More

    ಜಾತ್ಯತೀತ, ಧರ್ಮಾತೀತನಾಗಿ ಯೋಚಿಸದವ ಕವಿಯಾಗಲಾರ

    ಚ್.ಡಿ.ಕೋಟೆ: ಜಾತ್ಯತೀತ, ಧರ್ಮಾತೀತನಾಗಿ ಯೋಚಿಸದವರು ಉತ್ತಮ ಕವಿಯಾಗಲಾರ ಎಂದು ಸಾಹಿತಿ ಡಾ. ಜಯಪ್ಪ ಹೊನ್ನಾಳಿ ತಿಳಿಸಿದರು.


    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ದಸರಾ ಕವಿಗೋಷ್ಠಿ ಅದ್ಯಕ್ಷತೆ ವಹಿಸಿ ಮಾತನಾಡಿದರು.

    ಹೃದಯವಂತ ವ್ಯಕ್ತಿಗಳನ್ನು ಸೃಷ್ಟಿ ಮಾಡಲು ಕಾವ್ಯ ಬೇಕು, ಕಾವ್ಯಕ್ಕೆ ಅಂತಹ ಶಕ್ತಿ ಇದೆ. ಕಾವ್ಯ ರಚಿಸುವಾಗ ಭಾಷೆಯನ್ನು ಹಿತಮಿತ, ಮೃದುವಾಗಿ ಬಳಸಿದಾಗ ಉತ್ತಮ ಕಾವ್ಯ ರಚಿಸಬಹುದು. ಪ್ರತಿಯೊಂದು ದೇಶವು ಇಡೀ ಜಗತ್ತನೇ ನಾಶ ಮಾಡುವ ಶಕ್ತಿಯನ್ನು ಹೊಂದಿದ್ದು, ತಮ್ಮ ಆದಾಯದ ಶೇ. 50ರಷ್ಟು ಹಣವನ್ನು ಯುದ್ದಕ್ಕೆ ವ್ಯಯ ಮಾಡುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.


    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಕವಿಗಳು ಇಂದಿನ ವ್ಯವಸ್ಥೆ ಮತ್ತು ಆಗು-ಹೋಗುಗಳ ಬಗ್ಗೆ ಕವಿತೆಗಳಲ್ಲಿ ಬೆಳಕು ಚೆಲ್ಲಬೇಕು. ಈ ಹಿಂದೆ ಕವಿತೆಗಳಿಗೆ ಪ್ರೇಮ ಮತ್ತು ಪ್ರಣಯಗೀತೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಈಗಿನ ಕವಿಗಳು ಸಮಾಜದ ವ್ಯವಸ್ಥೆಯನ್ನು ಸರಿಪಡಿಸುವ ದಿಕ್ಕಿನಲ್ಲಿ ಕವಿತೆಗಳನ್ನು ರಚಿಸುತ್ತಿರುವುದನ್ನು ಕಾಣಬಹುದು. ಎಚ್.ಡಿ.ಕೋಟೆ ತಾಲೂಕು ಪುಣ್ಯ ಭೂಮಿಯಾಗಿದ್ದು, ಇಲ್ಲಿ ನಾಲ್ಕು ಜಲಾಶಯಗಳನ್ನು ನಿರ್ಮಿಸಿ ನಾಡಿಗೆ ಮತ್ತು ಪಕ್ಕದ ರಾಜ್ಯಗಳಿಗೆ ನೀರು ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.


    ಪ್ರಾಂಶುಪಾಲ ಡಾ.ಕೆ.ಪಿ.ಪ್ರಸನ್ನ ಮಾತನಾಡಿ, ಕವಿ ಬಡವನಾಗಿದ್ದಾಗ ಕಾವ್ಯ ಶ್ರೀಮಂತಿಕೆಯಿಂದ ಕೂಡಿತ್ತು, ಕವಿ ಶ್ರೀಮಂತನಾದಾಗ ಕಾವ್ಯ ಬಡವಾಗಿದೆ. ದೇಶದಲ್ಲಿ ಭರತನಿಂದ ಕಾವ್ಯ ಮಿಮಾಂಸೆ ಆರಂಭವಾಗಿ ನಂತರ ಹಳಗನ್ನಡ, ನಡುಗನ್ನಡ, ಹೊಸಗನ್ನಡ, ದಲಿತ ಸಾಹಿತ್ಯ ಮತ್ತು ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ ರಚನೆಯಾಯಿತು. ರನ್ನ, ಜನ್ನ, ಪಂಪ, ಕುಮಾರವ್ಯಾಸ, ಕನಕದಾಸ, ಪುರಂದರದಾಸರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.


    ಕವಿಗೋಷ್ಠಿಯಲ್ಲಿ ಡಾ.ಕಿರಣ್‌ಸಿಡ್ಲೇಹಳ್ಳಿ, ಕೆ.ರಮೇಶ್, ಭಾಸ್ಕರ್ ಕಿತ್ತೂರು, ಎಂ. ಕುಮಾರಿ, ಎಸ್.ಎಸ್. ಮಹದೇವಯ್ಯ, ಕುಮಾರ್, ಬಾಲಸುಬ್ರಹ್ಮಣ್ಯಂ, ಬಾಲಕವಿ ಸುಪ್ರಿತ್ ಕವನ ವಾಚಿಸಿ ಗಮನ ಸೆಳೆದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ, ಪುರಸಭೆ ಸದಸ್ಯ ರಾಜು ವಿಶ್ವಕರ್ಮ, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಜುಕೋಟೆ, ಕಸಾಪ ಗೌರವ ಕಾರ್ಯದರ್ಶಿ ಗಿರೀಶ್‌ಮೂರ್ತಿ, ಪ್ರಾಧ್ಯಾಪಕ ಡಿ. ಕಾಳೇಗೌಡ, ಸೋಮಪ್ಪ, ದಮ್ಮೂರಪ್ಪ, ಪುಟ್ಟರಾಜು, ಜೀವಿಕ ಬಸವರಾಜು, ರವಿ ಆರಾಧ್ಯ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts