More

    ಜಿಲ್ಲಾಡಳಿತದಿಂದ 2.23 ಲಕ್ಷ ಧ್ವಜ ವಿತರಣೆ

    ಚಿಕ್ಕಮಗಳೂರು: ಹರ್ ಘರ್ ತಿರಂಗಾ ಅಂಗವಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಹಾಗೂ ನಾಗರಿಕರಿಗೆ ವಿತರಿಸಲು ಸರ್ಕಾರದಿಂದ 78 ಸಾವಿರ ಪೂರೈಕೆಯಾಗಿದೆ. ಜತೆಗೆ ಜಿಲ್ಲಾಡಳಿತದಿಂದ 2.23 ಲಕ್ಷ ರಾಷ್ಟ್ರಧ್ವಜಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.

    ಡಿಸಿ ಕಚೇರಿಯಲ್ಲಿ ಬುಧವಾರ ನಗರಸಭೆ, ಗ್ರಾಪಂ, ವಿವಿಧ ಇಲಾಖೆ ಅಧಿಕಾರಿಗಳಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ ಮಾತನಾಡಿದ ಅವರು, ಸರ್ಕಾರಿ ಇಲಾಖೆ, ಕಟ್ಟಡ, ಅಧಿಕಾರಿಗಳು, ಸಿಬ್ಬಂದಿ ಮನೆ ಸೇರಿ 56 ಸಾವಿರ, ನಗರಸಭೆಗೆ 30 ಸಾವಿರ, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 35 ಸಾವಿರ, ಜಿಲ್ಲೆಯ 226 ಗ್ರಾಪಂಗಳಿಗೆ 1.2 ಲಕ್ಷ ಧ್ವಜ ವಿತರಿಸಲಾಗುತ್ತಿದೆ. ಜಿಲ್ಲೆಯ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಭಕ್ತಿ ಜಾಗೃತಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

    ಜಿಲ್ಲೆಯಲ್ಲಿ 2.76 ಲಕ್ಷ ಕುಟುಂಬಗಳಿವೆ. ಈಗಾಗಲೆ 1.87 ಲಕ್ಷ ಧ್ವಜ ವಿತರಿಸಲಾಗಿದೆ. ಉಳಿದಂತೆ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳ ಮೂಲಕ ಪ್ರತಿ ಮನೆಗೆ ಧ್ವಜ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಸೇರಿ ಖಾಸಗಿಯಾಗಿ ಒಂದು ಲಕ್ಷ ಧ್ವಜ ವಿತರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಮಾತನಾಡಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಕಲಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಲಾವಿದರು ಡಿಜಿಟಲ್ ತಂತ್ರಜ್ಞಾನದ ಸಾಂಪ್ರದಾಯಿಕ ಶೈಲಿ ಬಳಸಿಕೊಂಡು ಸ್ವಾತಂತ್ರ್ಯ ಪೂರ್ವದಿಂದ ಈವರೆಗಿನ ಚಿತ್ರಣವನ್ನು ದಾಖಲು ಮಾಡಿ ಅನಾವರಣ ಮಾಡುವ ಪ್ರಯತ್ನ ಇದಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts