More

    ಜಿಲ್ಲಾಸ್ಪತ್ರೆಯಲ್ಲಿ ಸ್ವ್ಯಾಬ್ ಪರೀಕ್ಷೆ ಇಂದಿನಿಂದ?

    ದಾಂಡೇಲಿ: ಅತ್ಯಾಧುನಿಕ ಆರ್​ಟಿಸಿಪಿಆರ್ ಯಂತ್ರದ ಮೂಲಕ ಗಂಟಲ ದ್ರವದ ಮಾದರಿ ಪರೀಕ್ಷೆ ಗುರುವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ತಿಳಿಸಿದರು.

    ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರೊನಾ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ, ಪ್ರತಿಯೊಬ್ಬರೂ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊರ ರಾಜ್ಯದಿಂದ ಬಂದವರು ಸ್ವಪ್ರೇರಣೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್​ಗೆ ಒಳಪಟ್ಟು ಕರೊನಾ ಹರಡುವಿಕೆ ತಡೆಗಟ್ಟಲು ಸಹಕರಿಸಬೇಕು ಎಂದು ಕೋರಿದರು.

    ದಾಂಡೇಲಿಯ ಸಾಂಸ್ಥಿಕ ಕ್ವಾರಂಟೈನ್​ನ ವ್ಯವಸ್ಥೆ ಸರಿಯಿಲ್ಲ ಎಂದು ಕೆಲ ಅಧಿಕಾರಿಗಳ ವಿರುದ್ಧ ದೂರು ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಸಾಮಾನ್ಯವಾಗಿ ಸಮಾಜದಲ್ಲಿ ಪರ, ವಿರೋಧ ಅಭಿಪ್ರಾಯಗಳು ಸಹಜ. ಕರೊನಾ ಜಗತ್ತು ಕಂಡ ಒಂದು ಹೊಸ ಮಹಾಮಾರಿ ರೋಗ. ಇದರ ವಿರುದ್ಧ ಸಮುದಾಯದ ಹೊರಾಟವಾಗಬೇಕಾಗಿದೆ, ಕ್ವಾರಂಟೈನನಲ್ಲಿ ಅವಶ್ಯವಿರುವ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಕೇವಲ ರಾಜಕೀಯಕ್ಕಾಗಿ ಟೀಕೆ ಮಾಡುವುದು ಸರಿಯಲ’ ಎಂದರು.

    ನಾನು ಮತ್ತು ನಮ್ಮ ಅಧಿಕಾರಿಗಳು ಏನೇ ತಪ್ಪು ಮಾಡಿದರೂ ತಿದ್ದಿಕೊಂಡು ಹೋಗುತ್ತೇವೆ. ವಿನಾಕಾರಣ ಟೀಕೆ ಮಾಡಬೇಡಿ ಎಂದರು.

    ಕರೊನಾ ಸೋಂಕು ತಡೆಗಟ್ಟುವಿಕೆಯಲ್ಲಿ ಜಿಲ್ಲೆಯ ಆರೋಗ್ಯ, ಕಂದಾಯ ಹಾಗೂ ಇತರ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟನಲ್ಲಿ ಸಾರ್ವಜನಿಕರ ಮತ್ತು ಮಾಧ್ಯಮದ ಸಹಕಾರವೂ ಮೆಚ್ಚುವಂತಹುದು ಎಂದರು. ಪೌರಾಯುಕ್ತ ಡಾ. ಸೈಯದ್ ಜಾಹೇದ್ ಅಲಿ, ತಹಸೀಲ್ದಾರ್ ಶೈಲೇಶ ಪರಮಾನಂದ, ವೈದ್ಯಾಧಿಕಾರಿ ಡಾ. ರಾಜೇಶ ಪ್ರಸಾದ ಉಪಸ್ಥಿತರಿದ್ದರು.

    ಕರೊನಾ ವಿರುದ್ಧದ ಹೋರಾಟ ಸಮುದಾಯದ ಹೋರಾಟ. ನಮ್ಮ ಮತ್ತು ರೋಗಿಯ ವಿರುದ್ಧದ ಹೋರಾಟವಲ್ಲ. ತಹಸೀಲ್ದಾರ್ ಸರಿಯಿಲ್ಲ, ಡಿ.ಸಿ. ಸರಿಯಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. | ಡಾ. ಹರೀಶಕುಮಾರ.ಕೆ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts