More

    ಜಾರಕಿಹೊಳಿ ಬೆಂಬಲದಿಂದ ಮಂಜೂರಾತಿ – ಮಹೇಶ ಕುಮಠಳ್ಳಿ

    ಅಥಣಿ ಗ್ರಾಮೀಣ: ಮಾಜಿ ಸಚಿವ ರಮೇಶ ಜಾರಕಿಹೊಳಿ ಶಕ್ತಿ ನನ್ನ ಜೊತೆಗಿರದಿದ್ದರೆ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ 1486.41 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ಪಡೆಯಲಾಗುತ್ತಿರಲಿಲ್ಲ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

    ಅಥಣಿ ತಾಲೂಕಿನ ಶೇಗುಣಸಿ, ಬಳವಾಡ, ಶಿರಹಟ್ಟಿ ಹಾಗೂ ಯಲಿಹಡಲಗಿ ಗ್ರಾಮದಲ್ಲಿ ಬುಧವಾರ 3.12 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿ, ಬಳವಾಡ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿ, ತಾಲೂಕಿನ ಪೂರ್ವ ಭಾಗದ ರೈತರ ಸಮಸ್ಯೆಗೆ ಸ್ಪಂದಿಸಿದ್ದೇನೆ. ರೈತರಿಗೆ ಶಾಶ್ವತ ನೀರು ಒದಗಿಸುವ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಸಂತಸ ತಂದಿದೆ ಎಂದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಥಮ ಹಂತದ ಕಾಮಗಾರಿಗೆ 896 ಕೋಟಿ ರೂ.ಗೆ ಅನುಮೋದನೆ ನೀಡಿದ್ದು, ತಿಂಗಳಾಂತ್ಯದಲ್ಲಿ ಚಾಲನೆ ನೀಡಲಾಗುತ್ತದೆ ಎಂದರು. ಬಿಇಒ ಬಸವರಾಜ ತಳವಾರ ಮಾತನಾಡಿ, ಶಾಸಕ ಮಹೇಶ ಕುಮಠಳ್ಳಿಯವರು ಬನ್ನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸ್ವಂತ 24 ಲಕ್ಷ ರೂ. ಹಣವನ್ನು ನೀಡಿ 2 ಎಕರೆ ಜಮೀನು ಖರೀದಿ ಮಾಡಿದ್ದು, ಜನಪ್ರತಿನಿಧಿಗಳ ಇಚ್ಛಾಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

    ಪಿಡಬ್ಲುೃಡಿ ಅಭಿಯಂತ ಗೌಡಪ್ಪ ಗುಳಪ್ಪನವರ, ಎ.ಜಿ. ಮುಲ್ಲಾ, ಗ್ರಾಪಂ ಕಾರ್ಯದರ್ಶಿ ಅಶೋಕ ಲಸಮಠ, ಸಂತೋಷ ಸಾವಡಕರ, ರಮೇಶ ಧುಮಾಳೆ, ನಿಂಗಪ್ಪ ನಂದೇಶ್ವರ, ಮಹೇಶ ಪಾಟೀಲ, ಅಶೋಕ ಅವಟಿ, ಅಪ್ಪಾಸಾಬ ಪಾಟೀಲ, ನಿಂಗಪ್ಪ ಐನಾಪುರ, ಅಣ್ಣಸಾಬ ಪಾಟೀಲ, ಗೌತಮ ವರ್ಮಾ, ಅಪ್ಪಸಾಬ ಕಾಂಬಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts