಕ್ಷೆಯಲ್ಲೂ ಸಹ ತನ್ನ ಹಳೇ ಆಟ ಮುಂದುವರೆಸಿದ್ದಾನೆ. ಆದರೂ, ಸರಕಾರ ಮಾತ್ರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಿಂದೆ ನಮ್ಮಸರಕಾರ ಅಧಿಕಾರದಲ್ಲಿದ್ದಾಗ ಮೇಲಿಂದ ಮೇಲೆ ಮುಗಿ ಬೀಳುತ್ತಿದ್ದ ಕಾಂಗ್ರೆಸ್, ಇದೀಗ ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

    ಪರೀಕ್ಷಾ ಪ್ರಾಧಿಕಾರದಿಂದ ಕಳೆದ ವಾರ ಸರಕಾರ ವಿವಿಧ ನಿಗಮ-ಮಂಡಳಿಗಳಲ್ಲಿ ಖಾಲಿ ರುವ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ಬ್ಲೂಟೂತ್ ಸಾಧನ ಬಳಕೆ ಮಾಡಿರುವ ಹಿಂದೆ ಕಾಂಗ್ರೆಸ್ ಬೆಂಬಲಿತ ಮುಖಂಡ ಆರ್ಡಿ ಪಾಟೀಲ್ ಕೈವಾಡವಿರುವುದು ಸ್ಪಷ್ಟವಾಗಿದ್ದು, ಕೂಡಲೇ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
    ಕೆಇಎಯಿಂದ ನಡೆಸಲಾದ ಪರೀಕ್ಷೆ ಸಂಪೂರ್ಣ ಅಕ್ರಮವಾಗಿದ್ದು, ಕೆಲ ಅಭ್ಯರ್ಥಿಗಳ ಬಳಿ 8 ರಿಂದ 10 ಲಕ್ಷ ರೂ.ಡೀಲ್ ಮಾಡಿಕೊಳ್ಳಲಾಗಿದೆ. ಇದರ ಹಿಂದೆ ಅಫಜಲ್ಪುರದ ಕಾಂಗ್ರೆಸ್ ಮುಖಂಡ ಆರ್.ಡಿ. ಪಾಟೀಲ್ ಕೈವಾಡವಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಈಗಾಗಲೇ ಆತನ ಮೇಲೆ ಕೇಸ್ ಕೂಡಾ ದಾಖಲಾಗಿದೆ. ಆರ್.ಡಿ. ಪಾಟೀಲ್ ಬಂಧನ ಮಾಡಲು ಈ ಸರಕಾರ ಮುಂದಾಗುತ್ತಿಲ್ಲ. ಇದಕ್ಕೆ ಕಾರಣ ಆತನ ಹಿಂದೆ ದೊಡ್ಡ ದೊಡ್ಡ ಶಕ್ತಿಗಳಿವೆ. ಶಾಡೋ ಸಿಎಂ ಆಗಿರುವ ಸಚಿವ ಪ್ರಿಯಾಂಕ್ ಖಗರ್ೆ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ. ಹೀಗಾಗಿ ಸಿಒಡಿ ತನಿಖೆ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದು ಬೇಜವ್ದಾರಿತನದ ಹೇಳಿಕೆ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts