More

    ಜಿಲ್ಲಾಮಟ್ಟದ ಬೃಹತ್ ಉದ್ಯೋಗಮೇಳ 22ರಿಂದ

    ಹಾವೇರಿ: ಕೌಶಲಾಭಿವೃದ್ಧಿ ಮಿಷನ್ ಕಾರ್ಯಕ್ರಮದಡಿ ಫೆ. 22 ಹಾಗೂ 23ರಂದು ನಗರದ ಹುಕ್ಕೇರಿಮಠದಲ್ಲಿ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಉದ್ಯೋಗ ಮೇಳದ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಉದ್ಯೋಗಮೇಳದಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಉದ್ಯೋಗದಾತ ಸಂಸ್ಥೆಗಳನ್ನು ಮೇಳಕ್ಕೆ ಆಹ್ವಾನಿಸಬೇಕು. ವಿವಿಧ ವೃತ್ತಿ ಹಾಗೂ ಉದ್ಯೋಗಗಳಿಗೆ ಸಂಬಂಧಿಸಿದಂತೆ ಮೇಳದಲ್ಲಿ ಪ್ರತ್ಯೇಕ ಕೌಂಟರ್​ಗಳನ್ನು ತೆರೆಯಬೇಕು. ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಮಾಹಿತಿ ಪ್ರಸಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಉದ್ಯೋಗಮೇಳ ನಡೆಯುವ ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಸಂದರ್ಶನಕ್ಕಾಗಿ ಕಂಪನಿವಾರು ಪ್ರತ್ಯೇಕ ಕೌಂಟರ್​ಗಳನ್ನು ತೆರೆಯುವುದು. ಮುಖ್ಯವೇದಿಕೆ ನಿರ್ವಣ, ಫುಡ್​ಕೌಂಟರ್ ತೆರೆಯುವುದು ಸೇರಿ ವಿವಿಧ 8 ಸಮಿತಿಗಳನ್ನು ರಚಿಸಲಾಯಿತು.

    ಸ್ಥಳೀಯ ಉದ್ಯಮಗಳಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಅಪ್ರೆಂಟಿಸ್ ಮಾದರಿಯಲ್ಲಿ ಕೌಶಲ ಕೇಂದ್ರಕ್ಕೆ ದಾಖಲಾದ ಅಭ್ಯರ್ಥಿಗಳನ್ನು ನಿಯೋಜಿಸಬೇಕು. ಸ್ಥಳೀಯ ಉದ್ಯೋಗದಾತರನ್ನು ಉದ್ಯೋಗ ಮೇಳದಲ್ಲಿ ಪ್ರಾಧಾನ್ಯತೆಯ ಅನುಸಾರ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದರು.

    ಜಿಪಂ ಸಿಇಒ ರಮೇಶ ದೇಸಾಯಿ, ಕೌಶಲಾಭಿವೃದ್ಧಿ ಕೇಂದ್ರದ ಸುಭಾಷಗೌಡ, ಜಿಲ್ಲಾ ಕೌಶಲಾಭಿವೃದ್ಧಿ ಕೇಂದ್ರದ ಅಧಿಕಾರಿ ಸಂಜಯ ದಿಗಂಬರ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ ಜೋಶಿ, ಡಿಡಿಪಿಐ ಅಂದಾನಪ್ಪ ವಡಗೇರಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಸಿ. ಪೀರಜಾದೆ, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ, ವಾಣಿಜ್ಯಮಂಡಳಿಯ ಪದಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts