More

    ಜಾನಪದ ಅತ್ಯಂತ ಶ್ರೀಮಂತ ಕಲೆ

    ಶೃಂಗೇರಿ: ಜಾನಪದ ಅತ್ಯಂತ ಶ್ರೀಮಂತ ಕಲೆ. ಕನ್ನಡ ಜಾನಪದ ಗೀತೆಗಳು ಪ್ರಾದೇಶಿಕ ಸೊಗಡನ್ನು ನಮ್ಮ ಮುಂದಿಟ್ಟು ಅದರ ವೈಭವ ಸಾರುವಲ್ಲಿ ಯಶಸ್ಸು ಕಂಡಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೆಶ್ ತಿಳಿಸಿದರು. ಕನ್ನಡ ಭವನದಲ್ಲಿ ಶುಕ್ರವಾರ ತಾಲೂಕು ಕನ್ನಡ ಜಾನಪದ ಪರಿಷತ್ ನಿಯೋಜಿತ ಅಧ್ಯಕ್ಷರ ನೇಮಕಾತಿಯಲ್ಲಿ ಮಾತನಾಡಿದ ಅವರು, ಜಾನಪದ ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ಬೇರು. ಕೌಟುಂಬಿಕ ಜೀವನ, ಧಾರ್ವಿುಕ ಆಚರಣೆಗಳ ಆಯಾಮಗಳನ್ನು ತೆರೆದಿಡುವಲ್ಲಿ ಜಾನಪದ ಯಶಸ್ಸು ಕಂಡಿದೆ ಎಂದರು.

    ಪಾಶ್ಚಾತ್ಯ ಸಂಸ್ಕೃತಿ ಜತೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ. ಕನ್ನಡ ಜಾನಪದ ಪರಿಷತ್ ಹಳ್ಳಿಗಳಲ್ಲಿ ಘಟಕಗಳನ್ನು ಆರಂಭಿಸಿ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ ಕಿರಿಯರಿಗೆ ಅದರ ಜ್ಞಾನ ನೀಡುವ ಅವಶ್ಯಕತೆ ಇದೆ ಎಂದರು.

    ಜಿಲ್ಲಾ ಸಂಚಾಲಕ ಎಚ್.ಎ.ಶ್ರೀನಿವಾಸ್ ಮಾತನಾಡಿ, ತಲೆಮಾರಿನಿಂದ ತಲೆಮಾರಿಗೆ ಬದುಕಿನ ಸೂಕ್ಷ್ಮ ಪ್ರಚುರ ಪಡಿಸುವಲ್ಲಿ ಕನ್ನಡ ಜಾನಪದ ಪ್ರಮುಖ ಸ್ಥಾನ ಪಡೆದಿದೆ. ಜಾನಪದದಲ್ಲಿ ಜನರ ಬದುಕಿದೆ. ಸಮಷ್ಟಿ ಸಂಸ್ಕೃತಿಯನ್ನು ಎಲ್ಲರೂ ಸಮಾನ ಮನಸ್ಸಿನಿಂದ ಬೆಳೆಸಬೇಕಿದೆ ಎಂದರು. ಹೊಸ್ಕೆರೆ ವೆಂಕಟೇಶ್ ಕನ್ನಡ ಜಾನಪದ ಪರಿಷತ್ ನಿಯೋಜಿತ ಅಧ್ಯಕ್ಷರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts