More

    ಜಿಲೆಟಿನ್ ಸ್ಫೋಟಕ್ಕೆ 150 ಮನೆ ಬಿರುಕು

    ಹುಲಸೂರು: ಬೇಲೂರು ಹೊರವಲಯದಲ್ಲಿ ಕೊಂಗಳಿ ಏತ ನೀರಾವರಿ ಯೋಜನೆ ಅಡಿ ನೂತನ ಕೆರೆ ನಿಮರ್ಾಣ ಕಾಮಗಾರಿ ಸಂಬಂಧ ಗುರುವಾರ ರಾತ್ರಿ ಜಿಲೆಟಿನ್ ಸ್ಫೋಟಿಸಿದ್ದರಿಂದ ಊರಿನ 150ಕ್ಕೂ ಹೆಚ್ಚು ಮನೆ ಬಿರುಕು ಬಿಟ್ಟಿವೆ.

    ರಾತ್ರಿ ಹೊತ್ತು ಹೆಚ್ಚಿನ ಶಬ್ದ ಆಗಿದ್ದರಿಂದ ಭೂಕಂಪ ಆಗುತ್ತಿರಬಹುದು ಎಂದು ಗ್ರಾಮಸ್ಥರು ಭಯಭೀತರಾಗಿದ್ದರು. ನಂತರ ವಿಚಾರಿಸಿದಾಗ ಕೆರೆ ಕಾಮಗಾರಿಯಲ್ಲಿ ಜಿಲೆಟಿನ್ ಸ್ಫೋಟ ಮಾಡುತ್ತಿರುವ ಮಾಹಿತಿ ತಿಳಿದು ಸುಮ್ಮನಾಗಿದ್ದರು. ಆದರೆ ಬೆಳಗ್ಗೆ ಮನೆಗಳಲ್ಲಿ ಕಾಣಿಸಿದ ಬಿರುಕು ನೋಡಿ ಚಿಂತೆಗೀಡಾಗಿದ್ದಾರೆ.

    ಊರಲ್ಲಿ ಇಂಥ ಶಬ್ದ ಅನೇಕ ಸಲ ಕೇಳಿಸುತ್ತಿದೆ. ಕೆರೆ ನಿಮರ್ಾಣ ಕೆಲಸಕ್ಕೆ ಅಡ್ಡಿ ಬರುವುದಿಲ್ಲ. ಆದರೆ ಜಿಲೆಟಿನ್ ಸ್ಫೋಟದಿಂದ ಭೂಮಿ ಕಂಪನವಾಗಿ ಮನೆಗಳು ಬಿರುಕು ಬಿಟ್ಟಿವೆ. ಕೊಳವೆಬಾವಿಗಳಲ್ಲಿನ ನೀರು ಸಹ ಕಡಿಮೆ ಆಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    ತಹಸೀಲ್ದಾರ್ ಪರಿಶೀಲನೆ: ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಶಿವಾನಂದ ಮೇತ್ರೆ, ಕಂದಾಯ ನಿರೀಕ್ಷಕ ಮೌನೇಶ್ವರ ಸ್ವಾಮಿ ಹಾಗೂ ಕಂದಾಯ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪ್ರತಿಯೊಬ್ಬರ ಮನೆ ಪರಿಶೀಲಿಸಿದ್ದಾರೆ. ಭಯಪಡುವ ಅಗತ್ಯವಿಲ್ಲ. ಕೆರೆ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಮತ್ತು ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಮುಖರಾದ ಸಂಜುಕುಮಾರ ಮಹಾಜನ, ರವಿ ಚಿಲ್ಲಾಬಟ್ಟೆ, ಸೂರ್ಯಕಾಂತ ಕಣಜೆ, ಬಾಬು, ಸಿದ್ದಪ್ಪ ಅಂತಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts