More

    ಜಾನಪದ ಕಾವ್ಯಕ್ಕೆ ತಲೆದೂಗಿಸುವ ತಾಕತ್ತು

    ಯಡ್ರಾಮಿ: ಹೆಸರಿಟ್ಟುಕೊಂಡು ಬಂದಿದ್ದಲ್ಲ ಜಾನಪದ ಕಾವ್ಯ, ಹೆಸರಿಲ್ಲದೆ ಬಂದು ಇಂದಿಗೂ ಜನರನ್ನು ತಲೆದೂಗುವಂತೆ ಮಾಡುತ್ತಿರುವುವ ತಾಕತ್ತಿರುವ ಕಾವ್ಯ, ಜಾನಪದ ಕಾವ್ಯ ಎಂದು ಶಿಕ್ಷಕ, ಸಾಹಿತಿ ಸೋಮನಾಥ ಗೀತಯೋಗಿ ಸಾಲೋಟಗಿ ಹೇಳಿದರು.
    ಪಟ್ಟಣದ ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತ ಮಠದಲ್ಲಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ವೇದಿಕೆ ಶುಕ್ರವಾರ ಹಮ್ಮಿಕೊಂಡ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿ, ಆಡುಭಾಷೆಯಲ್ಲಿಯೇ ತಮ್ಮ ಅನುಭವದ ಮೂಲಕ ಕಟ್ಟಿದ ಕಾವ್ಯ ಜಾನಪದ ಕಾವ್ಯ. ಜನಪದರ ವ್ಯಾಚಾರ್ಥಗಳ ಹಿಂದಿನ ಪದ ಅರ್ಥೈಸಿಕೊಂಡಾಗ ಅವರು ರಚಿಸಿದ ಕೃತಿಯ ಸ್ವಾದ ಅರ್ಥವಾಗುತ್ತದೆ ಎಂದರು.
    ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಮಾತನಾಡಿ, ಕವಿಗಳು ತಮ್ಮ ಭಾವನೆಗಳನ್ನು ಹತ್ತಿಕ್ಕದೆ ಅದಕ್ಕೆ ಅಕ್ಷರ ರೂಪ ನೀಡಿ ಕಾವ್ಯ ಕಟ್ಟುತ್ತಾರೆ. ನವಲಗುಂದ ಅವರ ಅನುಭವ ವಿಸ್ತಾರವಾಗಿದೆ. ಮನಸ್ಸಿಗೆ ಮುದ ನೀಡುವ ವಾಸ್ಥವದ ಬಗ್ಗೆ ಕವಿತೆ ರಚಿಸಿದ್ದಾರೆ.
    ಯಡ್ರಾಮಿ ವಿರಕ್ತ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹರಿದ್ವಾರದ ಯೋಗಗುರು ಶ್ರೀ ನಿರಂಜನ ದೇವರು ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತ ವಿಜಯೇಂದ್ರ ಕುಲಕರ್ಣಿ , ಇಂದುಶೇಖರ ಮಣ್ಣೂರ, ಸಾಹಿತಿಗಳಾದ ಡಿಎನ್ ಅಕ್ಕಿ, ಎಲ್ಬಿಕೆ ಆಲ್ದಾಳ, ಶಿವಕುಮಾರ ಉಪ್ಪನ್, ಪ್ರಮುಖರಾದ ಸಾಹೇಬಗೌಡ ಪಾಟೀಲ್, ಡಾ.ಕೆಕೆ ದೇಸಾಯಿ, ಅಮೃತ ದೊಡ್ಡಮನಿ, ದಾವಲಸಾಬ್ ಹಳೆಮನಿ, ಸಚೀನಕುಮಾರ ಹಿರೇಮಠ, ಮಲ್ಲಿಕಾರ್ಜುನ ಕೊಟಾರಗಸ್ತಿ, ಹಣಮಂತ ಲೋಹಾರ, ಮಲ್ಲಿಕಾರ್ಜುನ  ಧರಿ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಶಿವನಗೌಡ ಪೊಲೀಸ್ ಪಾಟೀಲ್ ಇತರರಿದ್ದರು. 
    ಸಿದ್ಧಾರೂಡ ನಾಗರಳ್ಳಿ ಹಾಗೂ ಮಹಾಂತೇಶ ಯಳಸಂಗಿ ಸಂಗೀತ ಸೇವೆ ನೀಡಿದರು. ಶಿಕ್ಷಕ ಬಸಯ್ಯಸ್ವಾಮಿ ಕಕ್ಕೇರಾ ನಿರೂಪಣೆ ಮಾಡಿ, ವಂದಿಸಿದರು.

    ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ
    ಯುವ ಕವಿ, ಪತ್ರಕರ್ತ ಸಂತೋಷ ನವಲಗುಂದ ರಚಿಸಿದ ಭಾವ ಕಣದ ರಾಗೋಲ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಸಂಕ್ರಾಂತಿ ಹಬ್ಬದ ನಿಮಿತ್ತ ವೇದಿಕೆಯಿಂದ, ಜಿಲ್ಲಾ ಮಟ್ಟದ ಕಾವ್ಯ ಕುಮ್ಮಟ ಕವಿಗೋಷ್ಠಿ ಆಯೋಜಿಸಲಾಗಿತ್ತು. ಗೋಷ್ಠಿಯಲ್ಲಿ ವಿಜಯಪುರ, ಸಿಂದಗಿ, ಜೇವರ್ಗಿ , ಆಳಂದ ಸೇರಿ ವಿವಿಧ ಭಾಗದಿಂದ ಕವಿಗಳು ಆಗಮಿಸಿ ತಮ್ಮ ಕವನ ವಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts