More

    ಜಿಲ್ಲಾದ್ಯಂತ ಸರಳ ನಾಗಪಂಚಮಿ

    ಕಲಬುರಗಿ: ಕರೊನಾ ಅಬ್ಬರದ ಹಿನ್ನೆಲೆಯಲ್ಲಿ ಮಹಿಳೆಯರು ಸಂಭ್ರಮದಿಂದ ಆಚರಿಸುವ ನಾಗರ ಪಂಚಮಿ ಕೊಂಚ ಸೊರಗಿದಂತೆ ಕಂಡು ಬಂದಿತು. ನಗರ ಸೇರಿ ಜಿಲ್ಲಾದ್ಯಂತ ಶನಿವಾರ ನಾಗರ ಪಂಚಮಿಯನ್ನು ಸರಳವಾಗಿ ಆಚರಿಸಲಾಯಿತು. ನಾಗರಕಟ್ಟೆ ಹಾಗೂ ಹುತ್ತಗಳ ಬಳಿ ಹೆಂಗಳೆಯರು ಗುಂಪು ಸೇರಿದ್ದು ವಿರಳ.
    ಬಹುತೇಕರು ಮನೆಗಳಿಗೆ ಸೀಮಿತ ಎನ್ನುವಂತೆ ಹಬ್ಬ ಆಚರಿಸಿದರು. ಮನೆಯಲ್ಲೇ ನಾಗದೇವತೆ ಪೂಜೆ ಮಾಡಿದ ಬಳಿಕ ಹತ್ತಿರದ ದೇಗುಲಗಳಲ್ಲಿರುವ ನಾಗರ ಕಟ್ಟೆ, ಹುತ್ತಗಳಿಗೆ ತೆರಳಿ ಸಾಂಕೇತಿಕವಾಗಿ ಹಾಲೆರೆದರು.
    ಗೋದುತಾಯಿ ನಗರದ ಶಿವ ಮತ್ತು ಹನುಮಾನ ಮಂದಿರ ಅವರಣದಲ್ಲಿರುವ ನಾಗರ ಕಟ್ಟೆಗೆ ಮಕ್ಕಳು, ಮಹಿಳೆಯರು ಪೂಜೆ ಸಲ್ಲಿಸಿದರು. ಶಕ್ತಿನಗರದಲ್ಲಿ ಅರಳಿ ಮರದ ಕೆಳಗಿನ ನಾಗರ ದೇವಸ್ಥಾನದಲ್ಲಿ ಬಹುತೇಕರು ಪರಸ್ಪರ ಅಂತರ ಕಾಯ್ದುಕೊಂಡು ಹಾಲೆರೆದರು. ಹಳೇ ಎಸ್ಪಿ ಕಚೇರಿ ಹಿಂಭಾಗದ ದೇಗುಲದಲ್ಲೂ ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ ಹಾಲೆರೆದರು. ಬಳಿಕ ಮೂರ್ತಿ ಮುಂದೆ ನಿಂತು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
    ಎಂಎಸ್ಕೆ ಮಿಲ್ ರಸ್ತೆಯ ಸರ್ಕಾರಿ ಐಟಿಐ ಕಾಲೇಜಿನ ಹಿಂಭಾಗ, ವಿದ್ಯಾನಗರ, ಶಾಂತಿನಗರ, ಗಂಗಾನಗರ, ಮಹಾಲಕ್ಷ್ಮೀ ಲೇಔಟ್, ಓಂನಗರ, ಶಕ್ತಿನಗರ, ಬ್ರಹ್ಮಪುರ, ನ್ಯೂ ರಾಘವೇಂದ್ರ ಕಾಲನಿ, ಕರುಣೇಶ್ವರ ನಗರ, ಲಾಲಗೇರಿ, ಶಹಾಬಜಾರ್, ದೇವಿ ನಗರ, ಮಕ್ತಂಪುರ, ಗಾಜಿಪುರ ಮೊದಲಾದ ಕಡೆ ಹುತ್ತ ಮತ್ತು ನಾಗರ ಕಟ್ಟೆಗಳಿಗೆ ಪೂಜಿಸಿ ಹಾಲೆರೆದಿರುವುದು ಕಂಡಿತು. ಹಬ್ಬಕ್ಕಾಗಿ ಮಾಡಿದ ಉಂಡಿ, ಕಚರ್ಿಕಾಯಿ ಮೊದಲಾದವನ್ನು ತಿಂದು ಖುಷಿಪಟ್ಟರು.

    ಮನೆಗಳಲ್ಲಿ ಜೋಕಾಲಿ, ರಸ್ತೆಯಲ್ಲಿ ಜಿದ್ದಿನಾಟ ಜೋಕಾಲಿ ಆಡದೆ ಹೋದರೆ ನಾಗರ ಪಂಚಮಿ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಜೋಕಾಲಿ ಕಟ್ಟಿ ಜೀಕಿದರು. ಕೆಲ ಬಡಾವಣೆ, ಹಳ್ಳಿಗಳಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ಆಡಿ ಸಂಭ್ರಮಿಸಿದರು. ಯುವಕರು ಲಿಂಬೆಕಾಯಿ ಎಸೆಯುವುದು, ತೆಂಗಿನಕಾಯಿ ಒಡೆಯುವುದು, ಕಣ್ಣು ಕಟ್ಟಿ ಮುಟ್ಟುವುದು ಹೀಗೆ ಹಲವು ವೈವಿಧ್ಯಮಯವಾಗಿರುವ ಜನಪದ ಸೊಗಡಿನ ಜಿದ್ದಿನ ಆಟಗಳನ್ನು ಆಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts