More

    ಜಾತ್ರೆ, ಉತ್ಸವಗಳಿಂದ ಜನ ಜಾಗೃತಿ

    ಗದಗ: ನಾವಿಂದು ಧರ್ಮ ಸಂಸ್ಕಾರ, ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು. ಜಾತ್ರೆ, ಉತ್ಸವಗಳು ಜನಸಮುದಾಯದಲ್ಲಿ ಸಹೋದರತ್ವವನ್ನು ಮೂಡಿಸುತ್ತವೆ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.
    ನಗರದ ಕಾಶೀ ವಿಶ್ವನಾಥ ನಗರ ಬುಳ್ಳಾ ಪ್ಲಾಟ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಶೀ ವಿಶ್ವನಾಥ ರಥೋತ್ಸವ ಹಾಗೂ ಜಗನ್ಮಾತೆ ಶ್ರೀ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, 30ನೇ ವರ್ಷದ ಸಾಮೂಹಿಕ ವಿವಾಹ, ಧರ್ಮಸಭೆಯಲ್ಲಿ ಅವರು ಮಾತನಾಡಿದರು.
    ಕಾಶೀ ವಿಶ್ವನಾಥ ನಗರ ಜಾತ್ರೆಯನ್ನು ನೆಪವಾಗಿಟ್ಟುಕೊಂಡು ಧರ್ಮ ಜಾಗೃತಿ, ಜನಜಾಗೃತಿ ಮಾಡುವ ಕೆಲಸ ಮಾಡಲಾಗುತ್ತಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಸಾಧಕ ಮಹನೀಯರನ್ನು ಗುರುತಿಸಿ ಪ್ರೋತ್ಸಾಹಿತ್ತಿರುವುದು ಶ್ಲಾಘನೀಯ ಎಂದರು.
    ಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ಮಾತನಾಡಿ, ಜಾತ್ರೆಗಳು ಜನರ ಮನಸು ಕಟ್ಟುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕಾಶೀ ವಿಶ್ವನಾಥನ ಜಾತ್ರೆಯು ವೈವಿಧ್ಯಮಯ ಹಾಗೂ ವಿಶೇಷವಾಗಿ ಆಚರಿಸುತ್ತಿರುವುದು ಅಭಿನಂದನೀಯ ಎಂದರು.
    ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಪಾಲಕ, ಪೋಷಕರು ಮಕ್ಕಳ ಮದುವೆ ಮಾಡಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸೂಕ್ಷ್ಮತೆಯನ್ನರಿತು ಜಾತ್ರಾ ಸಮಿತಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದ್ದು ಸಂತಸದ ಸಂಗತಿ ಎಂದರು.
    ಜಾತ್ರಾ ಸಮಿತಿ ಅಧ್ಯಕ್ಷ ಶೇಖಪ್ಪ ಮುಳವಾಡ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಲಲಿತಾ ಅಸೂಟಿ, ದುಂಡಪ್ಪ ಆಸಂಗಿ, ಕಳಕಪ್ಪ ಬನ್ನಿಗೋಳ, ದಾವಲಸಾಬ ಕುಮನೂರ, ಶಾಂತಪ್ಪ ಮುಳವಾಡ, ದೇವಪ್ಪ ಮಳಗಿ, ರಮೇಶ ಅಣ್ಣಿಗೇರಿ, ಬಸವಂತಪ್ಪ ಕಡಬಲಕಟ್ಟಿ, ಚನ್ನವೀರ ಮಳಗಿ, ಮಹಾಲಿಂಗಪ್ಪ ಬರಬರಿ, ದಾವಲಸಾಬ ರೋಣದ, ವಿರೂಪಾಕ್ಷಪ್ಪ ರಾಮಗಿರಿ, ಎಸ್.ಎನ್.ಬಳ್ಳಾರಿ, ಫಾರೂಕ್ ಹುಬ್ಬಳ್ಳಿ ಇದ್ದರು. ಬಿ.ಬಿ.ಅಸೂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಪ್ಪ ಅಕ್ಕಿ ನಿರೂಪಿಸಿದರು. ಅಶೋಕ ಗಡಾದ ವಂದಿಸಿದರು. ನೂತನ ವಧು-ವರರಿಗೆ ಶ್ರೀ ಕಲ್ಲಯ್ಯಜ್ಜನವರು, ಅಡ್ನೂರಿನ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts