More

    ಜಿಎಂಎಸ್ ಅಕಾಡೆಮಿಯಿಂದ ನಾಡಿದ್ದು ಉದ್ಯೋಗ ಮೇಳ 

    ದಾವಣಗೆರೆ: ನಗರದ ಜಿಎಂಐಟಿಯ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮೇ 31ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್. ತೇಜಸ್ವಿ ಕಟ್ಟಿಮನಿ ತಿಳಿಸಿದರು.
    ಸ್ಪೈಡರ್ ಎಲೆಕ್ಟ್ರಿಕ್, ಬಜಾಜ್ ಅಲಿಯನ್ಸ್, ಬಿಎಫ್‌ಡಬ್ಲ್ಯು, ಸ್ಯಾಮ್‌ಸಂಗ್, ಲೈಟಿಂಗ್ ಟೆಕ್ನಾಲಜಿಸ್, ಸೆವೆಂತ್ ಸೆನ್ಸ್ ಟೆಕ್ನಾಲಜೀಸ್, ಜಿ.ಎಂ. ಸಮೂಹ ಸಂಸ್ಥೆಗಳು, ಫೇಸ್ ಪವರ್ ಸಿಸ್ಟಮ್ಸ್, ಹೋಂಡಾ ಮೋಟರ್ಸ್, ಸಾಸ್ಮೋಸ್ ಟೆಕ್ನಾಲಜೀಸ್, ಸೇರಿ 35 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಎಸ್ಸೆಸ್ಸೆಲ್ಸಿ, ಪಿಯು, ಐಟಿಐ, ಡಿಪ್ಲೊಮಾ ಹಾಗೂ ಪದವಿ ಪಡೆದವರಿಗೂ ಅವಕಾಶಗಳಿವೆ. ಈಗಾಗಲೇ 2100 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಇನ್ನೂ ಹೆಚ್ಚಿನ ನೋಂದಣಿ ನಿರೀಕ್ಷಿಸಿದ್ದೇವೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದರು.
    ಮೇ 31ರಂದು ಬೆಳಗ್ಗೆ 9.30ಕ್ಕೆ ಶ್ರೀಶೈಲ ಎಜುಕೇಶನಲ್ ಟ್ರಸ್ಟ್‌ನ ಖಜಾಂಚಿ ಜಿ.ಎಸ್.ಅನಿತ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಾವಣಗೆರೆ ವಿವಿ ಕುಲಪತಿ ಡಾ.ಬಿ.ಡಿ ಕುಂಬಾರ್ ಭಾಗವಹಿಸುವರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ. ಕೆ. ಅರುಣ್, ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರನ್ನೂ ಆಹ್ವಾನಿಸಲಾಗಿದೆ.
    ಆಸಕ್ತ ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ಎಲ್ಲಾ ಕಲಿಕಾ ಅಂಕಪಟ್ಟಿಗಳು ಮತ್ತು ಸ್ವವಿವರದೊಂದಿಗೆ ಕನಿಷ್ಠ 5ರಿಂದ 10ಪ್ರತಿಗಳೊಂದಿಗೆ ಬರಬೇಕು ಎಂದು ಹೇಳಿದರು.
    ಕಾಲೇಜಿನ ಪ್ರಾಚಾರ್ಯೆ ಶ್ವೇತಾ ಎಂ.ಮರಿಗೌಡರ್, ತರಬೇತಿ ಮತ್ತು ಉದ್ಯೋಗ ತರಬೇತಿ ವಿಭಾಗದ ಸಂಯೋಜಕ ಅಭಿಷೇಕ್, ಅಭಿಲಾಷ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts