More

    ಜಿಲ್ಲಾ ಕೇಂದ್ರವಾಗಲಿ ಯಲ್ಲಾಪುರ

    ಯಲ್ಲಾಪುರ: ಜಿಲ್ಲೆಯನ್ನು ವಿಭಜಿಸುವುದಾರೆ, ಘಟ್ಟದ ಮೇಲಿನ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾದ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಭಾನುವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಜಿಲ್ಲಾ ಹೋರಾಟ ಸಮಿತಿಯಿಂದ ಜನಜಾಗೃತಿ ಕಾರ್ಯಕ್ರಮ ನಡೆಯಿತು.

    ಸಮಿತಿಯ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಯಲ್ಲಾಪುರ ಘಟ್ಟದ ಮೇಲಿನ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾಗಿದ್ದು, ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿದೆ. ಜಿಲ್ಲಾ ಕೇಂದ್ರವಾದಲ್ಲಿ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಅನುಕೂಲವಾಗಲಿದೆ. ಸರ್ಕಾರ ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

    ಸಮಿತಿಯ ಪ್ರಮುಖರಾದ ಶ್ರೀರಂಗ ಕಟ್ಟಿ, ಬೀರಣ್ಣ ನಾಯಕ ಮೊಗಟಾ, ಪ್ರೇಮಾನಂದ ನಾಯ್ಕ, ನಾಗೇಶ ಯಲ್ಲಾಪುರಕರ, ಲಕ್ಷ್ಮೀನಾರಾಯಣ ತೋಟ್ಮನೆ, ಜಿ.ಆರ್.ಹೆಗಡೆ ಕುಬ್ರಿಗುಡ್ಡೆ, ಬಾಬಾ ಸಾಬ್ ಅಲ್ಲನ್, ಪ್ರದೀಪ ಯಲ್ಲಾಪುರಕರ, ತುಳಸಿ ಪಾಲೇಕರ, ನಾರಾಯಣ ನಾಯಕ, ಮಾಧವ ನಾಯ್ಕ, ಎಂ.ಆರ್. ಹೆಗಡೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿ, ಬೆಂಬಲ ಸೂಚಿಸಿದರು.

    ಸಚಿವ ಹೆಬ್ಬಾರ ಭೇಟಿ
    ಜಿಲ್ಲಾ ಹೋರಾಟದ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಭೇಟಿ ನೀಡಿ, ಸಮಿತಿಯವರ ಮನವಿ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯನ್ನು ವಿಭಜಿಸಬೇಕೆಂಬ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಅಂತಹ ಪ್ರಸ್ತಾಪ ಬಂದಲ್ಲಿ ಜಿಲ್ಲೆಯ ಎಲ್ಲ ಸಂಘ- ಸಂಸ್ಥೆಗಳು, ರಾಜಕೀಯ ಪಕ್ಷಗಳು, ಹಿರಿಯರು, ತಜ್ಞರು, ಪ್ರಾಜ್ಞರು, ಚಿಂತಕರು ಮುಂತಾದವರ ಅಭಿಪ್ರಾಯ ಸಂಗ್ರಹಿಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಯಾವ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡಬೇಕೆಂದು ತೀರ್ವನಿಸಲು ಸಾಧ್ಯ. ಸದ್ಯದ ಮಟ್ಟಿಗೆ ಅದು ಅಪ್ರಸ್ತುತ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಯಲ್ಲಾಪುರ ಜಿಲ್ಲಾ ಹೋರಾಟ ಸಮೀತಿಯು ಶಾಂತಿಯುತವಾಗಿ ಹೋರಾಟ ನಡೆಸುತ್ತಾ ಬಂದಿರುವುದಕ್ಕಾಗಿ ಅಭಿನಂದಿಸುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts