More

    ಜಾರ್ಖಂಡದ ಸಮ್ಮೇದ ಶಿಖರಜಿ ಪಾವಿತ್ರೃ ಕಾಪಾಡಿ

    ಬೆಳಗಾವಿ: ಜಾರ್ಖಂಡ ರಾಜ್ಯದಲ್ಲಿರುವ ಜೈನ ಧರ್ಮಿಯರ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರಜಿ ಕ್ಷೇತ್ರವನ್ನು ಅಲ್ಲಿನ ಸರ್ಕಾರ ಪ್ರವಾಸಿ ತಾಣವೆಂದು ಮಾರ್ಪಾಡು ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಬೆಳಗಾವಿಯಲ್ಲಿ ಜೈನ ಸಮುದಾಯದಿಂದ ಬೃಹತ್ ಪ್ರತಿಭಟನೆ ಜರುಗಿತು.

    ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದ ಪ್ರತಿಭಟನಾಕಾರರು, ಸರ್ಕಾರ ತನ್ನ ಆದೇಶ ಹಿಂಪಡೆದು ತೀರ್ಥಕ್ಷೇತ್ರವನ್ನು ಸಂರಕ್ಷಿಸಿಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಜಾರ್ಖಂಡ ರಾಜ್ಯದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವಾಗಿ ಮಾಡಿದರೆ ಅಲ್ಲಿ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಪ್ರಾರಂಭಗೊಂಡು ತೀರ್ಥಕ್ಷೇತ್ರದ ಪಾವಿತ್ರೃ ಹಾಳಾಗಲಿದೆ. ಜಾಖಂಡ ಸರ್ಕಾರದಂತೆ ಕೇಂದ್ರವೂ ಕಾರ್ಯ ಪ್ರವೃತ್ತವಾಗಿರುವುದು ಖಂಡನೀಯ. ಈ ಕ್ಷೇತ್ರ ಜೈನ ಸಮುದಾಯದ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು, ಪ್ರವಾಸಿ ತಾಣ ಮಾಡಬಾರದು. ಈ ಕ್ಷೇತ್ರದಲ್ಲಿ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಮೋಕ್ಷವಾದ ಕ್ಷೇತ್ರವಾಗಿದೆ. ಅಲ್ಲದೆ, ಸುಮಾರು 20 ಕೋಟಿ ರೂ.ಗೂ ಹೆಚ್ಚು ಮುನಿಗಳು ಮೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ. ಅದನ್ನು ಪ್ರವಾಸಿ ತಾಣ ಮಾಡಬಾರದು ಎಂದು ಆಗ್ರಹಿಸಿದರು.

    ಪ್ರವಾಸಿ ತಾಣವಾದರೆ ಅಲ್ಲಿ ಮದ್ಯ ಸೇವನೆ, ಮಾಂಸ ಸೇವನೆ ಮತ್ತು ಇನ್ನಿತರ ಅನೈತಿಕ ಚಟುವಟಿಗಳು ನಡೆದು ತೀರ್ಥಕ್ಷೇತ್ರದ ಪಾವಿತ್ರ್ಯ ಹಾಳಾಗಲಿದೆ. ಹಾಗಾಗಿ ಜಾರ್ಖಂಡ ಮತ್ತು ಕೇಂದ್ರ ಸರ್ಕಾರ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣ ಮಾಡುವ ಯೋಜನೆಯನ್ನು ಕೈಬಿಟ್ಟು ತೀರ್ಥಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ಸಂಜಯ ಪಾಟೀಲ, ನಗರ ಸೇವಕಿ ಪ್ರೀಯಾ ಸಾತಗೌಡ, ರವಿರಾಜ ಪಾಟೀಲ, ರಾಜೇಂದ್ರ ಜೈನ, ವಿನೋದ ದೊಡ್ಡಣ್ಣವರ, ಭರತ ಪಾಟೀಲ, ಜೈನ ಯುವ ಸಂಘಟನೆಯ ಅಭಯ ಅವಲಕ್ಕಿ, ಕುಂಥುಸಾಗರ ಹರದಿ, ಸಂದೀಪ ಸೈಬನ್ನವರ, ಕುಂತಿನಾಥ ಕಲಮನಿ, ಸುನಿಲ ಹನಮಣ್ಣವರ, ಪುಷ್ಪಕ ಹನಮಣ್ಣವರ, ಮುಕೇಶ ಪೋರವಾಲ, ರಾಜೇಂದ್ರ ಜಕ್ಕನ್ನವರ, ಉಗಾರ ಗ್ರಾಮದ ಶೀತಲಗೌಡ ಪಾಟೀಲ, ನ್ಯಾಯವಾದಿ ಸಂಜಯ ಕುಚನೂರೆ, ವಿಕ್ರಮ ಜೈನ, ಶೀತಲ ಟಕಳೆ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts