More

    ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ


    ಯಾದಗಿರಿ:
    ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಅಕಾರಕ್ಕೆ ಬರುತ್ತಿದ್ದಂತೆಯೇ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಶನಿವಾರ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜಿಲ್ಲಾ ಬಿಜೆಪಿಯಿಂದ ಪಕ್ಷದ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಈ ವೇಳೆ ಮಾತನಾಡಿದ ಮುದ್ನಾಳ್, ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ನೀಡಿತ್ತು. ಆದರೆ, ಸಕರ್ಾರದ ಅಕಾರಕ್ಕೆ ಬರುತ್ತಿದ್ದಂತೆ ತನ್ನ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಹಲವು ಷರತ್ತುಗಳನ್ನು ವಿಸುವ ಮೂಲಕ ಶ್ರೀಸಾಮಾನ್ಯನಿಗೆ ಮೋಸ ಮಾಡುತ್ತಿದೆ. ಈ ಹಿಂದೆ 800-900 ಬರುತ್ತಿದ್ದ ವಿದ್ಯುತ್ ಬಿಲ್ ಈಗ 2ರಿಂದ 3 ಸಾವಿರ ಬರುತ್ತಿದ್ದು, ಜನರು ಹೈರಾಣರಾಗಿದ್ದಾರೆ ಎಂದು ಆರೋಪಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಅಕಾರಕ್ಕೆ ಬಂದು ಕೇವಲ 4 ತಿಂಗಳು ಕಳೆಯುಷ್ಟರೊಳಗೆ 48 ಜನ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ನಮ್ಮ ಸಕರ್ಾರ ಜಾರಿಗೆ ತಂದಿದ್ದ ಹಲವು ಯೋಜನೆಗಳಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ಅಲ್ಲದೆ ರೈತರ ಅನುಕೂಲಕ್ಕೆ ಇದ್ದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸಕರ್ಾರ ತನ್ನ ಪಾಲನ್ನು ಕಡಿತಗೊಳಿಸಿದೆ ಎಂದು ಹರಿಹಾಯ್ದರು.

    ಪಕ್ಷದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಪ್ರಧಾನ ಕಾರ್ಯದಶರ್ಿ ವೆಂಕಟರಡ್ಡಿ ಅಬ್ಬೆತೂಮಕೂರ, ಗುರು ಕಾಮಾ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ಸದಸ್ಯ ಸ್ವಾಮಿದೇವ ದಾಸನಕೇರಿ, ಪ್ರಮುಖರಾದ ಲಲಿತಾ ಅನಪುರ, ಪರುಶುರಾಮ ಕುರಕುಂದಿ, ಮಲ್ಲಿಕಾಜರ್ುನ ಚಿಲ್ಲಾಳ, ಶಂಕರ ಸಾಹು ವಡಿಗೇರಾ, ಭೀಮಾಶಂಕರ ಬಿಲ್ಲವ, ದೇವಿಂದ್ರ ಕೋನೆರೆ, ರಾಜಶೇಖರ ಕಾಡಂನೂರ, ಭಿಮರಾಯ ಜಂಗಳಿ, ಮೌನೇಶ ಬೆಳಗೇರಾ, ,ಡಾ.ಶರಣರಡ್ಡಿ ಕೋಡ್ಲಾ, ಮಲ್ಲು ಕೋಳಿವಾಡ, ಮನೋಹರ ಪವಾರ, ಮಹದೇವಪ್ಪ ಗಣಪುರ,ನಾಗಪ್ಪ ಗಚ್ಚಿನಮನಿ, ಶಿವು ಕೊಂಕಲ, ಹಣಮಂತ ವಲ್ಯಾಪುರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts